ಬೆಂಗಳೂರಿನಲ್ಲಿ ಕುಖ್ಯಾತ ಡ್ರಗ್ ಪೆಡ್ಲರ್​ಗಳ ಬಂಧನ

|

Updated on: Dec 29, 2020 | 12:13 PM

ಪ್ರೀತಿಪಾಲ್ ರೈ ಅಲಿಯಾಸ್ ಪೃಥ್ವಿ ಹಾಗೂ ಖಲಂಧರ್ ಎಂಬುವವರನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿ, ಸುಮಾರು 214.5 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಕುಖ್ಯಾತ ಡ್ರಗ್ ಪೆಡ್ಲರ್​ಗಳ ಬಂಧನ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸುದ್ದಗುಂಟೆಪಾಳ್ಯದ ಮುನಿ ಚನ್ನಪ್ಪ ಕಲ್ಯಾಣಮಂಟಪ ಬಳಿ ಕುಖ್ಯಾತ ಡ್ರಗ್ ಪೆಡ್ಲರ್​ಗಳನ್ನು ಪೊಲೀಸರು ಸೆರೆ ಹಿಡಿದು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ರೈ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಕೇಸ್​ಗಳಿವೆ
ಪ್ರೀತಿಪಾಲ್ ರೈ ಅಲಿಯಾಸ್ ಪೃಥ್ವಿ ಹಾಗೂ ಖಲಂಧರ್ ಎಂಬುವವರನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿ, ಸುಮಾರು 214.5 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಪ್ರೀತಿಪಾಲ್ ರೈ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ಕೇಸ್​ಗಳು ದಾಖಲಾಗಿದ್ದು, ಎಂಟು ಪ್ರಕರಣದಲ್ಲೂ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ಸದ್ಯ ಭಾರಿ ಪ್ರಮಾಣದಲ್ಲಿ ಗಾಂಜಾ ಸಾಗಾಟ ಹಾಗೂ ಮಾರಾಟ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಹಪಾಠಿಗಳಿಗೆ ಮಾದಕ ವಸ್ತು ಮಾರಾಟ ಮಾಡ್ತಿದ್ದ MCA ವಿದ್ಯಾರ್ಥಿ ಸೇರಿ ಐವರ ಬಂಧನ

Published On - 11:53 am, Tue, 29 December 20