ಅಪಘಾತದಲ್ಲಿ ಗಾಯಗೊಂಡಿದ್ದವರ ನೆರವಿಗೆ ಧಾವಿಸಿದ ಮಾಜಿ ಸಂಸದ ಹುಕ್ಕೇರಿ: ಆಸ್ಪತ್ರೆಗೆ ದಾಖಲಿಸಿ ಧನ ಸಹಾಯ

|

Updated on: Jan 08, 2021 | 5:21 PM

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಹಾಗೂ ಇಬ್ಬರು ಮಕ್ಕಳನ್ನು ಮಾಜಿ ಸಂಸದ ಪ್ರಕಾಶ್​ ಹುಕ್ಕೇರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಇದಲ್ಲದೆ, ಮೂವರು ಗಾಯಾಳುಗಳಿಗೆ ಧನ ಸಹಾಯ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದವರ ನೆರವಿಗೆ ಧಾವಿಸಿದ ಮಾಜಿ ಸಂಸದ ಹುಕ್ಕೇರಿ: ಆಸ್ಪತ್ರೆಗೆ ದಾಖಲಿಸಿ ಧನ ಸಹಾಯ
ಅಪಘಾತದಲ್ಲಿ ಗಾಯಗೊಂಡಿದ್ದವರ ನೆರವಿಗೆ ಬಂದ ಮಾಜಿ ಸಂಸದ ಹುಕ್ಕೇರಿ
Follow us on

ಬೆಳಗಾವಿ: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಹಾಗೂ ಇಬ್ಬರು ಮಕ್ಕಳನ್ನು ಮಾಜಿ ಸಂಸದ ಪ್ರಕಾಶ್​ ಹುಕ್ಕೇರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಇದಲ್ಲದೆ, ಮೂವರು ಗಾಯಾಳುಗಳಿಗೆ ಧನ ಸಹಾಯ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮಾಜಿ ಸಂಸದ ಜಿಲ್ಲೆಯ ಹೀರೇಬಾಗೇವಾಡಿ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಗಾಯಾಳುಗಳು ನರಳುತ್ತಿರುವುದನ್ನು ಕಂಡವರು. ತಕ್ಷಣ ಇವರ ನೆರವಿಗೆ ಧಾವಿಸಿದ ಪ್ರಕಾಶ್​ ಹುಕ್ಕೇರಿ ತಮ್ಮ ಕಾರು ನಿಲ್ಲಿಸಿ ಆ್ಯಂಬುಲೆನ್ಸ್ ಕರೆಯಿಸಿದರು. ಬಳಿಕ ಮೂವರನ್ನು ಆಸ್ಪತ್ರೆಗೆ ದಾಖಲಿಸಿದರು. ಅಷ್ಟೇ ಅಲ್ಲ, ಗಾಯಾಳುಗಳ ಚಿಕಿತ್ಸೆಗೆಗಾಗಿ $10 ಸಾವಿರ ವೈಯಕ್ತಿಕ ಸಹಾಯ ಸಹ ಮಾಡಿದರು.

ಯಾದಗಿರಿ: ಬೈಕ್​-ಲಾರಿ ಡಿಕ್ಕಿ, ಬೈಕ್​ ಸವಾರ ಸ್ಥಳದಲ್ಲೇ ಸಾವು

Published On - 5:20 pm, Fri, 8 January 21