ಪ್ರತಾಪ್ ಸಿಂಹ ಕುಶಾಲನಗರ ಪ್ರವೇಶಿಸದಂತೆ ತಡೆಯಲು ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಕಾದು ಕುಳಿತಿದ್ದಾರೆ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಪ್ರತಾಪ್ ಸಿಂಹ ಕುಶಾಲನಗರ ಪ್ರವೇಶಿಸದಂತೆ ತಡೆಯಲು ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಕಾದು ಕುಳಿತಿದ್ದಾರೆ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 16, 2023 | 4:54 PM

2024ರ ಲೋಕಸಭಾ ಚುನಾವಣೆ ಪ್ರತಾಪ್ ಸಿಂಹ ಅವರ ರಾಜಕೀಯ ಬದುಕಿನ ಕೊನೆಯ ಚುನಾವಣೆಯಾಗಲಿದೆ ಎಂದು ಲಕ್ಷ್ಮಣ್ ಹೇಳಿದರು.

ಮೈಸೂರು: ಇದನ್ನು ನಿರೀಕ್ಷಿಸಲಾಗಿತ್ತು. ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಇಂದು ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮೇಲೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M Laxman) ಒಂದು ಪತ್ರಿಕಾ ಗೋಷ್ಟಿ ನಡೆಸಿ ಪ್ರತಾಪ್ ಮಾಡಿದ ಟೀಕೆಗಳಿಗೆ ಉತ್ತರಿಸುವುದು ನಿಶ್ಚಿತವಾಗಿತ್ತು. ಲಕ್ಷ್ಮಣ್ ಇಂದಿನ ಗೋಷ್ಟಿಯಲ್ಲಿ ಸಂಸದರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಅವರು ಹೇಳುವ ಪ್ರಕಾರ 2024ರ ಲೋಕಸಭಾ ಚುನಾವಣೆ (Lok Sabha polls) ಪ್ರತಾಪ್ ಸಿಂಹ ಅವರ ರಾಜಕೀಯ ಬದುಕಿನ ಕೊನೆಯ ಚುನಾವಣೆಯಾಗಲಿದೆ ಮತ್ತು ಅಲ್ಲಿಗೆ ಅವರ ಪೊಲಿಟಿಕಲ್ ಲೈಫ್ ಕೊನೆಗೊಳ್ಳುತ್ತದೆ. ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರೇ ಪ್ರತಾಪ್ ಸೋಲಿಗೆ ಶೇಕಡ 60 ರಷ್ಟು ಕಾರಣವಾಗುತ್ತಾರೆ ಎಂದು ಲಕ್ಷ್ಮಣ್ ಹೇಳಿದರು. ಕೊಡಗಿನ ಬಿಜೆಪಿ ನಾಯಕರಾದ ಕೆಜಿ ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಕುಶಾಲನಗರದ ಬಾಗಿಲಲ್ಲಿ ನಿಂತು ಪ್ರತಾಪ್ ಗಾಗಿ ಕಾಯತ್ತಿದ್ದಾರೆ. ಇವರೇನಾದರೂ ಅಲ್ಲಿ ಕಾಣಿಸಿಕೊಂಡರೆ ಚೆನ್ನಾಗಿ ತದುಕಿ ಕಳಿಸಲು ಅಣಿಯಾಗಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ