108 ಆ್ಯಂಬುಲೆನ್ಸ್​ ಚಾಲಕರ ನೇಮಕಾತಿಯಲ್ಲಿ ಅಕ್ರಮ ಆರೋಪ: ವಿಚಾರಣೆಗೆ ಸೂಚಿಸುತ್ತೇನೆ ಎಂದ ದಿನೇಶ್ ಗುಂಡೂರಾವ್

108 ಆ್ಯಂಬುಲೆನ್ಸ್ ಚಾಲಕರ ನೇಮಕಾತಿಯಲ್ಲೂ ಅಕ್ರಮದ ಘಾಟು ಕೇಳಿಬಂದಿದೆ. ಒಬ್ಬರಿಂದ 3 ಲಕ್ಷ ರೂ. ಹಣ ಪಡೆದು ನೇಮಕ ಮಾಡಿರುವ ಆರೋಪ ಕೇಳಿಬಂದಿದೆ. ಜಿವಿಕೆ ಸಂಸ್ಥೆ ವಿರುದ್ಧ ರಾಜ್ಯ ಆ್ಯಂಬುಲೆನ್ಸ್ ಚಾಲಕರ ಸಂಘ ಈ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.

108 ಆ್ಯಂಬುಲೆನ್ಸ್​ ಚಾಲಕರ ನೇಮಕಾತಿಯಲ್ಲಿ ಅಕ್ರಮ ಆರೋಪ: ವಿಚಾರಣೆಗೆ ಸೂಚಿಸುತ್ತೇನೆ ಎಂದ ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
Edited By:

Updated on: Dec 08, 2023 | 9:37 PM

ಬೆಳಗಾವಿ, ಡಿ.8: 108 ಆ್ಯಂಬುಲೆನ್ಸ್ ಚಾಲಕರ ನೇಮಕಾತಿಯಲ್ಲಿ ಅಕ್ರಮದ ಘಾಟು ಕೇಳಿಬಂದಿದ್ದು, ಈ ಬಗ್ಗೆ ವಿಚಾರಣೆ ನಡೆಸುವಂತೆ ಆಯುಕ್ತರಿಗೆ ಸೂಚನೆ ನೀಡುತ್ತೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಆರೋಪದ ಕುರಿತು‌ ಖಂಡಿತವಾಗಿಯೂ‌ ವಿಚಾರಣೆ ಮಾಡುತ್ತೇನೆ ಎಂದರು.

ವಿಚಾರಣೆ ಬಳಿಕ ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ. ಜಿವಿಕೆ ಕಂಪನಿ ನಮಗೆ ಏಜೆನ್ಸಿ, ಅವರೇ ನಿರ್ವಹಣೆ ಮಾಡುತ್ತಿರುವುದು. ಆ ಬಗ್ಗೆ ಸಾಕಷ್ಟು ಕುಂದುಕೊರತೆ, ಸಮಸ್ಯೆಗಳಿರುವುದು ಗಮನದಲ್ಲಿದೆ ಎಂದು ಸಚಿವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: 108 ಆ್ಯಂಬುಲೆನ್ಸ್ ಚಾಲಕರ ನೇಮಕಾತಿಯಲ್ಲಿ ಅಕ್ರಮ ಆರೋಪ: ಒಬ್ಬೊಬ್ಬರಿಂದ 3 ಲಕ್ಷ ರೂ ವಸೂಲಿ?

ಏನಿದು ಪ್ರಕರಣ?

108 ಆ್ಯಂಬುಲೆನ್ಸ್ ಚಾಲಕರ ನೇಮಕಾತಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ರಾಜ್ಯ ಆ್ಯಂಬುಲೆನ್ಸ್ ಚಾಲಕರ ಸಂಘ ಗಂಭೀರ ಆರೋಪ ಮಾಡಿತ್ತು. ಅಹರ್ತೆ ಇಲ್ಲದ 250ಕ್ಕೂ ಹೆಚ್ಚು ಚಾಲಕರನ್ನ ನೇಮಕ ಮಾಡಿಕೊಂಡ GVK ಕಂಪನಿ ಕೋಟ್ಯಾಂತರ ರೂ. ಭ್ರಷ್ಟಾಚಾರ ಮಾಡಿದೆ. ಸರ್ಕಾರದ ಆದೇಶ ಧಿಕ್ಕರಿಸಿ ಒಬ್ಬೊಬ್ಬರಿಂದ 3 ಲಕ್ಷ ರೂ. ಪಡೆದು ನೇಮಕ ಮಾಡಿರುವ ಆರೋಪ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ