ಎಎಸ್​ಐ ಮೇಲೆ ಫೈರಿಂಗ್​ ಮಾಡಿ ಹನಿಟ್ರ್ಯಾಪ್​ ಕಿಂಗ್​ಪಿನ್​ ಪರಾರಿ

|

Updated on: Sep 27, 2019 | 5:52 PM

ಕೊಡಗು: ಎಎಸ್​ಐ ಹಮೀದ್ ಮೇಲೆ ಅಂತಾರಾಜ್ಯ ವೇಶ್ಯಾವಾಟಿಕೆ ದಂಧೆಯ ಕಿಂಗ್​ಪಿನ್​ ಕರೀಂ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಅದೃಷ್ಟವಶಾತ್ ಎಎಸ್​ಐ ಹಮೀದ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಆರೋಪಿ ಕರೀಂನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿ ಹನಿಟ್ರ್ಯಾಪ್​ನ ಕಿಂಗ್​ಪಿನ್ ಕರೀಂ ಪರಾರಿಯಾಗಿದ್ದಾನೆ. ಆರೋಪಿ ಕರೀಂ, ಕಳೆದ ತಿಂಗಳು ತನ್ನ ಸ್ನೇಹಿತ ಗಫೂರ್​ನನ್ನೇ ಹನಿ ಟ್ರ್ಯಾಪ್​ ಬಲೆಗೆ ಕೆಡವಿ 3 ಲಕ್ಷ ರೂ. ಸುಲಿಗೆ ಮಾಡಿದ್ದ. […]

ಎಎಸ್​ಐ ಮೇಲೆ ಫೈರಿಂಗ್​ ಮಾಡಿ ಹನಿಟ್ರ್ಯಾಪ್​ ಕಿಂಗ್​ಪಿನ್​ ಪರಾರಿ
Follow us on

ಕೊಡಗು: ಎಎಸ್​ಐ ಹಮೀದ್ ಮೇಲೆ ಅಂತಾರಾಜ್ಯ ವೇಶ್ಯಾವಾಟಿಕೆ ದಂಧೆಯ ಕಿಂಗ್​ಪಿನ್​ ಕರೀಂ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಅದೃಷ್ಟವಶಾತ್ ಎಎಸ್​ಐ ಹಮೀದ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಆರೋಪಿ ಕರೀಂನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿ ಹನಿಟ್ರ್ಯಾಪ್​ನ ಕಿಂಗ್​ಪಿನ್ ಕರೀಂ ಪರಾರಿಯಾಗಿದ್ದಾನೆ.

ಆರೋಪಿ ಕರೀಂ, ಕಳೆದ ತಿಂಗಳು ತನ್ನ ಸ್ನೇಹಿತ ಗಫೂರ್​ನನ್ನೇ ಹನಿ ಟ್ರ್ಯಾಪ್​ ಬಲೆಗೆ ಕೆಡವಿ 3 ಲಕ್ಷ ರೂ. ಸುಲಿಗೆ ಮಾಡಿದ್ದ. ಈ ಸಂಬಂಧ ಕರೀಂ ವಿರುದ್ಧ ನಾಪೋಕ್ಲು ಪೊಲೀಸ್​ ಠಾಣೆಗೆ ಗಫೂರ್​ ದೂರು ನೀಡಿದ್ದ. ಹೀಗಾಗಿ ಕರೀಂನನ್ನು ಬಂಧಿಸಲು ಎಎಸ್​ಐ ಹಮೀದ್ ಸೇರಿ ಇಬ್ಬರು ಪೊಲೀಸರು ತೆರಳಿದ್ದರು. ಈ ವೇಳೆ ಎಎಸ್​ಐ ಹಮೀದ್ ಮೇಲೆ ಗುಂಡುಹಾರಿಸಿ ಕರೀಂ ಪರಾರಿಯಾಗಿದ್ದಾನೆ. ಆರೋಪಿ ಕರೀಂಗಾಗಿ ಕೊಡಗು ಜಿಲ್ಲಾ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.