QR Code ಸ್ಕ್ಯಾನ್ ಮಾಡಿ ಪ್ರತಿಭಟನೆ ದಾಖಲಿಸಿ; ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಅಭಿಪ್ರಾಯ ಸಂಗ್ರಹಕ್ಕೆ ಮುಂಬೈ ಮಸೀದಿಯ ವಿನೂತನ ಕ್ರಮ
ಈ QR ಕೋಡ್‌ಗಳನ್ನು ಸ್ಕ್ಯಾನ್ ಮಾಡಿದಾಗ ಅದು AIMPLB ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಜನರು UCC ವಿರುದ್ಧ ತಮ್ಮ ಪ್ರತಿಭಟನೆಯನ್ನು ಇಲ್ಲಿ ಬರೆಯುವ ಮೂಲಕ ಮತ್ತು ಇಮೇಲ್ ಮೂಲಕ ಕಳುಹಿಸಬಹುದು.
ಮುಂಬೈ: ಏಕರೂಪ ನಾಗರಿಕ ಸಂಹಿತೆ (UCC) ವಿರುದ್ಧದ ತಮ್ಮ ಪ್ರತಿಭಟನೆಗೆ ಬೆಂಬಲ ಪಡೆಯುವ ಕ್ರಮವಾಗಿ ಮಲಾಡ್‌ನ ಸ್ಥಳೀಯ ಮಸೀದಿಯೊಂದು ಯುಸಿಸಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ಕ್ಯೂಆರ್ ಕೋಡ್‌ಗಳನ್ನು (QR codes) ಹಾಕಿದೆ. ಪ್ರದೇಶದ ಕುರಾರ್ ಗ್ರಾಮದ ಹದ್ ನೂರಾನಿ ಮಸೀದಿಯ ಹೊರಗೆ ಅಂಟಿಸಲಾದ ಈ ಕೋಡ್‌ಗಳನ್ನು ಜನರು ಸ್ಕ್ಯಾನ್ ಮಾಡಿ, ತಮ್ಮ ಪ್ರತಿಕ್ರಿಯೆ ಮತ್ತು ಅಭಿಪ್ರಾಯ ದಾಖಲಿಸಿ ಅದನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೊಂದಿಗೆ (AIMPLB) ಹಂಚಿಕೊಳ್ಳಬಹುದು ಎಂದು ಹೇಳಿದೆ. ಈ ಕ್ಯೂಆರ್ ಕೋಡ್‌ಗಳನ್ನು ಇಲ್ಲಿನ ಸ್ಥಳೀಯರು ವಾಟ್ಸಾಪ್ ಸ್ಟೇಟಸ್ ಆಗಿ ಬಳಸುವ ಮೂಲಕ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
ಟಿವಿ9ಗೆ ಲಭ್ಯವಾದ ವಿಡಿಯೊ ಪ್ರಕಾರ ಒಬ್ಬ ವ್ಯಕ್ತಿ ಈ ಕ್ಯೂಆರ್ ಕೋಡ್‌ಗಳ ಮೂಲಕ ಯುಸಿಸಿ ವಿರುದ್ಧ ತಮ್ಮ ಪ್ರತಿಭಟನೆಯನ್ನು ನೋಂದಾಯಿಸುವ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸುವುದನ್ನು ಕಾಣಬಹುದು. ಈ QR ಕೋಡ್‌ಗಳನ್ನು ಸ್ಕ್ಯಾನ್ ಮಾಡಿದಾಗ ಅದು AIMPLB ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಜನರು UCC ವಿರುದ್ಧ ತಮ್ಮ ಪ್ರತಿಭಟನೆಯನ್ನು ಇಲ್ಲಿ ಬರೆಯುವ ಮೂಲಕ ಮತ್ತು ಇಮೇಲ್ ಮೂಲಕ ಕಳುಹಿಸಬಹುದು.
ಕಳೆದ ತಿಂಗಳು ಭೋಪಾಲ್‌ನಲ್ಲಿ ನಡೆದ ಸಭೆಯೊಂದರಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ತರಲು ತಮ್ಮ ಸರ್ಕಾರದ ದೃಢತೆಯನ್ನು ಪುನರುಚ್ಚರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದರು. ಉತ್ತರಾಖಂಡವು ಮುಂದಿನ ದಿನಗಳಲ್ಲಿ ತನ್ನದೇ ಆದ ಏಕರೂಪ ನಾಗರಿಕ ಸಂಹಿತೆಯನ್ನು ಹೊರತರಲಿದೆ.
ಮೂಲಗಳ ಪ್ರಕಾರ, ಮಂಗಳವಾರ ಕಾನೂನು ಆಯೋಗವು ಇಲ್ಲಿಯವರೆಗೆ ಸರಿಸುಮಾರು 46 ಲಕ್ಷ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ. ಮುಂಬರುವ ದಿನಗಳಲ್ಲಿ, ಆಯೋಗವು ಕೆಲವು ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ವೈಯಕ್ತಿಕ ವಿಚಾರಣೆಗೆ ಆಹ್ವಾನಿಸುವ ನಿರೀಕ್ಷೆಯಿದೆ. ಸದ್ಯಕ್ಕೆ, ಮೂಲಗಳು ಹೇಳಿರುವಂತೆ ಈಗಾಗಲೇ ಹಲವಾರು ಆಮಂತ್ರಣ ಪತ್ರಗಳನ್ನು ರವಾನಿಸಲಾಗಿದೆ.
ಇದನ್ನೂ ಓದಿ: Bihar Lathi Charge: ಬಿಹಾರದಲ್ಲಿ ಪ್ರತಿಭಟನಾ ನಿರತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್: ಬಿಜೆಪಿ ಮುಖಂಡ ಸಾವು
ಜೂನ್ 14 ರಂದು, ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆ (UCC) ಕುರಿತು ಹೊಸ ಸಮಾಲೋಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ರಾಜಕೀಯವಾಗಿ ಸೂಕ್ಷ್ಮವಾಗಿರುವ ಈ ವಿಷಯದಲ್ಲಿ ಅಭಿಪ್ರಾಯ ಸಂಗ್ರಹಿಸಲು ಅವರು ಸಾರ್ವಜನಿಕ ಮತ್ತು ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳು ಸೇರಿದಂತೆ ವಿವಿಧ ಮಧ್ಯಸ್ಥಗಾರರನ್ನು ತಲುಪಿದ್ದಾರೆ. ಈ ಹಿಂದೆ, 2018ರ ಆಗಸ್ಟ್‌ನಲ್ಲಿ ಮುಕ್ತಾಯಗೊಂಡ 21ನೇ ಕಾನೂನು ಆಯೋಗವು ಈಗಾಗಲೇ ಸಮಸ್ಯೆಯನ್ನು ಪರಿಶೀಲಿಸಿದ್ದು ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಎಲ್ಲಾ ಮಧ್ಯಸ್ಥಗಾರರಿಂದ ಅಭಿಪ್ರಾಯವನ್ನು ಕೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Thu, 13 July 23