ಹಾವೇರಿ: ದೇಶಿ ಕ್ರೀಡೆಗಳ ಮುಂದೆ ಯಾವ ಗೇಮ್ಗಳೂ ಖದರ್ ಕೊಡಲ್ಲ. ಅದ್ರಲ್ಲೂ ಕಟ್ಟುಮಸ್ತಾದ ಕಲಿಗಳು ತೊಡೆ ತಟ್ಟಿ ಅಖಾಡಕ್ಕಿಳಿದ್ರಂತೂ ಹೈವೋಲ್ಟೇಜ್ ಸ್ಪರ್ಧೆ ನಡೆಯುತ್ತೆ. ಸದ್ಯ ಹಾವೇರಿಯಲ್ಲಿ ನಡೆದ ಕುಸ್ತಿ ಕೂಡ ಹಾಗೇ ಕಿಕ್ ಕೊಟ್ಟಿತ್ತು.
ರಟ್ಟೀಹಳ್ಳಿ ತಾಲೂಕಿನ ಅಂಗರಗಟ್ಟಿ ಗ್ರಾಮದಲ್ಲಿ ಕಾಲಭೈರವೇಶ್ವರ ಜಾತ್ರೆ ಪ್ರಯುಕ್ತ ಮೂರು ದಿನಗಳ ಕುಸ್ತಿ ಪಂದ್ಯ ಆಯೋಜಿಸಲಾಗಿತ್ತು. ಮೊದಲೆರಡು ದಿನ ಪುಟ್ಟ ಪುಟ್ಟ ಮಕ್ಕಳು ಖದರ್ ತೋರಿಸಿದ್ರೆ ಮೂರನೇ ದಿನ ಈ ಘಟಾನುಘಟಿಗಳು ಅಖಾಡಕ್ಕಿಳಿದು ಸೆಣಸಾಡಿದ್ರು. ನಾನಾ ನೀನಾ ನೋಡೇಬಿಡೋಣ ಅನ್ನೋ ರೇಂಜ್ಗೆ ಪರಾಕ್ರಮ ತೋರಿದ್ರು.
ಮದಗಜಗಳಂತೆ ರಣರಂಗದಲ್ಲಿ ಕಾದಾಟ:
ಕುಸ್ತಿಯಲ್ಲಿರೋ ಖದರೇ ಹಾಗೇ. ಅಲ್ಲೇನಿದ್ರೂ ತಾಕತ್ತಿದ್ದವ್ನಿಗಷ್ಟೇ ಗೆಲುವಿನ ಪಟ್ಟ. ಈ ಪಟ್ಟಕ್ಕಾಗಿ ಪೈಲ್ವಾನರು ಕೂಡ ಅಷ್ಟೇ ಖಡಕ್ಕಾಗಿ ದೇಹ ದಂಡಿಸಿರ್ತಾರೆ. ಆ ದಂಡನೇಯೇ ಇವ್ರಿಗೆ ಸೆಣೆಸಾಡೋ ಶಕ್ತಿಯನ್ನೂ ನೀಡಿದೆ.