
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿರುವ ‘ಮಿನಿ ರತ್ನ’ ಸಾರ್ವಜನಿಕ ವಲಯದ ಉದ್ಯಮವಾದ HLL ಲೈಫ್‌ಕೇರ್ ಲಿಮಿಟೆಡ್ ವಿವಿಧ ವೃತ್ತಿಪರ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ಈ ನೇಮಕಾತಿಯು ನಿಗದಿತ ಗುತ್ತಿಗೆ (FTC) ಆಧಾರದ ಮೇಲೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರಿನ ವಿಜಯನಗರದ ಗೋವಿಂದರಾಜನಗರ ವಾರ್ಡ್‌ನಲ್ಲಿರುವ ‘ಬಿಬಿಎಂಪಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ’ಗೆ ನಿಯೋಜಿಸಲಾಗುವುದು.
ತಾಂತ್ರಿಕ ಹಾಗೂ ಅಕೌಂಟ್ಸ್ ವಿಭಾಗದ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ನೇರ ಸಂದರ್ಶನವು ಸೆಪ್ಟೆಂಬರ್ 12 ರಂದು ಬೆಳಿಗ್ಗೆ 09:00 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ನಡೆಯಲಿದೆ. ಸಂದರ್ಶನ ನಡೆಯುವ ಸ್ಥಳ: ರೋಸ್‌ವುಡ್ ಇಂಟರ್ನ್ಯಾಷನಲ್ ಹೋಟೆಲ್, ಸಂಖ್ಯೆ 19/1, ಮೈಸೂರು ರಸ್ತೆ, ಸ್ಯಾಟಲೈಟ್ ಬಸ್ ಸ್ಟಾಪ್ ಹತ್ತಿರ, ನ್ಯೂ ಟಿಂಬರ್‌ಯಾರ್ಡ್ ಲೇಔಟ್, ಟೆಲಿಕಾಂ ಕಾಲೋನಿ, ಬನಶಂಕರಿ, ಬೆಂಗಳೂರು, ಕರ್ನಾಟಕ – 560026.
ಈ ನೇಮಕಾತಿ ಪ್ರಕ್ರಿಯೆಯಲ್ಲಿ ವಿವಿಧ ತಾಂತ್ರಿಕ, ವೈದ್ಯಕೀಯ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅದರಲ್ಲಿ ಜೂನಿಯರ್ ಲ್ಯಾಬ್ ಟೆಕ್ನಿಷಿಯನ್, ಲ್ಯಾಬ್ ಟೆಕ್ನಿಷಿಯನ್, ಸೀನಿಯರ್ ಲ್ಯಾಬ್ ಟೆಕ್ನಿಷಿಯನ್, ಅಕೌಂಟ್ಸ್ ಆಫೀಸರ್, ರೇಡಿಯೋಗ್ರಾಫರ್, ರೇಡಿಯೋಗ್ರಾಫರ್ ಮತ್ತು ಜೂನಿಯರ್ ರೇಡಿಯೋಗ್ರಾಫರ್ ಹುದ್ದೆಗಳು ಸೇರಿವೆ.
HLL ಸಂಸ್ಥೆಯು ಕನ್ಸಲ್ಟೆಂಟ್ ಪ್ಯಾನಾಲಜಿಸ್ಟ್-MD (Consultant Pathologist-MD) ಹುದ್ದೆಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗೆ ನೇರ ಸಂದರ್ಶನವಿರುವುದಿಲ್ಲ. ಬದಲಿಗೆ, ಆಸಕ್ತ ವೈದ್ಯರು ತಮ್ಮ ನವೀಕರಿಸಿದ CV ಯನ್ನು ಸೆಪ್ಟೆಂಬರ್ 30 ರೊಳಗೆ hcsrecruitment@lifecarehll.com ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬೇಕಾಗುತ್ತದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಜಿಡಿಎಸ್ ಕೆಲಸ ನಿಜಕ್ಕೂ ಖಾಯಂ ಸರ್ಕಾರಿ ಕೆಲಸವೇ? ವೇತನ, ಸೌಲಭ್ಯಗಳ ಸಂಪೂರ್ಣ ವಿವರ!
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆ, ನವೀಕರಿಸಿದ CV ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರವನ್ನು ತರಬೇಕು. ಇದರೊಂದಿಗೆ ಶೈಕ್ಷಣಿಕ ಅರ್ಹತೆ, ಅನುಭವದ ಪ್ರಮಾಣಪತ್ರಗಳು, ಅಂಕಪಟ್ಟಿಗಳ ಅಸಲಿ ಹಾಗೂ ಸ್ವಯಂ-ದೃಢೀಕರಿಸಿದ (Self-attested) ಪ್ರತಿಗಳು ಮತ್ತು ಮಾನ್ಯವಾದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರತಕ್ಕದ್ದು.
ಅರ್ಹತಾ ಮಾನದಂಡಗಳನ್ನು ಪರಿಶೀಲಿಸಲು ಮತ್ತು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.lifecarehll.com/careers ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಫೋನ್ ಸಂಖ್ಯೆ 9400060468 ಅಥವಾ ಇಮೇಲ್ hcsrecruitment@lifecarehll.com ಮೂಲಕ ಸಂಸ್ಥೆಯನ್ನು ಸಂಪರ್ಕಿಸಬಹುದು.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ