Belagavi Session: ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ ನೀಡುವ ವಿಧೇಯಕ ಅಂಗೀಕಾರ

ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸೋಮವಾರ ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಅಧಿನಿಯಮ, 2012 ವಿಧೇಯಕ ಅಂಗೀಕಾರಗೊಂಡಿದೆ.

Belagavi Session: ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ ನೀಡುವ ವಿಧೇಯಕ ಅಂಗೀಕಾರ
ಸಾಂದರ್ಭಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Dec 11, 2023 | 2:43 PM

ಬೆಳಗಾವಿ, ಡಿಸೆಂಬರ್​​ 11: ಬೆಳಗಾವಿ ಅಧಿವೇಶನ (Belagavi Session) ಪ್ರಾರಂಭವಾಗಿ ಇಂದಿಗೆ (ಡಿ.11) ಒಂದು ವಾರ ಕಳೆದಿದೆ. ಸಾಲು ಪ್ರತಿಭಟನೆಗಳಿಂದ ಚಳಿಗಾಲದ ಅಧಿವೇಶನದ (Winter Session) ಬಿಸಿ ಏರಿದೆ. ಸದ್ದು-ಗದ್ದಲದ ನಡುವೆ ಅಧಿವೇಶನದಲ್ಲಿ ವಿವಿಧ ವಿಧೇಯಕಗಳು ಅಂಗೀಕಾರಗೊಂಡಿವೆ. ಅದರಲ್ಲಿ ಒಂದು ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು (Karnataka Medical Course) ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಅಧಿನಿಯಮ, 2012 ವಿಧೇಯಕ ಅಂಗೀಕಾರಗೊಂಡಿದೆ.

ಈ ವಿಧೇಯಕದ ಮುಖಾಂತರ ಕಡ್ಡಾಯ ಸೇವಾ ತರಬೇತಿ ಅಧಿನಿಯಮ 3, 4 ಮತ್ತು 5ಕ್ಕೆ ತಿದ್ದುಪಡಿ ತರಲಾಗಿದೆ. ಇನ್ನುಮುಂದೆ ರಾಜ್ಯ ಸರ್ಕಾರವು ನಿಗದಿಪಡಿಸಿದಂತೆ ಅಸ್ತಿತ್ವದಲ್ಲಿರುವ ವೈದ್ಯಕೀಯ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಗೆ ವೈದ್ಯರನ್ನು ಕೌನ್ಸಿಲಿಂಗ್‌ ಮೂಲಕ ನೇಮಕ ಮಾಡಿಕೊಳ್ಳುವುದು. ಕಡ್ಡಾಯವಾಗಿ ಸ್ಥಳ ನಿಯುಕ್ತಿಗೊಳಿಸುವುದನ್ನು ನಿರ್ಬಂಧಿಸಲು ಮತ್ತು ಸ್ಟೈಫಂಡ್‌ ಅನ್ನು ಸರ್ಕಾರ ನಿರ್ಧರಿಸಲಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ ನೀಡಲಾಗಿದೆ. ಈ ವಿಧೇಯಕ 2023ರ ನವಂಬರ್ 8 ರಿಂದ ಜಾರಿಗೆ ಬರುವಂತೆ ಸೂಚನೆ ನೀಡಲಾಗಿದೆ.

ವಿಧೇಯಕದಲ್ಲಿ ಏನಿದೆ?

ಈ ಅಧಿನಿಯಮವನ್ನು ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಅಧಿನಿಯಮ, 2023 ಎಂದು ಕರೆಯಬೇಕು. ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆಗೆ” ಎಂಬ ಪದಗಳ ಮೊದಲು ‘ರಾಜ್ಯ ಸರ್ಕಾರವು ನಿಗದಿಪಡಿಸಿರುವ ಅಸ್ತಿತ್ವದಲ್ಲಿರುವ ಖಾಲಿಹುದ್ದೆಗಳಲ್ಲಿ ಎಂಬ ಪದಗಳನ್ನು ಸೇರಿಸಬೇಕು. ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿಯತ ಸೇವೆಗಾಗಿ ಆಯ್ಕೆಯಾದರೆ, ಅಂಥ ಅಭ್ಯರ್ಥಿಗಳಿ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ ನೀಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳಲ್ಲಿ ಸಾಮಾನ್ಯ ಕರ್ತವ್ಯ ನಿರತ ವೈದ್ಯರ ಒಟ್ಟು ಕನಿಷ್ಠ ಸಂಬಳಕ್ಕಿಂತ ನೂರು ರೂಪಾಯಿಗಳಷ್ಟು ಕಡಿಮೆಗೆ ಸಮನಾಗಿರುವ ಎಂಬ ಪದಗಳಿಗೆ ಬದಲಾಗಿ ರಾಜ್ಯ ಸರ್ಕಾರವು ನಿಗದಿಪಡಿಸಿದಂತೆ ಎಂಬ ಪದಗಳನ್ನು ಬಳಸಬೇಕು. ಕಡ್ಡಾಯ ಗ್ರಾಮೀಣ ಸೇವೆಗೆ ಒಳಪಡದಿರುವಂಥ ಎಂಬ ಪದಗಳ ಬದಲಾಗಿ, ಕೆಲಸ ಮಾಡಲು ನಿರಾಕರಿಸುವ ಅಥವಾ ರಾಜ್ಯ ಸರ್ಕಾರವು ನಿಗದಿಪಡಿಸುವಬಹದಾದಂಥ ಷರತ್ತುಗಳನ್ನು ಪಾಲಿಸದಿರುವ ಎಂಬ ಪದಗಳನ್ನು ಸೇರಿಸಬೇಕು.

ಇದನ್ನೂ ಓದಿ: ಬೆಳಗಾವಿ ಅಧಿವೇಶನ 2023: ಸರ್ಕಾರಿ ಹುದ್ದೆಗಳ ನೇಮಕಾತಿ ಅಕ್ರಮ ತಡೆಗಟ್ಟಲು ಸಾರ್ವಜನಿಕ ಪರೀಕ್ಷೆ ವಿಧೇಯಕ ಮಂಡನೆ

ಒಂದು ವರ್ಷದ ಕಡ್ಡಾಯ ಸೇವೆಗೆ ಎಂಬ ಪದಗಳಿಗೆ ಮೊದಲು ರಾಜ್ಯ ಸರ್ಕಾರವು ನಿಗದಿಪಡಿಸಲಾದಂತೆ ಅಸ್ತಿತ್ವದಲ್ಲಿರುವ ಖಾಲಿಹುದ್ದೆಗಳಲ್ಲಿ ಎಂಬ ಪದಗಳನ್ನು ಸೇರಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷತಜ್ಞರ ಒಟ್ಟು ಕನಿಷ್ಠ ಸಂಬಳಕ್ಕಿಂತ ನೂರು ರೂಪಾಯಿಗಳನ್ನು ಕಡಿಮೆಗೆ ಸಮನಾಗಿರುವ ನಿಯಮಿಸಬಹುದಾದ ಎಂಬ ಪದಗಳಿಗೆ ಬದಲಾಗಿ ರಾಜ್ಯ ಸರ್ಕಾರವು ನಿಗದಿಪಡಿಸಿದಂತೆ ಎಂಬ ಪದಗಳನ್ನು ಬಳಸಬೇಕು. ಸ್ನಾತಕೋತ್ತರ ಪದವಿಯ ನಂತರ ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿಯತ ಸೇವೆಗಾಗಿ ಆಯ್ಕೆಯಾದರೆ ಅಂಥ ಅಭ್ಯರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿಸಲಾಗಿದೆ.

ಒಂದು ವರ್ಷದ ಕಡ್ಡಾಯ ಸೇವೆಗೆ ಎಂಬ ಪದಗಳಿಗೆ ಮೊದಲು ರಾಜ್ಯ ಸರ್ಕಾರವು ನಿಗದಿಪಡಿಸಿದಂತೆ ಅಸ್ತಿತ್ವದಲ್ಲಿರುವ ಖಾಲಿಹುದ್ದೆಗಳಲ್ಲಿ ಎಂಬ ಪದಗಳನ್ನು ಸೇರಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ವಿಶೇಷತಜ್ಞರ ಒಟ್ಟು ಕನಿಷ್ಠ ಸಂಬಳಕ್ಕಿಂತ ನೂರು ರೂಪಾಯಿಗಳನ್ನು ಕಡಿಮೆಗೆ ಸಮನಾಗಿರುವ ನಿಯಮಿಸಬಹುದಾದ ಎಂಬ ಪದಗಳಿಗೆ ಬದಲಾಗಿ ರಾಜ್ಯ ಸರ್ಕಾರವು ನಿಗದಿಪಡಿಸಿದಂತೆ ಎಂಬ ಪದಗಳನ್ನು ಬಳಸಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us