ಚಿತ್ರದುರ್ಗ: ಬೆಳ್ಳಂ ಬೆಳಗ್ಗೆಯಿಂದಲೇ ಚಿತ್ರ ದುರ್ಗದ ಹಲವು ನಗರಗಳಲ್ಲಿ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಕೆಲವು ಕಡೆ ರಸ್ತೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಅಂತೆಯೇ ಕೊಡಗಿನಲ್ಲೂ ವರುಣನ ಆರ್ಭಟ ಹೆಚ್ಚಿದ್ದು, ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯ ಪ್ರಶಾಂತ ನಗರ, ಗುಮಾಸ್ತ ಕಾಲೋನಿ ಸೇರಿದಂತೆ ವಿವಿಧೆಡೆ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರಿಗೆ ಸಂಚಾರ ಮಾರ್ಗ ಸ್ಥಗಿತಗೊಂಡಿದೆ. ಹಾಗೂ ಕಂಚೀಪುರ, ಬಾಲೇನಹಳ್ಳಿಯಲ್ಲೂ ಗಾಳಿ ಸಹಿತ ಭಾರಿ ಮಳೆಗೆ ರೈತರಾದ ಬಸವರಾಜಪ್ಪ, ರಮೇಶಪ್ಪರಿಗೆ ಸೇರಿದ ಲಕ್ಷಾಂತರ ರೂ. ಬಾಳೆ, ಅಡಕೆ ಬೆಳೆಗಳು ಹಾನಿಗೊಂಡಿದೆ.
ದೊಡ್ಡಯ್ಯನಪಾಳ್ಯದ ನಿವಾಸಿಯಾಗಿರುವ ದಕ್ಷಿಣಮೂರ್ತಿಯವರಿಗೆ ಸೇರಿದ್ದ ಸುಮಾರು 50 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಹಾನಿಗೊಂಡಿದೆ. ಬೆಳೆ ಹಾನಿಯಿಂದ ದಕ್ಷಿಣಮೂರ್ತಿಯವರಿಗೆ 15 ಲಕ್ಷ ರೂ. ನಷ್ಟವಾಗಿದೆ. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಮನವಿ ಸಲ್ಲಿಸಿದ್ದಾರೆ.
ಕೊಡಗಿನಲ್ಲೂ ವರುಣನ ಆರ್ಭಟ
ಜಿಲ್ಲೆಯಲ್ಲಿ ಇಂದು ಧಿಡೀರನೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು ಶನಿವಾರಸಂತೆ, ಅಂಕನಹಳ್ಳಿ ಸುತ್ತಮುತ್ತ ಮಳೆಯಾಗಿದೆ. ಆಲಿಕಲ್ಲು ಮಳೆ ಹಿನ್ನೆಲೆ ಕಾಫಿ ಸೇರಿದಂತೆ ಕಾಳು ಮೆಣಸು ಸೇರಿ ಲಕ್ಷಾಂತರ ಮೌಲ್ಯದ ಬೆಳೆಗೆ ಹಾನಿಯುಂಟಾಗಿದೆ.
ಇದನ್ನೂ ಓದಿ: Karnataka Weather: ಕರ್ನಾಟಕದಲ್ಲಿ ಮೋಡ ಕವಿದ ವಾತಾವರಣ, ಹಲವೆಡೆ ಹಗುರ ಮಳೆಯಾಗುವ ಸಾಧ್ಯತೆ