ವರದಿ ಬರುವ ಮುನ್ನವೆ ಮೃತದೇಹ ಹಸ್ತಾಂತರ; ಹಾವೇರಿ ಜನರಲ್ಲಿ ಶುರುವಾದ ಆತಂಕ

|

Updated on: May 09, 2021 | 9:03 AM

ಉಸಿರಾಟದ ಸಮಸ್ಯೆಯಿಂದ ಮೇ 5 ರಂದು ಗದಗ ಜಿಮ್ಸ್ ಆಸ್ಪತ್ರೆಗೆ ಸವಣೂರು ತಾಲೂಕಿನ ಯಲವಿಗಿ ಗ್ರಾಮದ ವ್ಯಕ್ತಿ ದಾಖಲಾಗಿದ್ದರು. ಅದೆ ದಿನ ಆಸ್ಪತ್ರೆ ಸಿಬ್ಬಂದಿ ವ್ಯಕ್ತಿಯ ಸ್ವ್ಯಾಬ್ ಪಡೆದುಕೊಂಡಿತ್ತು. ನಿನ್ನೆ (ಮೇ 8) ಬೆಳಿಗ್ಗೆ ಆರು ಗಂಟೆ ವೇಳೆಗೆ ಚಿಕಿತ್ಸೆ ಫಲಿಸದೆ ಐವತ್ತೈದು ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ವರದಿ ಬರುವ ಮುನ್ನವೆ ಮೃತದೇಹ ಹಸ್ತಾಂತರ; ಹಾವೇರಿ ಜನರಲ್ಲಿ ಶುರುವಾದ ಆತಂಕ
ಕೊರೊನಾ ವೈರಸ್
Follow us on

ಹಾವೇರಿ: ಆಸ್ಪತ್ರೆ ಸಿಬ್ಬಂದಿಯ ಎಡವಟ್ಟುಗಳಿಂದ ಆಗುವ ಸಮಸ್ಯೆಗಳು ಒಂದೆರೆಡಾ? ಆಸ್ಪತ್ರೆ ಸಿಬ್ಬಂದಿ ಮಾಡುವ ತಪ್ಪಿಗೆ ಜನರು ಪರದಾಡುವಂತಾಗುತ್ತದೆ. ಜೊತೆಗೆ ಆತಂಕಕ್ಕೂ ಕಾರಣವಾಗುತ್ತದೆ. ಆಸ್ಪತ್ರೆಯೊಂದರ ಸಿಬ್ಬಂದಿ ಕೊರೊನಾ ವರದಿ ಬರುವ ಮುನ್ನವೇ ವ್ಯಕ್ತಿಯೊಬ್ಬರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದೆ. ಹಸ್ತಾಂತರ ಮಾಡಿದ ಬಳಿಕ ಮೃತಪಟ್ಟ ವ್ಯಕ್ತಿಗೆ ಕೊರೊನಾ ಸೋಂಕಿರುವು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ಗ್ರಾಮದ ಜನರಲ್ಲಿ ಆತಂಕ ಶುರುವಾಗಿದೆ.

ಉಸಿರಾಟದ ಸಮಸ್ಯೆಯಿಂದ ಮೇ 5 ರಂದು ಗದಗ ಜಿಮ್ಸ್ ಆಸ್ಪತ್ರೆಗೆ ಸವಣೂರು ತಾಲೂಕಿನ ಯಲವಿಗಿ ಗ್ರಾಮದ ವ್ಯಕ್ತಿ ದಾಖಲಾಗಿದ್ದರು. ಅದೆ ದಿನ ಆಸ್ಪತ್ರೆ ಸಿಬ್ಬಂದಿ ವ್ಯಕ್ತಿಯ ಸ್ವ್ಯಾಬ್ ಪಡೆದುಕೊಂಡಿತ್ತು. ನಿನ್ನೆ (ಮೇ 8) ಬೆಳಿಗ್ಗೆ ಆರು ಗಂಟೆ ವೇಳೆಗೆ ಚಿಕಿತ್ಸೆ ಫಲಿಸದೆ ಐವತ್ತೈದು ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಮೃತನ ಕೊವಿಡ್ ವರದಿ ಬರುವ ಮುನ್ನವೆ ಮೃತನ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಿದೆ. ಅಂತಿಮ ದರ್ಶನದ ಬಳಿಕ ಮೃತ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಗ್ರಾಮದ ಜನರಿಗೆ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದೆ.

ಕುಟುಂಬಸ್ಥರು ಮೃತದೇಹವನ್ನು ಗ್ರಾಮಕ್ಕೆ ತಂದು ಶುಚಿಗೊಳಿಸಿ, ಸಿಂಗರಿಸಿ ಅಂತಿಮ ದರ್ಶನಕ್ಕೆ ಇಟ್ಟಾಗ ಮೃತ ವ್ಯಕ್ತಿಗೆ ಕೊವಿಡ್ ವರದಿ ಪಾಸಿಟಿವ್ ಬಂದಿದೆ. ವರದಿ ಬಂದ ನಂತರ ಆತಂಕಕ್ಕೆ ಒಳಗಾದ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಮೃತನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಇದನ್ನೂ ಓದಿ

ಕೊವಿಡ್ ಕೇರ್ ಸೆಂಟರ್​ನಲ್ಲಿ ಮೂಲಸೌಕರ್ಯ ಕೊರತೆ; ತುಮಕೂರಿನಲ್ಲಿ ಸೋಂಕಿತರ ಆಕ್ರೋಶ

ರೆಮ್ಡಿಸಿವಿರ್ ಖರೀದಿಸುವಾಗ ಇರಲಿ ಎಚ್ಚರ, ದೇಶಾದ್ಯಂತ ನಡೀತಿದೆ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ದಂಧೆ

(Gims Hospital staff handed over dead body to family before the Corona report arrived in haveri)