ಹಾವೇರಿ: ಜಿಲ್ಲೆಯಲ್ಲಿ ದಟ್ಟ ಮಂಜು ಆವರಿಸಿದ್ದು ಜನ ಫುಲ್ ಖುಷಿಯಾಗಿ ಎಂಜಾಯ್ ಮಾಡಿದ್ದಾರೆ. ಹಾವೇರಿ ಮಂಜಿನನಗರಿ ಅಲ್ಲ. ಮಲೆನಾಡ ಪ್ರದೇಶವೂ ಅಲ್ಲ. ಆದ್ರೂ ಹಾವೇರಿಯಲ್ಲಿ ಮಂಜಿನ ಆಟ ಶುರುವಾಗಿದ್ದು ಇಲ್ಲಿನ ಜನರಿಗೆ ಮಂಜಿನ ಹನಿಗಳು ಸಖತ್ ಖುಷಿ ನೀಡ್ತಿವೆ. ಮಂಜಿನ ಮುತ್ತಿಗೆಗೆ, ಮೈಮನಗಳೆಲ್ಲ ಕೂಲ್ ಕೂಲ್ ಆಗಿದೆ. ಬೆಳಗ್ಗೆ ಎಂಟು, ಒಂಬತ್ತು ಗಂಟೆಯಾದ್ರೂ ಮಂಜಿನ ಹನಿಗಳು ದಾರಿ ಬಿಟ್ಟುಕೊಡ್ತಿಲ್ಲ. ರಸ್ತೆಯಲ್ಲಿ ನಿಂತವ್ರಿಗೆ ಎಲ್ಲಿದ್ದೀವಿ, ಎಷ್ಟು ಹೊತ್ತಾಯ್ತೂ ಅನ್ನೋದು ಗೊತ್ತಾಗ್ತಿಲ್ಲ. ಊರನ್ನೆ ಇಬ್ಬನಿ ತಬ್ಬಿದ್ದು, ಜನರಿಗೆ ಮಡಿಕೇರಿ, ಊಟಿಯ ಅನುಭವವಾಗ್ತಿದೆ.
ಭಾರೀ ಮಂಜಿನಿಂದಾಗಿ ವಾಹನ ಸಂಚಾರಕ್ಕೆ ಸ್ವಲ್ಪ ಕಿರಿಕಿರಿ ಉಂಟಾಗ್ತಿದೆ. ಆದ್ರೆ, ವಾಕಿಂಗ್, ಜಾಗಿಂಗ್, ಸ್ಪೋರ್ಟ್ಸ್ ಅದು ಇದು ಅಂತಾ ಹೊರಡೋ ಜನರಿಗೆ ಮಂಜಿನ ಹನಿಗಳು ಖುಷಿ ನೀಡ್ತಿವೆ. ಇನ್ನೂ, ಗಿಡ, ಮರ, ಹೂ, ಬಳ್ಳಿಗೆಲ್ಲ ಮಂಜಿನ ಸ್ನಾನವಾಗ್ತಿದ್ದು, ಹನಿ ಹನಿ ಕಹಾನಿಯನ್ನ ಜನ ಕಣ್ತುಂಬಿಕೊಳ್ತಿದ್ದಾರೆ.
ಒಟ್ನಲ್ಲಿ, ಯಾಲಕ್ಕಿ ಕಂಪಿನ ನಾಡು ಮಂಜಿನ ನಗರಿ ಅಲ್ಲದಿದ್ರೂ ಥೇಟ್ ಮಂಜಿನ ನಗರಿಯ ವಾತಾವರಣ ಸದ್ಯ ನಿರ್ಮಾಣವಾಗಿದೆ.. ಬೆಳ್ಳಂ ಬೆಳಗ್ಗೆ ಮನೆಯಿಂದ ಹೊರ ಬರುತ್ತಿರುವ ಜನ, ಚುಮು ಚುಮು ಚಳಿಯಲ್ಲಿ ಮಂಜಿನ ಚಿತ್ತಾರ ನೋಡ್ತಿದ್ದಾರೆ. ಇಬ್ಬಿನ ತಬ್ಬಿದ ಇಳೆಯಲ್ಲಿ, ರವಿಯ ಬೆಳಕು ಹುಡುಕ್ತಿದ್ದಾರೆ.
ವರದಿ: ಪ್ರಭುಗೌಡ.ಎನ್.ಪಾಟೀಲ, ಟಿವಿ9 ಹಾವೇರಿ