Yadgir Jatre | ದುರ್ಗಾದೇವಿ ಪಲ್ಲಕ್ಕಿ ಉತ್ಸವ: ಹೊರ ರಾಜ್ಯದ ಭಕ್ತರೇ ಹೆಚ್ಚು, ದೇವಿಗೆ ಕೋಳಿ-ಹುಂಜಗಳನ್ನು ಅರ್ಪಿಸುತ್ತಾರೆ

Yadgir Jatre | ದುರ್ಗಾದೇವಿ ಪಲ್ಲಕ್ಕಿ ಉತ್ಸವ: ಹೊರ ರಾಜ್ಯದ ಭಕ್ತರೇ ಹೆಚ್ಚು, ದೇವಿಗೆ ಕೋಳಿ-ಹುಂಜಗಳನ್ನು ಅರ್ಪಿಸುತ್ತಾರೆ
ದುರ್ಗದೇವಿ ಪಲ್ಲಕ್ಕಿ ಉತ್ಸವ

ಗಡ್ಡೆ ದುರ್ಗಾದೇವಿಗೆ ಬಂದಿದ್ದ ನೂರಾರು ಭಕ್ತರು ಕೋಳಿ ಮತ್ತು ಹುಂಜಗಳನ್ನ ಪಲ್ಲಕಿ ಮೇಲೆ ಎಸೆದು ಹರಕೆಯನ್ನು ತೀರಿಸುತ್ತಾರೆ. ಇನ್ನು ದೇವಿ ಬಳಿ ಏನೇ ಬೇಡಿಕೊಂಡರು ಅದು ಈಡೇರುತ್ತದೆ. ದೇವಿಗೆ ಕೋಳಿ ಮತ್ತು ಹುಂಜಗಳು ಇಷ್ಟ. ಇದರಿಂದ ಭಕ್ತರು ದೇವಿಗೆ ಕೋಳಿ ಮತ್ತು ಹುಂಜಗಳನ್ನು ಅರ್ಪಿಸುತ್ತಾರೆ.

sandhya thejappa

| Edited By: Ayesha Banu

Feb 19, 2021 | 12:22 PM

ಯಾದಗಿರಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯ ವಡಗೇರ ತಾಲೂಕಿನ ಗೋನಾಳ ಗ್ರಾಮದ ಗಡ್ಡೆ ದುರ್ಗದೇವಿ ಪಲ್ಲಿಕಿ ಉತ್ಸವ ಅದ್ದೂರಿಯಾಗಿ ಜರುಗಿತ್ತು. ಇನ್ನು ಬೆಳಗ್ಗೆ ದೇವಿ ಪಲ್ಲಕಿಯನ್ನ ಕೃಷ್ಣ ನದಿಗೆ ಗಂಗಾಸ್ನಾನಕ್ಕೆ ಮೆರವಣಿಗೆ ಮೂಲಕ ತೆಗುದುಕೊಂಡು ಹೋಗಲಾಗುತ್ತದೆ. ಗಂಗಸ್ನಾನ ಬಳಿಕ ದೇವಿಯ ಪಲ್ಲಕಿಯನ್ನು ದೇವಸ್ಥಾನಕ್ಕೆ ತರುವಾಗ ಅದ್ದೂರಿಯಾಗಿ ಮೆರವಣಿಗೆ ಮಾಡಲಾಗುತ್ತದೆ. ಈ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಇನ್ನು ದೇವಸ್ಥಾನ ಮುಂದೆ ಕೆಂಡವನ್ನು ಕಾಯಿಸಲಾಗಿರುತ್ತದೆ. ಕೆಂಡದ ಮೇಲೆ ಪೂಜಾರಿ ಹಾಗೂ ಪಲ್ಲಕಿಯ ಸಮೇತ ದೇವಾಲಯವನ್ನು ಪ್ರವೇಶ ಮಾಡಲಾಗುತ್ತದೆ.

ಕೋಳಿ ಹುಂಜಗಳ ಜಾತ್ರೆಯೆಂದೇ ಪ್ರಸಿದ್ಧ ಗಡ್ಡೆ ದುರ್ಗಾದೇವಿಗೆ ಬಂದಿದ್ದ ನೂರಾರು ಭಕ್ತರು ಕೋಳಿ ಮತ್ತು ಹುಂಜಗಳನ್ನ ಪಲ್ಲಕಿ ಮೇಲೆ ಎಸೆದು ಹರಕೆಯನ್ನು ತೀರಿಸುತ್ತಾರೆ. ಇನ್ನು ದೇವಿ ಬಳಿ ಏನೇ ಬೇಡಿಕೊಂಡರು ಅದು ಈಡೇರುತ್ತದೆ. ದೇವಿಗೆ ಕೋಳಿ ಮತ್ತು ಹುಂಜಗಳು ಇಷ್ಟ. ಇದರಿಂದ ಭಕ್ತರು ದೇವಿಗೆ ಕೋಳಿ ಮತ್ತು ಹುಂಜಗಳನ್ನು ಅರ್ಪಿಸುತ್ತಾರೆ. ಶಕ್ತಿ ದೇವತೆ ಗಡ್ಡೆ ದುರ್ಗಾದೇವಿ ದರ್ಶನ ಪಡೆಯಲು ರಾಜ್ಯ ಸೇರಿದಂತೆ ನೆರೆ ರಾಜ್ಯದ ನೂರಾರು ಭಕ್ತರು ಬರುತ್ತಾರೆ.

ಇನ್ನು ಗಡ್ಡೆ ದುರ್ಗಾದೇವಿ ಜಾತ್ರೆ ಜಿಲ್ಲೆಯಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಈ ಜಾತ್ರೆ ಪಲ್ಲಕಿ ಮೆರವಣಿಗೆ ವೇಳೆ ಸಾವಿರಾರು ಮಂದಿ ಭಕ್ತರು ಬಂದು ಸೇರುತ್ತಾರೆ. ಇನ್ನು ಪಲ್ಲಕ್ಕಿ ಕೃಷ್ಣ ನದಿಗೆ ಗಂಗಾ ಸ್ನಾನಕ್ಕೆ ತೆಗೆದುಕೊಂಡು ಹೋಗಿ ವಾಪಸ್ ಬರುವಾಗ ದೇವಿ ದೇಗುಲದ ಮುಂದೆ ಕೆಂಡವನ್ನ ಹಾಕಿರುತ್ತಾರೆ. ಪಲ್ಲಕ್ಕಿ ಹೊತ್ತು ಸಾಗುವವರು ಹಾಗೂ ಭಕ್ತರು ಈ ಕೆಂಡವನ್ನ ತುಳಿದು ದಾಟಬೇಕು. ಪಲ್ಲಕ್ಕಿ ಹಿಂದೆ ಕೆಂಡ ತುಳಿದು ಸಾಗಿದರೆ ಒಳ್ಳೆದಾಗುತ್ತೆ ಅಂತಾ ಭಕ್ತರ ಅಚಲವಾದ ನಂಬಿಕೆಯಾಗಿದೆ.

ಜಾತ್ರೆಯಲ್ಲಿ ಕೆಂಡ ಸೇವೆ

ಕೋಳಿ ಮತ್ತು ಹುಂಜಗಳನ್ನ ಪಲ್ಲಕ್ಕಿ ಮೇಲೆ ಎಸೆದು ಹರಕೆಯನ್ನು ತೀರಿಸುತ್ತಾರೆ.

ಹೊರ ರಾಜ್ಯದ ಭಕ್ತರೆ ಹೆಚ್ಚು ಗಡ್ಡೆ ದುರ್ಗಾದೇವಿ ಜಾತ್ರೆ ವೇಳೆ ರಾಜ್ಯ ಸೇರಿದಂತೆ ಅನ್ಯ ರಾಜ್ಯದ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಅದರಲ್ಲಿ ವಿಶೇಷವಾಗಿ ಜಿಲ್ಲೆಯ ಗಡಿ ಹಂಚಿಕೊಂಡಿರುವ ತೆಲಂಗಾಣದಿಂದ ಸಾಕಷ್ಟು ಭಕ್ತರು ಬರುತ್ತಾರೆ. ಅದೇ ರೀತಿ ಆಂಧ್ರ ಮತ್ತು ಮಹಾರಾಷ್ಟ್ರದಿಂದಲೂ ಸಾಕಷ್ಟು ಮಂದಿ ಭಕ್ತರು ಬರುತ್ತಾರೆ.

ಗಡ್ಡೆ ದುರ್ಗಾದೇವಿ ನಂಬಿದ ಭಕ್ತರ ಕಷ್ಟಗಳನ್ನ ದೂರ ಮಾಡಿ ಜೀವನದಲ್ಲಿ ಸುಖ ಶಾಂತಿಯನ್ನ ನೀಡುತ್ತಾಳೆ. ನಾನು ಹತ್ತಾರು ವರ್ಷಗಳಿಂದ ಜಾತ್ರಾ ಮಹೋತ್ಸವದಲ್ಲಿ ಬಂದು ಭಾಗವಹಿಸಿದ್ದೇನೆ. ಇನ್ನು ರಾಜ್ಯ ಸೇರಿದಂತೆ ಅನ್ಯ ರಾಜ್ಯದಿಂದ ಸಾಕಷ್ಟು ಮಂದಿ ಭಕ್ತರು ಬರುತ್ತಾರೆ ಎಂದು ದೇವಿ ಭಕ್ತ ಸಾಯಿಬಣ್ಣ ಹೇಳಿದರು.

ಪಲ್ಲಕ್ಕಿ ಮೇಲೆ ಹುಂಜವನ್ನು ಎಸೆಯಲು ತಯಾರಾಗಿರುವ ಭಕ್ತ

ಉತ್ಸವದ ವೇಳೆ ಭಾಗಿಯಾಗಿರುವ ಸಾವಿರಾರು ಭಕ್ತರು

ಭಕ್ತರು ಬೇಡಿಕೊಂಡು ಹರಕೆಯನ್ನ ತಾಯಿ ಈಡೇರಿಸುತ್ತಾಳೆ. ಇನ್ನು ಸಾಕಷ್ಟು ಭಕ್ತರ ಅಮ್ಮನ ಬಳಿ ಹುಂಜ ಹಾಗೂ ಕೋಳಿ ಅರ್ಪಿಸುವುದಾಗಿ ಬೇಡಿಕೊಂಡಿರುತ್ತಾರೆ. ಹೀಗಾಗಿ ಸಾಕಷ್ಟು ಮಂದಿ ಭಕ್ತರು ಹರಕೆಯನ್ನ ತೀರಿಸುತ್ತಾರೆ ಎಂದು ದೇವಿ ಅರ್ಚಕ ಮಹದೇವ ತಿಳಿಸಿದರು.

ಇದನ್ನೂ ಓದಿ: Rajamarthanda Trailer: ಅಪ್ಪನ ರಾಜಮಾರ್ತಾಂಡ ಟ್ರೇಲರ್ ರಿಲೀಸ್ ಮಾಡಿದ ಮುದ್ದು ಕಂದ ಜೂ.ಚಿರು

ಇದನ್ನೂ ಓದಿ: Pogaru: ಇಂದಿನಿಂದ ಶುರುವಾಗುತ್ತೆ ಪೊಗರು ಅಸಲಿ ಹವಾ.. ಕನ್ನಡ, ತೆಲುಗು, ತಮಿಳಿನಲ್ಲಿ ಚಿತ್ರ ತೆರೆ

Follow us on

Related Stories

Most Read Stories

Click on your DTH Provider to Add TV9 Kannada