PM Modi France Visit: ಭಾರತದ ಪ್ರಧಾನಿಗೆ ಫ್ರಾನ್ಸ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ, ಮೋದಿಗೆ ಮತ್ತೊಂದು ಗರಿ
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್( Emmanuel Macron)ಅವರು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಫ್ರಾನ್ಸ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್( Grand Cross of the Legion of Honour) ಅನ್ನು ನೀಡಿ ಗೌರವಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್( Emmanuel Macron)ಅವರು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಫ್ರಾನ್ಸ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್( Grand Cross of the Legion of Honour) ಅನ್ನು ನೀಡಿ ಗೌರವಿಸಿದ್ದಾರೆ. ಪ್ರಧಾನಿ ಮೋದಿಯವರಿಗಿಂತ ಮೊದಲು, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಆಗಿನ ವೇಲ್ಸ್ ರಾಜಕುಮಾರ ಕಿಂಗ್ ಚಾರ್ಲ್ಸ್, ಜರ್ಮನಿಯ ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ, ಆಗಿನ ಪ್ರಿನ್ಸ್ ಆಫ್ ವೇಲ್ಸ್, ಜರ್ಮನಿಯ ಮಾಜಿ ಚಾನ್ಸೆಲರ್ ಇತರ ನಾಯಕರು ಈ ಪ್ರಶಸ್ತಿಗೆ ಪಾತ್ರರಾಗಿದ್ದರು.
ಈ ಗೌರವಕ್ಕಾಗಿ ಭಾರತದ ಜನತೆಯ ಪರವಾಗಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಎಲಿಸೀ ಪ್ಯಾಲೇಸ್ನಲ್ಲಿ ನಡೆಯಿತು, ಅಲ್ಲಿ ಮ್ಯಾಕ್ರನ್ ಅವರು ಪ್ರಧಾನಿ ಮೋದಿಯವರಿಗೆ ಖಾಸಗಿ ಔತಣಕೂಟಕ್ಕೆ ಆತಿಥ್ಯ ನೀಡಿದ್ದಾರೆ.
A warm gesture embodying the spirit of ??-?? partnership.
PM @narendramodi conferred with the Grand Cross of the Legion of Honour, the highest award in France by President @EmmanuelMacron. pic.twitter.com/OyiHCHMDX2
— Arindam Bagchi (@MEAIndia) July 13, 2023
ಪ್ರಧಾನಿ ಮೋದಿ ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. ಜೂನ್ನಲ್ಲಿ ಈಜಿಪ್ಟ್ ಪ್ರಧಾನಿ ಮೋದಿಯವರಿಗೆ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು. ಅವರು 2021ರಲ್ಲಿ ಭೂತಾನ್ನಿಂದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ, 2020ರಲ್ಲಿ ಯುಎಸ್ನಿಂದ ಲೀಜನ್ ಆಫ್ ಮೆರಿಟ್, 2019ರಲ್ಲಿ ರಷ್ಯಾದಿಂದ ಆರ್ಡರ್ ಆಫ್ ಸೇಂಟ್ ಆ್ಯಂಡ್ರ್ಯೂ, 2019ರಲ್ಲಿ ಯುಎಇಯಿಂದ ಆರ್ಡರ್ ಆಫ್ ಜಾಯೆದ್ ಮತ್ತು ಆರ್ಡರ್ ಆಫ್ ಸೌದ್ ಅಬ್ದುಲಾಜಿಜ್ ಪಡೆದರು.
ಮತ್ತಷ್ಟು ಓದಿ: PM Modi France visit: ಇಂದಿನಿಂದ ಪ್ರಧಾನಿ ಮೋದಿ 2 ದಿನಗಳ ಫ್ರಾನ್ಸ್ ಪ್ರವಾಸ, ಕಾರ್ಯಕ್ರಮದ ವೇಳಾಪಟ್ಟಿ ಇಲ್ಲಿದೆ
ಎರಡು ದಿನಗಳ ಭೇಟಿಗಾಗಿ ಫ್ರಾನ್ಸ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಪ್ಯಾರಿಸ್‌ನಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಈ ದಿನದಂದು ಫ್ರೆಂಚ್ ಜೆಟ್‌ಗಳೊಂದಿಗೆ ಭಾರತೀಯ ವಾಯುಪಡೆಯ (ಐಎಎಫ್) ಮೂರು ರಫೇಲ್ ಫೈಟರ್ ಜೆಟ್‌ಗಳು ಫ್ಲೈಪಾಸ್ಟ್‌ಗೆ ಸೇರಿಕೊಳ್ಳಲಿವೆ. ಪ್ರಧಾನಿ ಮೋದಿ ಅವರು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ರಕ್ಷಣೆ, ಬಾಹ್ಯಾಕಾಶ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಫ್ರಾನ್ಸ್ ಪ್ರವಾಸದ ನಂತರ ಅಬುಧಾಬಿಗೆ ಪ್ರಯಾಣಿಸಲಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ