ಮಸೀದಿಗಳ ಕಳ್ಳ ಅಂದರ್ ಆದ! ಅಷ್ಟಕ್ಕೂ ಅವ ಆ ಸ್ಥಳವನ್ನೇ ಟಾರ್ಗೆಟ್ ಮಾಡ್ತಿದ್ದ ಯಾಕೆ? ಖತರ್ನಾಕ್ ಕಳ್ಳನ ಅಸಲಿಯತ್ತೇನು? ಈ ಸ್ಟೋರಿ ನೋಡಿ

|

Updated on: Jun 06, 2023 | 9:14 PM

ಮಸೀದಿಗಳ ಕಳ್ಳ ಅಂದರ್ ಆದ! ಅಷ್ಟಕ್ಕೂ ಅವ ಆ ಒಂದು ಸ್ಥಳವನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದ? ಖತರ್ನಾಕ್ ಕಳ್ಳನ ಚಾಲಾಕಿ ಕೃತ್ಯದ ಹಿಂದಿನ ಅಸಲಿಯತ್ತೇನು? ಈ ಸ್ಟೋರಿ ನೋಡಿ.

ಮಸೀದಿಗಳ ಕಳ್ಳ ಅಂದರ್ ಆದ! ಅಷ್ಟಕ್ಕೂ ಅವ ಆ ಸ್ಥಳವನ್ನೇ ಟಾರ್ಗೆಟ್ ಮಾಡ್ತಿದ್ದ ಯಾಕೆ? ಖತರ್ನಾಕ್ ಕಳ್ಳನ ಅಸಲಿಯತ್ತೇನು? ಈ ಸ್ಟೋರಿ ನೋಡಿ
ಮಸೀದಿಗಳ ಕಳ್ಳ ಅಂದರ್ ಆದ!
Follow us on

ಆತ ಖತರ್ನಾಕ್ ಕಳ್ಳ..ಹಗಲು ಹೊತ್ತು ಹೊಂಚು ಹಾಕೋದು..ರಾತ್ರಿಯಾಗುತ್ತಲೆ ಸದ್ದಿಲ್ಲದೆ ಬಂದು ಬೀಗ ಮುರಿದು ಒಳ ನುಗ್ಗೋದು, ಕೈಗೆ ಸಿಕ್ಕಿದ್ದನ್ನ ದೋಚಿ ಎಸ್ಕೇಪ್ ಆಗೋದು, ಕದ್ದ ಮಾಲನ್ನ ಬಂದಷ್ಟು ಬೆಲೆಗೆ ಮಾರಾಟ ಮಾಡಿ ಮತ್ತೊಂದು ಕಳ್ಳತನಕ್ಕೆ ಸಜ್ಜಾಗೋದು… ಒಮ್ಮೆ ಕೊಡಗು, ಇನ್ನೊಮ್ಮೆ ಮೈಸೂರು, ಮಗದೊಮ್ಮೆ ಮಂಡ್ಯ, ಇನ್ನೊಮ್ಮೆ ಹಾಸನ ಹೀಗೆ ಐದಾರು ಜಿಲ್ಲೆಗಳ್ಳಿ ಸಂಚಾರ ಮಾಡಿ ಹತ್ತಾರು ಬಾರಿ ಲಕ್ಷ ಲಕ್ಷ ಬೆಲೆಬಾಳುವ ವಸ್ತುಗಳನ್ನ ಕದ್ದರೂ ಆತನ ಟಾರ್ಗೆಟ್ ಮಾತ್ರ ಒಂದೇ ಸ್ಥಳ. ಬೇರೆಲ್ಲೂ ಕಳ್ಳತನ ಮಾಡೋದಿಲ್ಲ, ಬೇರಾವುದೇ ಕಡೆಗೂ ಆತನ ಕಣ್ಣು ಬೀಳೋದಿಲ್ಲ. ಅಷ್ಟಕ್ಕೂ ಆತನ ಟಾರ್ಗೆಟ್ ಆಗಿದ್ದ ಆ ಒಂದು ಸ್ಥಳ ಯಾವುದು? ಆತ ಅದೊಂದು ಸ್ಥಳವನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದದ್ದು ಯಾಕೆ? ಖತರ್ನಾಕ್ ಕಳ್ಳನ ಚಾಲಾಕಿ ಕೃತ್ಯದ ಹಿಂದಿನ ಅಸಲಿಯತ್ತೇನು? ಈ ಸ್ಟೋರಿ ನೋಡಿ.

ಹೊಂಚು ಹಾಕಿ ಕಾದು ಕುಳಿತಿರೋ ಖತರ್ನಾಕ್ ಆದ್ಮಿ… ಸದ್ದಿಲ್ಲದೆ ಬಾಗಿಲ ಬಳಿ ಬಂದು ಚಿಲಕ ಮುರಿದು ಒಳ ಎಂಟ್ರಿ .. ಹುಂಡಿ ಕದಿಯಲು ಯತ್ನ.. ಹಣ ಸಿಗೋದಿಲ್ಲ ಎಂದು ಗೊತ್ತಾಗುಲ್ಲೆ ಕಚೇರಿ ಬೀಗ ಮುರಿದು ಕೈಗೆ ಸಿಕ್ಕಿದ್ದು ತುಂಬಿಕೊಂಡು ಎಸ್ಕೇಪ್… ಹೌದು ರಾತ್ರಿ ವೇಳೆಯಲ್ಲಿ ಸದ್ದಿಲ್ಲದೆ ಆಪರೇಷನ್ ಮಾಡುವ ಈತನ ಕೃತ್ಯ ಕೇಳಿದ್ರೆ ನೀವು ಬೆಚ್ಚಿಬೀಳ್ತೀರಾ.. ಅಷ್ಟಕ್ಕೂ ಸಿಸಿ ಕ್ಯಾಮೆರಾದಲ್ಲಿ ಹೀಗೆ ಇಂಚಿಂಚೂ ದಾಖಲಾಗುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ ತನ್ನ ಕೆಲಸ ಮಾಡಿ ಮುಗಿಸುತ್ತಿರೋ ಈ ಖತರ್ನಾಕ್ ವ್ಯಕ್ತಿ ಯಾರೆಂದು ಹೇಳೋಕು ಮುನ್ನ ಈ ಘಟನೆ ನಡೆದಿರೋದು ಎಲ್ಲಿ ಅಂತಾ ಕೇಳಿ, ಹಾಸನ ನಗರದ ಶರೀಫ್ ಕಾಲೋನಿಯ ಖೂಬಾ ಮಸೀದಿಯಲ್ಲಿ ಮೇ 21ರ ನಡು ರಾತ್ರಿ ಎಂಟ್ರಿಯಾಗಿದ್ದ ಕತರ್ನಾಕ್ ಕಳ್ಳ ಲಕ್ಷ ಲಕ್ಷ ಬೆಲೆಬಾಳೊ ಕ್ಯಾಮೆರಾ ಹಾಗು ಕಂಪ್ಯೂಟರ್ ಎಗರಿಸಿ ಎಸ್ಕೇಪ್ ಆಗಿದ್ದ.

ಬೆಳಿಗ್ಗೆ ನಮಾಜಿಗೆಂದು ಜನರು ಬಂದಾಗ ನಡೆದಿರೋ ಕಳ್ಳತನದ ಕೃತ್ಯ ಬಯಲಾಗಿತ್ತು, ಅಷ್ಟಕ್ಕೂ ಈ ಮಸೀದಿಯಲ್ಲಿ ಕಳ್ಳತನ ಆಗ್ತಿರೋದು ಇದೇ ಮೊದಲಲ್ಲ, ಮೂರು ತಿಂಗಳಲ್ಲಿ ಇದು ಮೂರನೇ ಕಳ್ಳತನ, ಒಮ್ಮೆ ಮಾನೀಟರ್, ಇನ್ನೊಮ್ಮೆ ಕಂಪ್ಯೂಟರ್, ಮಗದೊಮ್ಮೆ ಕ್ಯಾಮೆರಾ ಎಗರಿಸಿದ್ದು ಮಾತ್ರ ಇದೊಬ್ಬನೇ ಚಾಲಾಕಿ, ಈ ಬಾರಿ ಒಂದು ಕಂಫ್ಯೂಟರ್ ಹಾಗು ಕ್ಯಾಮೆರಾ ಎಗರಿಸಿ ಎಸ್ಕೇಪ್ ಆಗಿದ್ದ, ಪ್ರಕರಣ ದಾಖಲಿಸಿಕೊಂಡಿದ್ದ ಹಾಸನ ಪೊಲೀಸರು ತನಿಖೆಗಿಳಿದಾಗ ಇದೇ ರೀತಿಯಲ್ಲಿ ಒಂದು ದಿನದ ಹಿಂದೆ ಅರಸೀಕೆರೆ ನಗರದ ಎರಡು ಮಸೀದಿಗಳಲ್ಲಿ ಕಳ್ಲತನ ಆಗಿರೋ ಬಗ್ಗೆ ಮಾಹಿತಿ ಬಂದಿತ್ತು, ಕೂಡಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆಗಿಳಿದಾಗ ಕೇವಲ ಮಸೀದಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಕೊಡಗು ಜಿಲ್ಲೆ ವೀರಾಜಪೇಟೆಯ ಖತರ್ನಾಕ್ ಕಳ್ಳ ಮೊಹಮ್ಮದ್ ಸುಹೇಬ್ (35) ನನ್ನ ಬಂಧಿಸಿ 5 ಲಕ್ಷ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದು ಮಸೀದಿಗಳ ಆಡಳಿತ ಮಂಡಳಿಯ ಆತಂಕಕ್ಕೆ ಕಾರಣವಾಗಿದ್ದ ಖತರ್ನಾಕ್ ನನ್ನ ಬಂಧಿಸಿದ್ದು, ಕಳ್ಳತನವಾದ ಎಲ್ಲಾ ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಮೈಸೂರು ಜಿಲ್ಲೆಯ ಇಲವಾಲದ ರಬ್ಬಾನಿ ಮಸೀದಿ, ಬಿಳಿಕೆರೆಯ ಈದ್ಗಾ ಮಸೀದಿ, ಪಿರಿಯಾಪಟ್ಟಣದ ಫಿರ್ದೋಸ್ ಮಸೀದಿ, ಹಳೆ ಹುಣಸೂರಿನ ಗೌಸಿಯಾ ಮಸೀದಿ, ಕೆ.ಆರ್. ನಗರದ ಜಾಮಿಯಾ ಮಸೀದಿ, ಹಾಸನದ ಖೂಬಾ ಮಸೀದಿ, ಗಂಡಸಿಯ ಮದೀನಾ ಮಸೀದಿ, ಅರಸೀಕೆರೆಯ ಜಾಮಿಯಾ ಹಾಗು ಖಾದರ್ ಚಾವಲ್ ದರ್ಗಾಗಳು ಹೀಗೆ ಮೂರ್ನಾಲ್ಕು ಜಿಲ್ಲೆಗಳ ಹತ್ತಾರು ಮಸೀದಿಗಳಲ್ಲಿ ಕಳ್ಳತನ ಮಾಡೋದು ಕೈಗೆ ಸಿಕ್ಕಿದ್ದನ್ನ ಎಗರಿಸಿ ಬೇರೆ ಊರಿನಲ್ಲಿ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಾ, ಮತ್ತೊಂದು ಕಳ್ಳತನಕ್ಕೆ ಸಜ್ಜಾಗುತ್ತಿದ್ದ, ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದ ಸುಹೇಬ್​​ ಗೆ ಕೌಟುಂಬಿಕ ಸಮಸ್ಯೆ ಆದಾಗ ಮಸೀದಿಯಲ್ಲಿ ತನಗೆ ಸಹಕಾರ ನೀಡಲಿಲ್ಲ, ಬೆಂಬಲ ಕೊಡಲಿಲ್ಲ ಎಂದು ಜಗಳ ಮಾಡಿಕೊಂಡಿದ್ದ,

ಇದ್ರಿಂದ ಇವನನ್ನ ಜಮಾಅತ್ ನಿಂದ ಹೊರ ಹಾಕಲಾಗಿತ್ತು, ಹಾಗಾಗಿ ತಮ್ಮ ಧಾರ್ಮಿಕ ಮುಖಂಡರ ಮೇಲೆ ಸಿಟ್ಟಾಗಿದ್ದ ಸುಹೇಬ್, ಮಸೀದಿಗಳನ್ನೇ ಟಾರ್ಗೆಟ್ ಮಾಡಿದ್ದ, ನನಗೆ ಸಹಕಾರ ನೀಡದ ನಿಮಗೆ ಬುದ್ದಿ ಕಲಿಸ್ತೀನಿ ಎಂದು ಮಸೀದಿಯ ಬಾಗಿಲು ಮುರಿಯೋದು, ಸಿಕ್ಕ ಸಿಕ್ಕ ವಸ್ತುಗಳನ್ನ ದೋಚಿ ಮರಾಟ ಮಾಡೋದು ಮಾಡ್ತಿದ್ದ, ಹಾಸನದಲ್ಲಿ ಮೇ 21ರ ರಾತ್ರಿ ಖೂಬಾ ಮಸೀದಿಯಲ್ಲಿ ಕಳ್ಳತನ ಆದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ರು. ಆರೋಪಿಯ ಕಾಣಿಸಿಕೊಂಡಿರುವ ಸಿಸಿ ಕ್ಯಾಮೆರಾ ವೀಡಿಯೋ ಪಡೆದು ಕಳ್ಳನ ಬೆನ್ನು ಬಿದ್ದಿದ್ದರು, ಆತ ಯಾರೆಂದು ಸುಳಿವು ಸಿಗುತ್ತಲೆ ವಿಶೇಷ ತಂಡ ರಚನೆ ಮಾಡಿ ಕಾರ್ಚಾರಣೆ ನಡೆಸಿದಾಗ ಮೊನ್ನೆ ಸಂಜೆ ಅರಸೀಕೆರೆ ರೈಲ್ವೆ ನಿಲ್ದಾಣದ ಬಳಿ ಅನುಮಾನಾಸ್ಪದ ವಾಗಿ ತಿರುಗಾಡುತ್ತಿದ್ದವನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ, 8 ಪ್ರಕರಣಗಳಲ್ಲಿ ಬೇಕಾಗಿದ್ದ ಖತರ್ನಾಕ್ ಆರೋಪಿಯನ್ನ ಸೆರೆ ಹಿಡಿದಿರೋ ಪೊಲೀಸರು ಆತನನ್ನು ಕಂಬಿ ಹಿಂದೆ ಕಳಿಸಿದ್ದಾರೆ

ಒಟ್ನಲ್ಲಿ ಮಸೀದಿಗಳನ್ನೆ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ನನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ, ಒಂದೇ ಮಸೀದಿಯಲ್ಲಿ ಮೂರು ಮೂರು ಬಾರಿ ಕದ್ದು ಮತ್ತೆ ಕಳ್ಳತನ ಯತ್ನ ಮಾಡುತ್ತಾ ಮಸೀದಿ ಆಡಳಿತ ಮಂಡಳಿಗಳ ತಲೆ ಬಿಸಿಗೆ ಕಾರಣವಾಗಿದ್ದ ಆರೊಪಿ ಸೆರೆಯಾಗಿದ್ದು ತನಗೆ ಸಮಸ್ಯೆ ಆದಾಗ ತನ್ನ ಪರ ನಿಲ್ಲಲಿಲ್ಲ ಎನ್ನೋ ಕಾರಣಕ್ಕೆ ಮಸೀದಿಯನ್ನೇ ಟಾರ್ಗೆಟ್ ಮಾಡುತ್ತಿದ್ದವನು ಇದೀಗ ಅಂದರ್ ಆಗಿದ್ದಾನೆ