ಅಣ್ಣ ಶಿವಕುಮಾರ್ ಜೊತೆಜೊತೆಗೆ ತಮ್ಮ ಡಿಕೆ ಸುರೇಶ್ ಸಹ ಲಾಕ್?

ದೆಹಲಿ: ಕಾಂಗ್ರೆಸ್​ ಪಕ್ಷದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಕರ್ನಾಟಕ ಬಿಟ್ಟು ದೆಹಲಿಯಲ್ಲಿ ಇ.ಡಿ ಅಂಗಳ ತಲುಪಿ ಇಂದಿಗೆ ಸರಿಯಾಗಿ ಒಂದು ತಿಂಗಳಾಗಿದೆ. ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯವು ಡಿ.ಕೆ.ಶಿವಕುಮಾರ್ ಅವರ ಸೋದರ ಡಿ.ಕೆ.ಸುರೇಶ್​ಗೂ ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದೆ. ಕಳೆದೊಂದು ತಿಂಗಳಿಂದ ದಿಲ್ಲಿಯಲ್ಲಿ ಅಣ್ಣನಿಗೆ ನೆರಳಾಗಿ ನಿಂತಿರುವ ಸುರೇಶ್​ಗೂ ಈಗ ಇ.ಡಿ ಕಾಟ ಶುರುವಾಗಿದೆ. ಈ ಮಧ್ಯೆ ತಿಹಾರ್ ಜೈಲಿನಲ್ಲಿರುವ ಶಿವಕುಮಾರ್ ಅವರ ಜಾಮೀನು ಅರ್ಜಿ​ ವಿಚಾರಣೆಯನ್ನು ದೆಹಲಿ ಕೋರ್ಟ್ ಮುಂದೂಡಿದ್ದು, ಅಕ್ಟೋಬರ್ 14ರವರೆಗೂ ಡಿಕೆಶಿಗೆ ಜೈಲೇ […]

ಅಣ್ಣ ಶಿವಕುಮಾರ್ ಜೊತೆಜೊತೆಗೆ ತಮ್ಮ ಡಿಕೆ ಸುರೇಶ್ ಸಹ ಲಾಕ್?
ಸಾಧು ಶ್ರೀನಾಥ್​

Updated on: Sep 30, 2019 | 3:06 PM

ದೆಹಲಿ: ಕಾಂಗ್ರೆಸ್​ ಪಕ್ಷದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಕರ್ನಾಟಕ ಬಿಟ್ಟು ದೆಹಲಿಯಲ್ಲಿ ಇ.ಡಿ ಅಂಗಳ ತಲುಪಿ ಇಂದಿಗೆ ಸರಿಯಾಗಿ ಒಂದು ತಿಂಗಳಾಗಿದೆ. ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯವು ಡಿ.ಕೆ.ಶಿವಕುಮಾರ್ ಅವರ ಸೋದರ ಡಿ.ಕೆ.ಸುರೇಶ್​ಗೂ ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದೆ. ಕಳೆದೊಂದು ತಿಂಗಳಿಂದ ದಿಲ್ಲಿಯಲ್ಲಿ ಅಣ್ಣನಿಗೆ ನೆರಳಾಗಿ ನಿಂತಿರುವ ಸುರೇಶ್​ಗೂ ಈಗ ಇ.ಡಿ ಕಾಟ ಶುರುವಾಗಿದೆ. ಈ ಮಧ್ಯೆ ತಿಹಾರ್ ಜೈಲಿನಲ್ಲಿರುವ ಶಿವಕುಮಾರ್ ಅವರ ಜಾಮೀನು ಅರ್ಜಿ​ ವಿಚಾರಣೆಯನ್ನು ದೆಹಲಿ ಕೋರ್ಟ್ ಮುಂದೂಡಿದ್ದು, ಅಕ್ಟೋಬರ್ 14ರವರೆಗೂ ಡಿಕೆಶಿಗೆ ಜೈಲೇ ಗತಿಯಾಗಿದೆ.

ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್​ಗೆ ಇ.ಡಿಯಿಂದ ನೋಟಿಸ್ ಬಂದಿದ್ದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಲೋಕಸಭೆ ಚುನಾವಣೆ ವೇಳೆ ಅಫಿಡವಿಟ್​ನಲ್ಲಿ 338 ಕೋಟಿ ರೂ. ಆಸ್ತಿ ​ ಘೋಷಿಸಿಕೊಂಡಿದ್ದರು. ತಂದೆ ಕೆಂಪೇಗೌಡ ಆಸ್ತಿ ಸಹ ಸುರೇಶ್ ಹೆಸರಿಗೆ ವರ್ಗಾವಣೆಯಾಗಿದೆ. ಶಿವಕುಮಾರ್ ಪುತ್ರಿ ಐಶ್ವರ್ಯಾಗೆ ಸುರೇಶ್​ ಸಾಲ ನೀಡಿದ್ದಾರೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸುರೇಶ್​ಗೆ ನೋಟಿಸ್ ನೀಡಿದೆ.

Published On - 11:51 am, Mon, 30 September 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us