ಮಂಡ್ಯ: ನಗರದಲ್ಲಿ ಕೊವಿಡ್ ಪರೀಕ್ಷೆ ವೇಳೆ ನಡೆದಿರುವ ಅಹಿತಕರ ಘಟನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಂಡಿದ್ದರೆ ಸಮಸ್ಯೆ ಆಗ್ತಿರಲಿಲ್ಲ. ಅಂಬೇಡ್ಕರ್ ಭವನಕ್ಕೆ ಶಿಫ್ಟ್ ಮಾಡುವ ಅಗತ್ಯವೇನಿತ್ತು? ಇದಕ್ಕೆ ಮಂಡ್ಯ ಜಿಲ್ಲಾಧಿಕಾರಿ ಉತ್ತರ ಕೊಡಬೇಕು ಎಂದು HDK ಆಗ್ರಹಪೂರ್ವಕವಾಗಿ ಪ್ರಶ್ನಿಸಿದ್ದಾರೆ. ಈ ಹಿಂದೆ, ಬೆಂಗಳೂರಿನ ಪಾದರಾಯನಪುರ ಪುಂಡರನ್ನು ರಾಮನಗರ ಜಿಲ್ಲಾ ಜೈಲಿಗೆ ಸ್ಥಳಾಂತರಿಸಿದಾಗಲೂ ಸಹ ಕುಮಾರಸ್ವಾಮಿ ಇದೇ ರೀತಿಯಾಗಿ ಅಪಸ್ವರ ಎತ್ತಿದ್ದರು.
ಮಂಡ್ಯದಲ್ಲಿ ಕೊವಿಡ್ ಪರೀಕ್ಷೆ ವೇಳೆ ನಡೆದಿರುವ ಗೂಂಡಾಗಿರಿ ಘಟನೆಯಲ್ಲಿ ಕೆಲವರು ನನ್ನ ಹೆಸರನ್ನೂ ಎಳೆದು ತಂದಿದ್ದಾರೆ. ಆದ್ರೆ ಯಾರೇ ಹಲ್ಲೇ ಮಾಡಿದ್ದರೂ ಅದು ತಪ್ಪೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಅಂತಹ ಘಟನೆಗಳಿಗೆ ನಾನು ಬೆಂಬಲ ನೀಡುವುದಿಲ್ಲ. ಸಮಸ್ಯೆಗಳಿದ್ದರೆ ಶ್ರೀಕಂಠೇಗೌಡ ಅಧಿಕಾರಿಗಳಿಗೆ ತಿಳಿಸಬೇಕಿತ್ತು. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಬಗೆಹರಿಸಿಕೊಳ್ಳಬೇಕಿತ್ತು. ಅದನ್ನ ಬಿಟ್ಟು ಹಲ್ಲೆ ಮಾಡಿರುವುದನ್ನ ಬೆಂಬಲಿಸಲು ಆಗಲ್ಲ ಎಂದೂ ಕುಮಾರಸ್ವಾಮಿ ಹೇಳಿದ್ದಾರೆ.
Published On - 3:57 pm, Sat, 25 April 20