ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ಉಪವಾಸ ಸತ್ಯಾಗ್ರಹಗಳಿಂದಲ್ಲ, ನೇತಾಜಿ ಸುಭಾಸ್ ಚಂದ್ರ ಬೋಸ್ ಭಯದಿಂದ: ಬಸನಗೌಡ ಪಾಟೀಲ್ ಯತ್ನಾಳ್

|

Updated on: Sep 28, 2023 | 10:41 AM

ಭಾರತ ಇಬ್ಭಾಗವಾಗುವ ಹಾಗೆ ಮಹ್ಮದ್ ಅಲಿ ಜಿನ್ನಾ ತಲೆ ಕೆಡಿಸಿದ್ದೇ ಪಂಡಿತ್ ಜವಾಹರಲಾಲ್ ನೆಹರೂ; ಯಾಕೆಂದರೆ ಅವರಿಗೆ ದೇಶದ ಪ್ರಧಾನಿ ಮಂತ್ರಿಯಾಗಬೇಕಿತ್ತು, ಹಾಗೆ ನೋಡಿದರೆ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಪಾತ್ರ ನಗಣ್ಯ, ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ಉಪವಾಸ ಸತ್ಯಾಗ್ರಹ ಮತ್ತು ಚಳುವಳಿಗಳಿಂದಲ್ಲ, ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಭಯದಿಂದ ಅಸಲಿಗೆ ಅವರೇ ಭಾರತದ ಮೊದಲ ಪ್ರಧಾನ ಮಂತ್ರಿ ಎಂದು ಯತ್ನಾಳ್ ಹೇಳಿದರು

ಹಾವೇರಿ: ಕಳೆದ ರಾತ್ರಿ ಹಾವೇರಿಯಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ (Dr Baba Saheb Ambedkar) ಅವರಿಗೆ ರಾಷ್ಟ್ರದ ಬಗ್ಗೆಯಿದ್ದ ಕಾಳಜಿಯನ್ನು ವಿವರಿಸಿದರು. ಬಾಬಾ ಸಾಹೇಬರು 1938 ರಲ್ಲಿ ಬರೆದ ಒಂದು ಪುಸ್ತಕವನ್ನು ಉಲ್ಲೇಖಿಸಿದ ಯತ್ನಾಳ್, ಭಾರತ ಶಾಂತಿ-ಸಮಾಧಾನ ನೆಮ್ಮದಿಯಿಂದ ಇರಬೇಕಾದರೆ ಆದರ ವಿಭಜನೆಯಾಗಬಾರದು ಅಂತ ಅದರಲ್ಲಿ ಬರೆದಿದ್ದಾರೆ ಎಂದು ಹೇಳಿದರು. ಕಾಂಗ್ರೆಸಿಗರು ಅಂಬೇಡ್ಕರ್ ಅವರ ಒಂದು ಮುಖ ಮಾತ್ರ ತೋರಿಸಿದ್ದಾರೆ, ಅವರು ಯಾವತ್ತೂ ಹಿಂದೂ ವಿರೋಧಿಗಳಾಗಿರಲಿಲ್ಲ (anti Hindu) ಎಂದು ಯತ್ನಾಳ್ ಹೇಳಿದರು. ಭಾರತ ಇಬ್ಭಾಗವಾಗುವ ಹಾಗೆ ಮಹ್ಮದ್ ಅಲಿ ಜಿನ್ನಾ ತಲೆ ಕೆಡಿಸಿದ್ದೇ ಪಂಡಿತ್ ಜವಾಹರಲಾಲ್ ನೆಹರೂ; ಯಾಕೆಂದರೆ ಅವರಿಗೆ ದೇಶದ ಪ್ರಧಾನಿ ಮಂತ್ರಿಯಾಗಬೇಕಿತ್ತು, ಹಾಗೆ ನೋಡಿದರೆ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಪಾತ್ರ ನಗಣ್ಯ, ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ಉಪವಾಸ ಸತ್ಯಾಗ್ರಹ ಮತ್ತು ಚಳುವಳಿಗಳಿಂದಲ್ಲ, ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಭಯದಿಂದ ಅಸಲಿಗೆ ಅವರೇ ಭಾರತದ ಮೊದಲ ಪ್ರಧಾನ ಮಂತ್ರಿ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on