ಕೊಪ್ಪಳ: ಜಿಲ್ಲೆಯು ಭತ್ತದ ಕಣಜ ಎಂದು ಹೆಸರುವಾಸಿಯಾದ ಪ್ರದೇಶ. ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಬರೀ ಭತ್ತ ಕಾಣುತ್ತದೆ. ಇಲ್ಲಿಂದ ದೇಶ ವಿದೇಶಕ್ಕೆ ಭತ್ತ ರಫ್ತು ಆಗುತ್ತದೆ. ಇದೀಗ ಈ ಪ್ರದೇಶದಲ್ಲಿ ಕೂಲಿಗಳ ಕೊರತೆಯಾಗಿದೆ. ಕ್ರಿಮಿನಾಶಕ ಸಿಂಪಡಣೆ ಮಾಡಲು ಕೂಲಿಗಳು ಸಿಗದೆ ರೈತರು ಡ್ರೋನ್ ಮೊರೆ ಹೋಗಿದ್ದಾರೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಭತ್ತಕ್ಕೆ ರೋಗಭಾದೆ ಇರುವುದರಿಂದ ಭತ್ತಕ್ಕೆ ಕ್ರೀಮಿನಾಶಕ ಅವಶ್ಯಕ. ಹೀಗಾಗಿ ಜಿಲ್ಲೆಯ ಗಂಗಾವತಿ ರೈತರು ಕೂಲಿ ಆಳುಗಳು ಸಿಗದೆ ಈ ಬಾರಿ ಭತ್ತಕ್ಕೆ ಕ್ರೀಮಿನಾಶಕ ಸಿಂಪಡಣೆ ಮಾಡಲು ಡ್ರೋನ್ ಬಳಕೆ ಮಾಡುತ್ತಿದ್ದಾರೆ.
ಈ ಬಾರಿ ಕ್ರೀಮಿನಾಶಕ ಸಿಂಪಡಣೆ ಮಾಡಲು ಕೂಲಿ ಕಾರ್ಮಿಕರ ಕೊರತೆಯಾಗಿದೆ. ಹೀಗಾಗಿ ತಮಿಳುನಾಡಿನಿಂದ ಡ್ರೋನ್ ತಂದು ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದಾರೆ. ಎಕರೆಗೆ 600 ರಿಂದ 800 ಹಣ ಕೊಟ್ಟು ರೈತರು ಪ್ರಾಯೋಗಿಕವಾಗಿ ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಎಕರೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಒಂದು ದಿನ ಬೇಕು. ಆದರೆ ಡ್ರೋನ್ ಮೂಲಕ 6-7 ನಿಮಿಷ ಬೇಕಾಗುತ್ತದೆ. ಡ್ರೋನ್ ಮೂಲಕ ಹಣವೂ ಉಳಿಯತ್ತದೆ, ಜೊತೆಗೆ ಸಮಯವೂ ಉಳಿಯತ್ತದೆ ಎಂಬುದು ರೈತರ ಅಭಿಪ್ರಾಯ.
ಕೆಲಸ ಸರಳ
ಈಗಾಗಲೇ ತಮಿಳುನಾಡಿನಲ್ಲಿ ಇಂತಹ ಪ್ರಯತ್ನ ಯಶಸ್ವಿಯಾಗಿದೆ. ಕೊಪ್ಪಳದಲ್ಲಿ ಪ್ರಾಯೋಗಿಕವಾಗಿ ಡ್ರೋನ್ ಮೂಲಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಸುಮಾರು 8 ಲಕ್ಷ ರೂ. ಡ್ರೋನ್ಗೆ ಜಿ.ಪಿ.ಎಸ್. ಅಳವಡಿಕೆ ಮಾಡಲಾಗಿದೆ. ಮೊಬೈಲ್ ಮೂಲಕ ಆಪರೇಟಿಂಗ್ ಮಾಡುವುದರಿಂದ ಜಿ.ಪಿ.ಎಸ್ ಮೂಲಕ ಎಷ್ಟು ಎಕರೆ ಸಿಂಪಡಣೆ ಮಾಡಲಾಗಿದೆ ಎನ್ನುವುದನ್ನು ತಿಳಿಯಬಹುದು. ಈ ಡ್ರೋನ್ಗೆ ನೀರು ಮತ್ತು ಕ್ರಿಮಿನಾಶಕ ಸೇರಿ 11 ಲೀಟರ್ ಕ್ಯಾನ್ ಇದ್ದು ಐದರಿಂದ ಆರು ನಿಮಿಷದ ಅವಧಿಯಲ್ಲಿ ಒಂದು ಎಕರೆ ಜಮೀನು ಸಿಂಪಡಣೆ ಮಾಡಬಹುದು. ಜೊತೆಗೆ ಎರಡು ಬ್ಯಾಟರಿ ಮೂಲಕ ಡ್ರೋನ್ ಆಪರೇಟ್ ಆಗತ್ತದೆ. ಕೂಲಿ ಕಾರ್ಮಿಕರಿಗೆ 350 ಕೂಲಿ ಕೊಟ್ಟು ಊಟ ಕೊಡಬೇಕು. ಆದರೆ ಇದು ಸರಳವಾಗಿ ಕೆಲಸ ಮಾಡುತ್ತಿದೆ. ಅಲ್ಲದೇ ಕ್ರಿಮಿನಾಶಕವೂ ನೇರವಾಗಿ ಬೆಳೆಗೆ ಕಡಿಮೆ ಹೋಗುತ್ತದೆ ಎಂದು ತಿಳಿದುಬಂದಿದೆ.
ಡ್ರೋನ್ ಮೂಲಕ ಸಿಂಪಡಣೆ ಮಾಡುವುದರಿಂದ ಪರಿಸರದ ಮೇಲೆ ಪರಿಣಾಮ ಆಗುತ್ತೆ ಎನ್ನುವ ಮಾತುಗಳು ಕೇಳಿ ಬಂದಿವೆ. ಸದ್ಯ ರೈತರು ಹಣ ಸಮಯ ಉಳಿಸಲು ಡ್ರೋನ್ ಮೊರೆ ಹೋಗಿದ್ದಾರೆ. ಪ್ರಾಯೋಗಿಕವಾಗಿ ಡ್ರೋನ್ ಮೂಲಕ ಔಷಧಿ ಸಿಂಪಡಣೆ ಮಾಡಲಾಗುತ್ತಿದ್ದು, ಇದು ಪರಿಸರದ ಮೇಲೆ ಹೇಗೆ ಪರಿಣಾಮ ಬೀರತ್ತದೆ ಎನ್ನುವುದು ಕೃಷಿ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಬೇಕಿದೆ.
ಇದನ್ನೂ ಓದಿ: Yadgir Jatre | ದುರ್ಗಾದೇವಿ ಪಲ್ಲಕ್ಕಿ ಉತ್ಸವ: ಹೊರ ರಾಜ್ಯದ ಭಕ್ತರೇ ಹೆಚ್ಚು, ದೇವಿಗೆ ಕೋಳಿ-ಹುಂಜಗಳನ್ನು ಅರ್ಪಿಸುತ್ತಾರೆ
ಇದನ್ನೂ ಓದಿ: ರೈತ ಹೋರಾಟಕ್ಕಾಗಿ ಒಂದು ಬೆಳೆ ತ್ಯಾಗ ಮಾಡಲು ಸಿದ್ಧರಾಗಿ; ರೈತ ನಾಯಕ ರಾಕೇಶ್ ಟಿಕಾಯತ್ ಕರೆ
Published On - 5:42 pm, Fri, 19 February 21