ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್!

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಸಂಸದ ಸ್ಥಾನ ಅಬಾಧಿತವಾಗಿದ್ದು, ವಕೀಲ ದೇವರಾಜ್ ಗೌಡ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ದೇವರಾಜ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಅರ್ಜಿಯಲ್ಲಿ ಹಲವು ಲೋಪದೋಷ ತೋರಿಸಿತ್ತು. ಆದರೆ ನಿಗದಿತ ಕಾಲಮಿತಿಯಲ್ಲಿ ದೇವರಾಜ್ ಆಕ್ಷೇಪಣೆ ಸರಿಪಡಿಸಿರಲಿಲ್ಲ. ಈ ಬಗ್ಗೆ ಪ್ರಜ್ವಲ್ ಪರ ವಕೀಲ ಕೇಶವ ರೆಡ್ಡಿ ಪ್ರತಿವಾದ ಮಂಡಿಸಿದ್ದರು. ತಕರಾರು ಅರ್ಜಿ ಕ್ರಮಬದ್ದವಾಗಿಲ್ಲವೆಂದು ಪ್ರತಿವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ತಕರಾರು ಅರ್ಜಿ […]

ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್!

Updated on: Jan 31, 2020 | 3:04 PM

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಸಂಸದ ಸ್ಥಾನ ಅಬಾಧಿತವಾಗಿದ್ದು, ವಕೀಲ ದೇವರಾಜ್ ಗೌಡ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.

ದೇವರಾಜ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಅರ್ಜಿಯಲ್ಲಿ ಹಲವು ಲೋಪದೋಷ ತೋರಿಸಿತ್ತು. ಆದರೆ ನಿಗದಿತ ಕಾಲಮಿತಿಯಲ್ಲಿ ದೇವರಾಜ್ ಆಕ್ಷೇಪಣೆ ಸರಿಪಡಿಸಿರಲಿಲ್ಲ. ಈ ಬಗ್ಗೆ ಪ್ರಜ್ವಲ್ ಪರ ವಕೀಲ ಕೇಶವ ರೆಡ್ಡಿ ಪ್ರತಿವಾದ ಮಂಡಿಸಿದ್ದರು. ತಕರಾರು ಅರ್ಜಿ ಕ್ರಮಬದ್ದವಾಗಿಲ್ಲವೆಂದು ಪ್ರತಿವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ತಕರಾರು ಅರ್ಜಿ ವಜಾಗೊಳಿಸಿ, ನ್ಯಾ.ಜಾನ್ ಮೈಕೆಲ್ ಕುನ್ಹಾ ಅವರ ಪೀಠ ಮಹತ್ವದ ಆದೇಶ ನೀಡಿದೆ. ಈ ಹಿಂದೆ ಎ ಮಂಜು ಅರ್ಜಿ ಕೂಡಾ ವಜಾಗೊಂಡಿತ್ತು.

Published On - 3:04 pm, Fri, 31 January 20