ಸಂಸದ ಪ್ರತಾಪ್ ಸಿಂಹರನ್ನು ಮತ್ತೊಮ್ಮೆ ಮಹಾ ಸುಳ್ಳುಗಾರ ಎಂದ ಕೆಪಿಸಿಸಿ ವಕ್ತಾರ ಎಮ್ ಲಕ್ಷ್ಮಣ್
ಆದರೆ, ಡಾಕ್ಯುಮೆಂಟರಿಗೆ ಸಂಬಂಧಿಸಿದಂತೆ ಪ್ರಕರಣವೊಂದು ಸುಪ್ರೀಮ್ ಕೋರ್ಟ್ ನಲ್ಲಿ ವಿಚಾರಣೆ ಹಮತದಲ್ಲಿರುವುದರಿಂದ ವಿಡಿಯೋ ಪ್ರದರ್ಶಿಸುವುದಕ್ಕೆ ಅವಕಾಶವಿಲ್ಲ.
ಮೈಸೂರಲ್ಲಿ ಇಂದು ಸುದ್ದುಗೋಷ್ಟಿಯೊಂದನ್ನು ನಡೆಸಿದ ಕೆಪಿಸಿಸಿ ವಕ್ತಾರ ಎಮ್ ಲಕ್ಷ್ಮಣ್ (M Lakshman) ಅವರು ಮತ್ತೊಮ್ಮೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಮೇಲೆ ದಾಳಿ ನಡೆಸಿ ಅವರೊಬ್ಬ ಅಪ್ಪಟ ಸುಳ್ಳುಗಾರ ಎಂದು ಹೇಳಿದರು. ಅವರು ಅನುದಾನವನ್ನು ಯಾವ್ಯಾವುದಕ್ಕೆ ಉಪಯೋಗಿಸಿದ್ದಾರೆ ಅಂತ ನಮ್ಮಲ್ಲಿ ತಖ್ತೆ ಇದೆ. ಅವರ ಪತ್ನಿ ನಡೆಸುತ್ತಿರುವ ಆಸ್ಪತ್ರೆಯೊಂದಕ್ಕೆ ರೂ. 48 ಲಕ್ಷದ ಅಂಬ್ಯುಲೆನ್ಸ್ (ambulance) ನೀಡಿದ್ದಾರೆ ಎಂದು ವಕ್ತಾರ ಹೇಳಿದರು. ಅವರು ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನವನ್ನು ಯಾವುದಕ್ಕೆಲ್ಲ ಬಳಸಿದ್ದಾರೆ ಅಂತ ಹೇಳುವಂತೆ ಹತ್ತಾರು ಬಾರಿ ಸವಾಲು ಹಾಕಿದರೂ ಅವರು ಪ್ರತಿಕ್ರಿಯಿಸುತ್ತಿಲ್ಲ ಎಂದು ಲಕ್ಷ್ಮಣ್ ಹೇಳಿದರು. ಗುಜರಾತ್ ದಂಗೆ ಬಗ್ಗೆ ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರದ ಎರಡೂ ಎಪಿಸೋಡ್ ಗಳು ತಮ್ಮ ಫೋನಲ್ಲಿವೆ, ಪೋಲಿಸರು ಅನುಮತಿ ನೀಡಿದರೆ ಮಾಧ್ಯಮದವರಿಗೆ ತೋರಿಸುವುದಾಗಿ ಅವರು ಹೇಳಿದರು. ಆದರೆ, ಡಾಕ್ಯುಮೆಂಟರಿಗೆ ಸಂಬಂಧಿಸಿದಂತೆ ಪ್ರಕರಣವೊಂದು ಸುಪ್ರೀಮ್ ಕೋರ್ಟ್ ನಲ್ಲಿ ವಿಚಾರಣೆ ಹಮತದಲ್ಲಿರುವುದರಿಂದ ವಿಡಿಯೋ ಪ್ರದರ್ಶಿಸುವುದಕ್ಕೆ ಅವಕಾಶವಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ