ಸರ್ಕಾರದ ನಿಯಮ ಮೀರಿ ತಾಯಿ- 1ತಿಂಗಳ ಮಗುವಿನ ಕ್ವಾರಂಟೈನ್‌ ಮಾಡಿದ ಅಧಿಕಾರಿಗಳು

| Updated By: ಸಾಧು ಶ್ರೀನಾಥ್​

Updated on: Jun 23, 2020 | 1:23 PM

ಕಲಬುರಗಿ: ಕೊರೊನಾ ಹೆಮ್ಮಾರಿಯ ವಿರುದ್ಧದ ಹೋರಾಟದಲ್ಲಿ ಫ್ರಂಟ್‌ಲೈನ್‌ ಕಾರ್ಯಕರ್ತರ ಪಾತ್ರ ನಿಜಕ್ಕೂ ಸ್ಮರಣೀಯ. ನಿಜ, ಹಾಗಂತ ಅವರೇ ನಿರ್ಲಕ್ಷ್ಯ ವಹಿಸಿದ್ರೆ ಹೇಗೆ? ಇಂಥದ್ದೊಂದು ಘಟನೆ ಈಗ ಕಲಬುರಗಿಯಲ್ಲಿ ನಡೆದಿದೆ. ಸರ್ಕಾರವೇ ಮಾಡಿದ ನಿಯಮಗಳನ್ನ ಗಾಳಿಗೆ ತೂರಿದ್ದಾರೆ ಕಲಬರುಗಿಯ ಅಧಿಕಾರಿಗಳು. 10 ವರ್ಷದೊಳಗಿನ ಮಕ್ಕಳಿದ್ದವರನ್ನು ಮನೆಯಲ್ಲಿಯೇ ಹೋಂ‌ ಕ್ವಾರಂಟೈನ್‌ ಮಾಡಬಹುದು ಎಂದು ಸರಕಾರವೇ ನಿಯಮಗಳನ್ನ ರೂಪಿಸಿದೆ. ಆದ್ರೆ ನಿಯಮಗಳನ್ನ ಕಸದ ಬುಟ್ಟಿಗ್ಗೆಸೆದಿದ್ದಾರೆ ಇಲ್ಲಿನ ಅಧಿಕಾರಿಗಳು. ಮಹಾರಾಷ್ಟ್ರದಿಂದ ಬಂದಿದ್ದ ಮಹಿಳೆ ಮತ್ತು ಆಕೆಯ ಮಗುವನ್ನ ಕಳೆದು 10 ದಿನಗಳಿಂದ ಕ್ವಾರಂಟೈನ್‌ಲ್ಲಿಟ್ಟಿದ್ದಾರೆ. […]

ಸರ್ಕಾರದ ನಿಯಮ ಮೀರಿ ತಾಯಿ- 1ತಿಂಗಳ ಮಗುವಿನ ಕ್ವಾರಂಟೈನ್‌ ಮಾಡಿದ ಅಧಿಕಾರಿಗಳು
Follow us on

ಕಲಬುರಗಿ: ಕೊರೊನಾ ಹೆಮ್ಮಾರಿಯ ವಿರುದ್ಧದ ಹೋರಾಟದಲ್ಲಿ ಫ್ರಂಟ್‌ಲೈನ್‌ ಕಾರ್ಯಕರ್ತರ ಪಾತ್ರ ನಿಜಕ್ಕೂ ಸ್ಮರಣೀಯ. ನಿಜ, ಹಾಗಂತ ಅವರೇ ನಿರ್ಲಕ್ಷ್ಯ ವಹಿಸಿದ್ರೆ ಹೇಗೆ? ಇಂಥದ್ದೊಂದು ಘಟನೆ ಈಗ ಕಲಬುರಗಿಯಲ್ಲಿ ನಡೆದಿದೆ. ಸರ್ಕಾರವೇ ಮಾಡಿದ ನಿಯಮಗಳನ್ನ ಗಾಳಿಗೆ ತೂರಿದ್ದಾರೆ ಕಲಬರುಗಿಯ ಅಧಿಕಾರಿಗಳು.

10 ವರ್ಷದೊಳಗಿನ ಮಕ್ಕಳಿದ್ದವರನ್ನು ಮನೆಯಲ್ಲಿಯೇ ಹೋಂ‌ ಕ್ವಾರಂಟೈನ್‌ ಮಾಡಬಹುದು ಎಂದು ಸರಕಾರವೇ ನಿಯಮಗಳನ್ನ ರೂಪಿಸಿದೆ. ಆದ್ರೆ ನಿಯಮಗಳನ್ನ ಕಸದ ಬುಟ್ಟಿಗ್ಗೆಸೆದಿದ್ದಾರೆ ಇಲ್ಲಿನ ಅಧಿಕಾರಿಗಳು. ಮಹಾರಾಷ್ಟ್ರದಿಂದ ಬಂದಿದ್ದ ಮಹಿಳೆ ಮತ್ತು ಆಕೆಯ ಮಗುವನ್ನ ಕಳೆದು 10 ದಿನಗಳಿಂದ ಕ್ವಾರಂಟೈನ್‌ಲ್ಲಿಟ್ಟಿದ್ದಾರೆ. ಕೇವಲ ಒಂದು ತಿಂಗಳ ಮಗುವಿರುವ ಮಹಿಳೆಯನ್ನ ಮನೆಯಲ್ಲಿ ಕ್ವಾರಂಟೈನ್‌ ಮಾಡದೇ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿನ ಕ್ವಾರಂಟೈನ್‌ ಕೇಂದ್ರಲ್ಲಿರಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ, ತಾಯಿ ಮತ್ತು ಮಗುವಿನ ಕೊರೋನಾ ಟೆಸ್ಟ್‌ ರಿಪೋರ್ಟ್‌ ಬರೋವರೆಗೆ ಬಿಡೋದಿಲ್ಲಾ ಎನ್ನುತ್ತಿದ್ದಾರೆ. ಜೊತೆಗೆ ಕ್ವಾರಂಟೈನ್‌ ಕೇಂದ್ರದಲ್ಲಿ ಮೂಲಸೌಲಭ್ಯಗಳೂ ಇಲ್ಲಾ. ಹೀಗಾಗಿ ಕಲಬುರಗಿ ತಾಲೂಕಿನ ಖಣದಾಳ ಗ್ರಾಮದ ಈ ಮಹಿಳೆ ಮತ್ತು ಮಗು ಪರದಾಡುವಂತಾಗಿದೆ.