UPI in France: ಫ್ರಾನ್ಸ್​ನಲ್ಲಿ ಯುಪಿಐ ಅಳವಡಿಕೆಗೆ ಒಪ್ಪಂದ; ಭಾರತದ ಪಾವತಿ ವ್ಯವಸ್ಥೆ ವಿದೇಶದಲ್ಲಿ ಹೇಗೆ ಕೆಲಸ ಮಾಡುತ್ತೆ?

How UPI Work Abroad: ಸಿಂಗಾಪುರದಲ್ಲಿ ಯುಪಿಐ ಪಾವತಿ ವ್ಯವಸ್ಥೆ ಅಳವಡಿಕೆಯಾದ ಬಳಿಕ ಇದೀಗ ಫ್ರಾನ್ಸ್​ಗೂ ಅದು ಅಡಿ ಇಡುತ್ತಿದೆ. ಈ ಮೂಲಕ ಯೂರೋಪ್ ಖಂಡದ ದೇಶವೊಂದರಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ರುಪಾಯಿ ಓಡಾಟ ಕಾಣಲಿದೆ.

UPI in France: ಫ್ರಾನ್ಸ್​ನಲ್ಲಿ ಯುಪಿಐ ಅಳವಡಿಕೆಗೆ ಒಪ್ಪಂದ; ಭಾರತದ ಪಾವತಿ ವ್ಯವಸ್ಥೆ ವಿದೇಶದಲ್ಲಿ ಹೇಗೆ ಕೆಲಸ ಮಾಡುತ್ತೆ?
ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 14, 2023 | 11:07 AM

ಪ್ಯಾರಿಸ್: ಜಗತ್ತಿನ ಗಮನ ಸೆಳೆದಿರುವ ಭಾರತದ ಪಾವತಿ ವ್ಯವಸ್ಥೆ ಯುಪಿಐ ಅನ್ನು ಇದೀಗ ಫ್ರಾನ್ಸ್​ನಲ್ಲೂ ಬಳಕೆ ಮಾಡಬಹುದು. ಫ್ರಾನ್ಸ್​ನಲ್ಲಿ ರೀಟೇಲ್ ಪಾವತಿಗಳಿಗೆ ಯುಪಿಐ ಅನ್ನು ಬಳಸಲು ಅನುವು ಮಾಡಿಕೊಡಲು ಭಾರತ ಮತ್ತು ಫ್ರಾನ್ಸ್ ಮಧ್ಯೆ ಒಪ್ಪಂದಕ್ಕೆ ಸಹಿಬಿದ್ದಿದೆ. ಇದರೊಂದಿಗೆ ಭಾರತದ ಯುಪಿಐ ವ್ಯವಸ್ಥೆ ಫ್ರಾನ್ಸ್ ಮೂಲಕ ಯೂರೋಪ್ ಖಂಡಕ್ಕೆ ಅಡಿ ಇಟ್ಟಿದೆ. ಯುಪಿಐ ಪಾವತಿ ವ್ಯವಸ್ಥೆಗೆ ಭಾರತ ಮತ್ತು ಫ್ರಾನ್ಸ್ ಮಧ್ಯೆ ಒಪ್ಪಂದ ಆಗಿರುವ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಿಸಿದರು. ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿಗಳು ಜುಲೈ 13ರಂದು ಪ್ಯಾರಿಸ್​ನ ರಿವರ್ ಸೀನೆ ಪ್ರದೇಶದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತಾ ಈ ವಿಚಾರ ತಿಳಿಸಿದರು.

ಇದು ಏಕಾಏಕಿ ನಡೆದ ಬೆಳವಣಿಗೆಯಲ್ಲ. ಭಾರತದ ಯುಪಿಐ ಮತ್ತು ರುಪೇ ಬಳಕೆಗೆ ಅನುಮತಿಸಲು ಫ್ರಾನ್ಸ್​ನ ಲೈರಾ ನೆಟ್ವರ್ಕ್ ಮತ್ತು ಭಾರತದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆಗಳ ಮಧ್ಯೆ ಒಡಂಬಡಿಕೆ (ಎಂಒಯು) ಆಗಿತ್ತು. ಈಗ ಒಪ್ಪಂದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

ಫ್ರಾನ್ಸ್​ನಲ್ಲಿ ಯುಪಿಐ ಹೇಗೆ ಕೆಲಸ ಮಾಡುತ್ತದೆ?

ಈ ಒಪ್ಪಂದವು ಫ್ರಾನ್ಸ್​ಗೆ ಹೋಗುವ ಭಾರತೀಯರಿಗೆ ಅನುಕೂಲವಾಗುತ್ತದೆ. ಫ್ರಾನ್ಸ್​ನ ಪೇಮೆಂಟ್ ವ್ಯವಸ್ಥೆಗೆ ಯುಪಿಐ ಜೋಡಿಕೆಯಾದ ಬಳಿಕ ಅಲ್ಲಿ ಭಾರತೀಯರು ಹಣಪಾವತಿಗೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸುವ ಅವಶ್ಯಕತೆ ಇರುವುದಿಲ್ಲ. ಸ್ಥಳೀಯ ಕ್ಯೂಆರ್ ಕೋಡ್ ಅಥವಾ ಯುಪಿಐ ಐಡಿ ಬಳಸಿ ಹಣ ಪಾವತಿ ಮಾಡಬಹುದು.

ಇದನ್ನೂ ಓದಿPM Modi France Visit: ಭಾರತದ ಪ್ರಧಾನಿಗೆ ಫ್ರಾನ್ಸ್​ನ ಅತ್ಯುನ್ನತ ನಾಗರಿಕ ಪ್ರಶಸ್ತಿ, ಮೋದಿಗೆ ಮತ್ತೊಂದು ಗರಿ

ಕ್ರೆಡಿಟ್ ಕಾರ್ಡ್​ನಲ್ಲಿರುವಂತೆ ಯುಪಿಐಗೂ ಮಾರ್ಕಪ್ ಶುಲ್ಕಗಳು ಇರುತ್ತವಾ?

ಆದರೆ, ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಕೆ ಮಾಡಿದಾಗ ವಿದೇಶೀ ಕರೆನ್ಸಿಗಳಲ್ಲಿ ಹಣಪಾವತಿ ಆಗುತ್ತದೆ. ಇದಕ್ಕೆ ಬ್ಯಾಂಕುಗಳು ಮಾರ್ಕಪ್ ಶುಲ್ಕ ವಿಧಿಸುತ್ತವೆ. ಸಾಮಾನ್ಯವಾಗಿ ಇದು ನಾವು ಪಾವತಿಸುವ ಹಣದ ಮೊತ್ತದ ಶೇ. 0.99ರಿಂದ ಶೇ. 3.5ರಷ್ಟು ಇರುತ್ತದೆ.

ಇದಕ್ಕೆ ತದ್ವಿರುದ್ಧವಾಗಿ ಯುಪಿಐನಲ್ಲಿ ಹಣ ಪಾವತಿ ಮಾಡಿದಾಗ ಅದು ರುಪಾಯಿ ಕರೆನ್ಸಿಯಲ್ಲಿ ವಹಿವಾಟಾಗುತ್ತದೆ. ಇದಕ್ಕೆ ಮಾರ್ಕಪ್ ಫೀಸ್ ಇರುವ ಸಾಧ್ಯತೆ ಇಲ್ಲ. ಆದರೆ, ಯುಪಿಐಗೆ ಮಾರ್ಕಪ್ ಫೀಸ್ ಇದೆಯೋ ಇಲ್ಲವೋ ಎಂಬ ಬಗ್ಗೆ ಸರ್ಕಾರದಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.

ಬ್ಯಾಂಕ್​ಗಳಿಗೂ ಈ ವಿಚಾರದಲ್ಲಿ ಸ್ಪಷ್ಟತೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆಯಾದರೂ ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಮೂಲಕ ನಡೆಸುವ ವಹಿವಾಟಿಗೆ ಹೋಲಿಸಿದರೆ ಯುಪಿಐ ಪಾವತಿಯ ವೆಚ್ಚ ಬಹಳ ಕಡಿಮೆ ಇರುತ್ತದೆ.

ಇದನ್ನೂ ಓದಿPM Modi France visit: ಫ್ರಾನ್ಸ್‌ನೊಂದಿಗಿನ ತಮ್ಮ ಹಳೆಯ ಬಾಂಧವ್ಯದ ಬಗ್ಗೆ ಹಂಚಿಕೊಂಡ ಮೋದಿ, ಇದಕ್ಕೆ ಈ ಕಾರ್ಡ್​ ಸಾಕ್ಷಿ

ಫೆಬ್ರುವರಿ ತಿಂಗಳಲ್ಲಿ ಭಾರತ ಮತ್ತು ಸಿಂಗಾಪುರ ಮಧ್ಯೆ ಇದೇ ರೀತಿ ಯುಪಿಐ ಒಪ್ಪಂದವಾಗಿದೆ. ಇದರಿಂದ ಎರಡೂ ದೇಶಗಳ ಜನರ ನಡುವಿನ ಹಣಕಾಸು ವಹಿವಾಟು (ರೆಮಿಟೆನ್ಸ್) ವೆಚ್ಚ ಶೇ. 10ರಷ್ಟು ಕಡಿಮೆ ಆಗಿದೆ. ಸಿಂಗಾಪುರದಲ್ಲಿ ಬಹಳ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಅಲ್ಲಿಂದ ಭಾರತದ ತಮ್ಮ ಸಂಬಂಧಿಗಳಿಗೆ ಹಣ ಕಳುಹಿಸಲು ಅಧಿಕ ಶುಲ್ಕ ತೆರುವುದು ಯುಪಿಐನಿಂದಾಗಿ ತಪ್ಪಿದೆ. ಇತ್ತೀಚಿನ ಕೆಲ ವರ್ಷಗಳಿಂದ ಫ್ರಾನ್ಸ್ ದೇಶಕ್ಕೂ ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಹೋಗಿದ್ದಾರೆ. ಹೀಗಾಗಿ, ಯುಪಿಐ ಪಾವತಿ ವ್ಯವಸ್ಥೆ ಬಹಳ ಪ್ರಯೋಜನವಾಗಿ ಪರಿಣಮಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ