
ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 47,930 ಜನರಿಗೆ ಕೊರೊನಾ ದೃಢಪಟ್ಟಿದೆ. ರಾಜ್ಯದಲ್ಲಿಂದು ಒಂದೇ ದಿನ ಸೋಂಕಿನಿಂದ 490 ಜನರ ನಿಧನರಾಗಿದ್ದಾರೆ. ಇದೇ ಅವಧಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 20,897 ಜನರಿಗೆ ಸೋಂಕು ಪತ್ತೆಯಾಗಿದ್ದು, 281 ಜನರು ಮೃತಪಟ್ಟಿದ್ದಾರೆ. ಇಂದು ಹೊಸದಾಗಿ ಪತ್ತೆಯಾದ ಕೊರೊನಾ ಪ್ರಕರಣಗಳನ್ನೂ ಸೇರಿಸಿ ರಾಜ್ಯದಲ್ಲಿ ಈವರೆಗಿನ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 19,34,378 ಕ್ಕೆ ಏರಿಕೆಯಾಗಿದೆ. ಇದುವರೆಗೆ ಕರ್ನಾಟಕದಲ್ಲಿ ಕೊರೊನಾದಿಂದ 18,776 ಜನ ಸಾವನ್ನಪ್ಪಿದ್ದಾರೆ. ಇಂದು ಒಂದೇ ದಿನ 31,796 ಜನರು ಕೊರೊನಾ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಸೋಂಕಿತರ ಪೈಕಿ 13,51,097 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಸದ್ಯ 5,64,485 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ 1,315, ಬಳ್ಳಾರಿ 2,141, ಬೆಳಗಾವಿ 613, ಬೆಂಗಳೂರು ಗ್ರಾಮಾಂತರ 1,066, ಬೆಂಗಳೂರು ನಗರ 20,897, ಬೀದರ್ 313, ಚಾಮರಾಜನಗರ 930, ಚಿಕ್ಕಬಳ್ಳಾಪುರ 657, ಚಿಕ್ಕಮಗಳೂರು 582, ಚಿತ್ರದುರ್ಗ ಜಿಲ್ಲೆಯಲ್ಲಿ 111, ದಕ್ಷಿಣ ಕನ್ನಡ 1,694, ದಾವಣಗೆರೆ 453, ಧಾರವಾಡ 777, ಗದಗ 368, ಹಾಸನ 2,349, ಹಾವೇರಿ 370, ಕಲಬುರಗಿ 1,062, ಕೊಡಗು 576, ಕೋಲಾರ 424, ಕೊಪ್ಪಳ 291, ಮಂಡ್ಯ 1,959, ಮೈಸೂರು 1,854, ರಾಯಚೂರು 702, ರಾಮನಗರ 604, ಶಿವಮೊಗ್ಗ 650, ತುಮಕೂರು 2,001, ಉಡುಪಿ 962, ಉತ್ತರ ಕನ್ನಡ 917, ವಿಜಯಪುರ 597, ಯಾದಗಿರಿ ಜಿಲ್ಲೆಯಲ್ಲಿ 695 ಪ್ರಕರಣಗಳು ಪತ್ತೆಯಾಗಿದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ನಿಧನರಾದವರ ಜಿಲ್ಲಾವಾರು ವಿವರ
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು 490 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 281 ಜನರು ನಿಧನರಾಗಿದ್ದಾರೆ. ಬಳ್ಳಾರಿ 21 , ಶಿವಮೊಗ್ಗ, ತುಮಕೂರು 17, ಚಾಮರಾಜನಗರ 15, ಮೈಸೂರು 13, ಕಲಬುರಗಿ 12, ಉತ್ತರ ಕನ್ನಡ 9, ಬೀದರ್, ಕೊಡಗು 7, ವಿಜಯಪುರ, ಯಾದಗಿರಿಗಳಲ್ಲಿ ತಲಾ 6, ಬಾಗಲಕೋಟೆ, ದಾವಣಗೆರೆ, ಉಡುಪಿ ಜಿಲ್ಲೆಗಳಲ್ಲಿ ತಲಾ 5, ಧಾರವಾಡ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ನಾಲ್ವರು, ಕೋಲಾರ, ಗದಗ ಜಿಲ್ಲೆಗಳಲ್ಲಿ ತಲಾ ಮೂವರು, ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಇಬ್ಬರು, ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಒಬ್ಬರು ನಿಧನರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇಂದಿನ 09/05/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/cTrkjV9VNe @CMofKarnataka @BSYBJP @mla_sudhakar @drashwathcn @RAshokaBJP @BSBommai @CPBlr @PIBBengaluru @KarnatakaVarthe @PIBBengaluru @BBMPCOMM @BlrCityPolice @blrcitytraffic pic.twitter.com/DAhq9QIuOn
— K’taka Health Dept (@DHFWKA) May 9, 2021
ಇದನ್ನೂ ಓದಿ: ಕೊವಿಡ್ 19 ವಿರುದ್ಧದ ಹೋರಾಟಕ್ಕೆ 400 ನಿವೃತ್ತ ವೈದ್ಯರನ್ನು ನೇಮಕ ಮಾಡಲು ಸೇನಾಪಡೆ ನಿರ್ಧಾರ
ಕೊವಿಡ್ ನಿಭಾಯಿಸಲು ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯಿಂದ 6 ಸಲಹೆ
(Karnataka Covid Update 47930 new corona cases and 290 deaths today)
Published On - 7:52 pm, Sun, 9 May 21