ಅಬ್ಕಾರಿ ಸಚಿವ ನಾಗೇಶ್ ಕೊನೆಗೂ ಗುಡ್​ ನ್ಯೂಸ್​ ಕೊಟ್ಟೇಬಿಟ್ರು!

|

Updated on: May 09, 2020 | 4:29 PM

ಬೆಂಗಳೂರು: ಕೊನೆಗೂ ಕುಡುಕರ ಮನವಿ ಸರ್ಕಾರದ ಕಿವಿಗೆ ಬಿದ್ದಿದೆ. ಎಲ್ಲಾ ಕಡೆ ಮದ್ಯ ಮಾರಾಟಕ್ಕೆ ಅಬಕಾರಿ ಸಚಿವ ಹೆಚ್​.ನಾಗೇಶ್ ಅಸ್ತು ಅಂದಿದ್ದಾರೆ. ಆದರೆ ಕಂಡಿಷನ್ಸ್ ಅಪ್ಲೈ ಅಂದಿದ್ದಾರೆ ಏನದು. Stock Clearance Sale! ಎಣ್ಣೆ ಪ್ರಿಯರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ನಾಳೆಯಿಂದ ರಾಜ್ಯಾದ್ಯಂತ ಪಬ್, ಕ್ಲಬ್, ಎಲ್ಲಾ ಮದ್ಯದಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಕಡ್ಡಾಯವಾಗಿ ಎಂಆರ್​ಪಿ ಬೆಲೆಯಲ್ಲೇ ಮಾರಬೇಕು. ಎಂಆರ್​ಪಿಗಿಂತ ಹೆಚ್ಚಿನ ದರಕ್ಕೆ ಮಾರಿದರೆ ಲೈಸೆನ್ಸ್ ರದ್ದು ಮಾಡಲಾಗುತ್ತೆ. ಬೆಳಗ್ಗೆ 9 […]

ಅಬ್ಕಾರಿ ಸಚಿವ ನಾಗೇಶ್ ಕೊನೆಗೂ ಗುಡ್​ ನ್ಯೂಸ್​ ಕೊಟ್ಟೇಬಿಟ್ರು!
Follow us on

ಬೆಂಗಳೂರು: ಕೊನೆಗೂ ಕುಡುಕರ ಮನವಿ ಸರ್ಕಾರದ ಕಿವಿಗೆ ಬಿದ್ದಿದೆ. ಎಲ್ಲಾ ಕಡೆ ಮದ್ಯ ಮಾರಾಟಕ್ಕೆ ಅಬಕಾರಿ ಸಚಿವ ಹೆಚ್​.ನಾಗೇಶ್ ಅಸ್ತು ಅಂದಿದ್ದಾರೆ. ಆದರೆ ಕಂಡಿಷನ್ಸ್ ಅಪ್ಲೈ ಅಂದಿದ್ದಾರೆ ಏನದು.

Stock Clearance Sale!
ಎಣ್ಣೆ ಪ್ರಿಯರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ನಾಳೆಯಿಂದ ರಾಜ್ಯಾದ್ಯಂತ ಪಬ್, ಕ್ಲಬ್, ಎಲ್ಲಾ ಮದ್ಯದಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಕಡ್ಡಾಯವಾಗಿ ಎಂಆರ್​ಪಿ ಬೆಲೆಯಲ್ಲೇ ಮಾರಬೇಕು. ಎಂಆರ್​ಪಿಗಿಂತ ಹೆಚ್ಚಿನ ದರಕ್ಕೆ ಮಾರಿದರೆ ಲೈಸೆನ್ಸ್ ರದ್ದು ಮಾಡಲಾಗುತ್ತೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಮಾರಾಟ ಮಾಡಬೇಕು ಎಂದು ಕೆಲವು ಕಂಡೀಷನ್ಸ್​ಗಳನ್ನು ಹಾಕಲಾಗಿದೆ.

ಮದ್ಯ ಮಾರಾಟದಿಂದ ಸಂಗ್ರಹವಾದ ತೆರಿಗೆ ಬಗ್ಗೆ ಮಾತನಾಡಿರುವ ಸಚಿವರು ಲಾಕ್​ಡೌನ್ ಬಳಿಕ ಮದ್ಯದ ಅಂಗಡಿ ಓಪನ್ ಆದ ನಂತರ ಐದನೇ ದಿನಕ್ಕೆ ಬರೊಬ್ಬರಿ 122.16 ಕೋಟಿ ತೆರಿಗೆ ಸಂಗ್ರಹ ಆಗಿದೆ. ಸರ್ಕಾರಕ್ಕೆ ಒಟ್ಟು 767 ಕೋಟಿ ಆದಾಯ ಬಂದಿದೆ. ಏಳು ದಿನಕ್ಕೆ ಸಾವಿರ ಕೋಟಿ ರೀಚ್ ಆಗುವ ಸಾದ್ಯತೆ ಇದೆ ಎಂದು ತಿಳಿಸಿದ್ದಾರೆ.

ವರ್ಷಕ್ಕೆ ಅಬಕಾರಿ ಆದಾಯ ಸರ್ಕಾರಕ್ಕೆ 25 ಸಾವಿರ ಕೋಟಿ ಬರಲಿದೆ. ಈ ವರ್ಷ 2500 ಕೋಟಿ ಹೆಚ್ಚಾಗಲಿದೆ. 22500 ಕೋಟಿ ಆದಾಯಕ್ಕೆ 2500 ಕೋಟಿ ಹೆಚ್ಚಳ ಆಗಲಿದೆ. ಬಾರ್, ಕ್ಲಬ್ ‌ಮತ್ತು ಲಾಡ್ಜ್​ಗಳಲ್ಲೂ ಪಾರ್ಸೆಲ್​ಗೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅನುಮತಿ ನೀಡಿದ್ದಾರೆ. ಸುಪ್ರೀಂ ಕೋರ್ಟು ನೀಡಿದ ಆದೇಶ ನೋಡಿಲ್ಲ. ಆನ್ ಲೈನ್ ಮಾರಾಟಕ್ಕೆ ಅವಕಾಶ ನೀಡಿದ್ರೆ ತಪ್ಪಿಲ್ಲ. ಮೊದಲಿಂದಲೂ ಆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ರು.

ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಯಲ್ಲಿ ಮದ್ಯ ಮಾರಾಟ:
ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಮಾರ್ಗಸೂಚಿ ಅನುಸಾರ ಷರತ್ತುಗಳೊಂದಿಗೆ ಮಾರಾಟಕ್ಕೆ ಅಬಕಾರಿ ಇಲಾಖೆ ನಾಳೆಯಿಂದ ಮೇ 17ರ ವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ.

Published On - 2:41 pm, Fri, 8 May 20