ಬೆಂಗಳೂರು: ಚಾಮುಂಡೇಶ್ವರಿಗೆ (Chamundeshwari) ವಾಪಸ್ಸು ಬನ್ನಿ, ಕಳೆದ ಬಾರಿಯಂತೆ ಆಗದು, ನಿಮ್ಮನ್ನು ಗೆಲ್ಲಿಸಿಯೇ ತೀರುತ್ತೇವೆ ಎಂದು ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ ಸಮಾರು 60 ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯನವರ (Siddaramaiah) ಮುಂದೆ ಎಷ್ಟೇ ಅವಲತ್ತುಕೊಂಡರೂ ವಿರೋಧ ಪಕ್ಷದ ನಾಯಕ ಮಾತ್ರ ತಮ್ಮ ನಿರ್ಧಾರ ಬದಲಿಸಲಿಲ್ಲ. ನೀವು 6 ಬಾರಿ ನನ್ನನ್ನು ಗೆಲ್ಲಿಸಿದ್ದೀರಿ, ಅದಕ್ಕಾಗಿ ಕೃತಜ್ಞತೆಯುಳ್ಳವನಾಗಿದ್ದೇನೆ. ಆದರೆ ಈ ಬಾರಿ ಕೋಲಾರದಿಂದ (Kolar) ಸ್ಪರ್ಧಿಸುವ ನಿರ್ಧಾರ ಮಾಡಿಕೊಂಡಿದ್ದೇನೆ, ನಿರ್ಧಾರವನ್ನು ಬದಲಿಲಾರೆ ಎಂದು ಕಾರ್ಯಕರ್ತರಿಗೆ ಹೇಳಿದರೆಂದು ಮೂಲಗಳಿಂದ ಗೊತ್ತಾಗಿದೆ. ಗಮನಿಸಬೇಕಾದ ಅಂಶವೇನೆಂದರೆ, ಸಿದ್ದರಾಮಯ್ಯ ತಮ್ಮ ನಿರ್ಧಾರ ಪ್ರಕಟಿಸಿದ್ದರೂ ಹೈಕಮಾಂಡ್ ಇದುವರೆಗೆ ಒಪ್ಪಿಗೆ ನೀಡಿಲ್ಲ. ಅವರ ಬೇಡಿಕೆಯನ್ನು ಹೈಕಮಾಂಡ್ ತಿರಸ್ಕರಿಸಲಾರದು ಬಿಡಿ.
ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ