13 ದಿನದಿಂದ ನಾಪತ್ತೆಯಾಗಿದ್ದ ಗುಜರಿ ಅಂಗಡಿ ಮಾಲೀಕನಿಗೂ ಕೊರೊನಾ ಅಟ್ಯಾಕ್

|

Updated on: May 06, 2020 | 1:02 PM

ಬೆಂಗಳೂರು: ಹೊಂಗಸಂದ್ರದಲ್ಲಿ ಪತ್ತೆಯಾದ ಮೊದಲ ಕೊರೊನಾ ಕೇಸ್​ಗೆ ಸಂಬಂಧಿಸಿ ಬಿಹಾರಿ ಸೋಂಕಿತನ ಮೂಲ‌ ಹುಡುಕುತ್ತಾ ಹೋದಾಗ ಇಡೀ ರಾಜ್ಯವನ್ನೇ ನಡುಗಿಸುವ ಮತ್ತೊಂದು ಸಂಗತಿ ಪತ್ತೆಯಾಗಿದೆ. ಹೊಂಗಸಂದ್ರದ ಮೊದಲ ಕೊರೊನಾ ಕೇಸ್ ದೃಢವಾಗುತ್ತಿದ್ದಂತೆ ಸೋಂಕಿತನಿಗೆ ಕೆಲಸ ಕೊಟ್ಟಿದ್ದ ಗುಜರಿ ಅಂಗಡಿ ಮಾಲೀಕ ಎಸ್ಕೇಪ್ ಆಗಿದ್ದ. ಸದ್ಯ 13 ದಿನಗಳ ಬಳಿಕ ಪತ್ತೆಯಾಗಿದ್ದಾನೆ. ಹಿನ್ನೆಲೆ: 419ನೇ ಸೋಂಕಿತ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ ಕೊರೊನಾ ಪಾಸಿಟಿವ್ ಬಂದ ಕೂಡಲೇ ಗುಜರಿ ಅಂಗಡಿಯ ಮಾಲೀಕ ನಾಪತ್ತೆಯಾಗಿದ್ದ, ನಾಪತ್ತೆಯಾದ ವ್ಯಕ್ತಿಗಾಗಿ ಅಧಿಕಾರಿಗಳು […]

13 ದಿನದಿಂದ ನಾಪತ್ತೆಯಾಗಿದ್ದ ಗುಜರಿ ಅಂಗಡಿ ಮಾಲೀಕನಿಗೂ ಕೊರೊನಾ ಅಟ್ಯಾಕ್
Follow us on

ಬೆಂಗಳೂರು: ಹೊಂಗಸಂದ್ರದಲ್ಲಿ ಪತ್ತೆಯಾದ ಮೊದಲ ಕೊರೊನಾ ಕೇಸ್​ಗೆ ಸಂಬಂಧಿಸಿ ಬಿಹಾರಿ ಸೋಂಕಿತನ ಮೂಲ‌ ಹುಡುಕುತ್ತಾ ಹೋದಾಗ ಇಡೀ ರಾಜ್ಯವನ್ನೇ ನಡುಗಿಸುವ ಮತ್ತೊಂದು ಸಂಗತಿ ಪತ್ತೆಯಾಗಿದೆ. ಹೊಂಗಸಂದ್ರದ ಮೊದಲ ಕೊರೊನಾ ಕೇಸ್ ದೃಢವಾಗುತ್ತಿದ್ದಂತೆ ಸೋಂಕಿತನಿಗೆ ಕೆಲಸ ಕೊಟ್ಟಿದ್ದ ಗುಜರಿ ಅಂಗಡಿ ಮಾಲೀಕ ಎಸ್ಕೇಪ್ ಆಗಿದ್ದ. ಸದ್ಯ 13 ದಿನಗಳ ಬಳಿಕ ಪತ್ತೆಯಾಗಿದ್ದಾನೆ.

ಹಿನ್ನೆಲೆ:
419ನೇ ಸೋಂಕಿತ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ ಕೊರೊನಾ ಪಾಸಿಟಿವ್ ಬಂದ ಕೂಡಲೇ ಗುಜರಿ ಅಂಗಡಿಯ ಮಾಲೀಕ ನಾಪತ್ತೆಯಾಗಿದ್ದ, ನಾಪತ್ತೆಯಾದ ವ್ಯಕ್ತಿಗಾಗಿ ಅಧಿಕಾರಿಗಳು ಶೋಧ ನಡೆಸುತ್ತಿದ್ದರು. ನಾಪತ್ತೆಯಾದ 13 ದಿನಗಳ ಬಳಿಕ ಸಿಕ್ಕಿಬಿದ್ದಿದ್ದಾನೆ.

ಗುಜರಿ ಅಂಗಡಿಯ ಮಾಲೀಕ ಮೇ 3ರಂದು ಲಾಲ್‌ಬಾಗ್ ರಸ್ತೆಯಲ್ಲಿ ತಲೆತಿರುಗಿ ಬಿದ್ದಿದ್ದರು. ಕೂಡಲೇ ಮದೀನಾ ನಗರದ ಕ್ಲಿನಿಕ್‌ಗೆ ಆತನನ್ನು ದಾಖಲಿಸಲಾಗಿತ್ತು. ಅತಿಯಾದ ಜ್ವರ ಇದ್ದ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಸ್ಯಾಂಪಲ್ ಪರೀಕ್ಷೆ ವೇಳೆ ಈತನಿಗೂ ಕೊರೊನಾ ಇರುವುದು ದೃಢಪಟ್ಟಿದೆ. ಈತ ಯಾರೆಂಬ ಬಗ್ಗೆ ಅಧಿಕಾರಿಗಳು ತನಿಖೆ ವೇಳೆ ಗುಜರಿ ಅಂಗಡಿ ಮಾಲೀಕನೆಂಬುದು ಬಯಲಾಗಿದೆ.

10 ದಿನಗಳ ಕಾಲ ಈ ವ್ಯಕ್ತಿ ಹಲವು ಸ್ಥಳಗಳಲ್ಲಿ ಓಡಾಡಿದ್ದ. ಆದ್ರೆ ಈ ಬಗ್ಗೆ ಸೋಂಕಿತ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡ್ತಿಲ್ಲ. ಹೀಗಾಗಿ ಆತನ ಮೊಬೈಲ್ ಲೊಕೇಷನ್‌ ಆಧರಿಸಿ ವ್ಯಕ್ತಿ ಓಡಾಟದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈತನಿಗೆ ತಬ್ಲೀಗ್ ನಂಟಿರುವ ಬಗ್ಗೆ ಅಧಿಕಾರಿಗಳ ಅನುಮಾನ ವ್ಯಕ್ತಪಡಿಸಿದ್ದಾರೆ.

Published On - 1:02 pm, Wed, 6 May 20