ಅತಿ ಹೆಚ್ಚು ರೆಮ್​ಡೆಸಿವಿರ್ ಔಷಧ ಸಿಗುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 2ನೇ ಸ್ಥಾನ; ಡಿಸಿಎಂ ಅಶ್ವತ್ಥ ನಾರಾಯಣ

ಬಿಜೆಪಿ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಕೊರೊನಾ ಸೋಂಕು ನಿಯಂತ್ರಣದಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದೆ. ಅಲ್ಲದೇ, ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು.

ಅತಿ ಹೆಚ್ಚು ರೆಮ್​ಡೆಸಿವಿರ್ ಔಷಧ ಸಿಗುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 2ನೇ ಸ್ಥಾನ; ಡಿಸಿಎಂ ಅಶ್ವತ್ಥ ನಾರಾಯಣ
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು: ರೆಮ್​ಡೆಸಿವಿರ್ ಔಷಧವನ್ನು​ ಯಾರಿಗೂ ನೇರವಾಗಿ ಕೊಡಲಾಗುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ನೇರವಾಗಿ ಪೂರೈಸುತ್ತಿದ್ದೇವೆ. ದೇಶದಲ್ಲಿ ಹೆಚ್ಚು ರೆಮ್​ಡೆಸಿವಿರ್​ ಔಷಧ ಸಿಗುತ್ತಿರುವ 2ನೇ ರಾಜ್ಯ ನಮ್ಮದು. ಮೇ 10ರಿಂದ 35 ಸಾವಿರ ರೆಮ್​​ಡಿಸಿವಿರ್ ರಾಜ್ಯಕ್ಕೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಬೆಂಗಳೂರಿನಲ್ಲಿ ತಿಳಿಸಿದರು.

ರೆಮ್​ಡೆಸಿವಿರ್ ಔಷಧ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಸಿಪ್ಲಾ, ಜ್ಯುಬಿಲೆಂಟ್​, ಸಿಂಜಿನ್​​ ಕಂಪನಿಗಳಿಗೆ ಇಂದು ನೋಟಿಸ್ ನೀಡಲಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್​ ದಾಖಲಿಸುತ್ತೇವೆ. ಪ್ರಸ್ತುತ ಆಕ್ಸಿಜನ್ ಕೊರತೆ ಮತ್ತು ಬೇಡಿಕೆ ಇದೆ. 85ಕ್ಕಿಂತ ಕಡಿಮೆ ಸ್ಯಾಚುರೇಷನ್ ಇರುವ ಸೋಂಕಿತರು ಅಥವಾ ರೋಗಿಗಳಿಗೆ ಆಕ್ಸಿಜನ್ ಕಾನ್ಸಟ್ರೇಟರ್ ಪೂರೈಸುತ್ತೇವೆ. ತೀರಾ ಸ್ಯಾಚುರೇಷನ್ ಇರುವವರಿಗೆ ಆಕ್ಸಿಜನ್ ಕೊಟ್ಟು, ಆಸ್ಪತ್ರೆಗೆ ಪೂರೈಸುತ್ತೇವೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಕೊರೊನಾ ಸೋಂಕು ವಿಪರೀತ ಬೇಗವಾಗಿ ಹರಡುತ್ತಿದೆ. ಸೋಂಕು ಹರಡುವುದನ್ನು ತಡೆಯಲು ಸರ್ಕಾರದಿಂದ ಬಹಳಷ್ಟು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಬಿಜೆಪಿ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಕೊರೊನಾ ಸೋಂಕು ನಿಯಂತ್ರಣದಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದೆ. ಅಲ್ಲದೇ, ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಭಾಗಿಯಾಗಿದ್ದಾರೆ. ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುತ್ತಿದ್ದಾರೆ. ಸೇವಾಹಿ ಸಂಘಟನೆ ಹೆಸರಲ್ಲಿ ಹಗಲಿರುಳು ಯಾವುದೇ ಭಯವಿಲ್ಲದೆ ಕೆಲಸ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಸಚಿವ ಜಗದೀಶ್ ಶೆಟ್ಟರ್ ಮನವಿ
ಬೆಳಗಾವಿ ಜಿಲ್ಲೆಯಲ್ಲಿ 30kl ಆಕ್ಸಿಜನ್ ಡಿಮ್ಯಾಂಡ್ ಇದ್ದು ಮುಂದಿನ ದಿನಗಳಲ್ಲಿ ಅದನ್ನು ಹೆಚ್ಚಿಸುತ್ತೇವೆ. ಆಕ್ಸಿಜನ್ ವಿಚಾರವಾಗಿ ಕೇಂದ್ರ ಸಚಿವರ ಜೊತೆಗೆ ಸಂಪರ್ಕದಲ್ಲಿದ್ದೇ‌ನೆ. ಇನ್ನೂ ಎರಡರಿಂದ ಮೂರು ದಿನಗಳಲ್ಲಿ ಆಕ್ಸಿಜನ್ ಸಮಸ್ಯೆ ಕಡಿಮೆಯಾಗಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಆಕ್ಸಿಜನ್ ವಿತರಣೆ ಮಾಡಲು ಎನ್‌ಜಿಓಗಳಿಗೆ ಕಷ್ಟವಾಗುತ್ತಿದೆ. ಈ ಕಾರಣದಿಂದ ಜಿಲ್ಲಾಡಳಿತವೇ ಆಕ್ಸಿಜನ್ ವಿತರಣೆ ಮಾಡುತ್ತಿದೆ. ಕೆಲ ಖಾಸಗಿ ಆಸ್ಪತ್ರೆಯವರು ಹೆಚ್ಚಿನ ಹಣ ಚಾರ್ಜ್ ಮಾಡುತ್ತಿದ್ದಾರೆ. ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಅಂತಹ ಆಸ್ಪತ್ರೆಗಳ ಬಳಿ ಮಾನವೀಯವಾಗಿ ನಡೆದುಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಸಂಸದೆ ಸುಮಲತಾ ಅಂಬರೀಶ್ ವಿಶೇಷ ಸಂದರ್ಶನ: ‘ಕರ್ತವ್ಯ ದೋಷದಿಂದ ಒಂದು ಜೀವ ಹೋದ್ರೂ ಅದಕ್ಕೆ ನಾವೇ ಜವಾಬ್ದಾರಿ..’

ಕೊವಿಡ್ ವಾರ್ಡ್​ನಲ್ಲಿ ಹಾಡು, ನೃತ್ಯ; ಮಾನಸಿಕ ಖಿನ್ನತೆ ಕಡಿಮೆಯಾಗಿ ಸಂತಸದ ವಾತಾವರಣ ನಿರ್ಮಾಣ: ವಿಡಿಯೋ ನೋಡಿ

(Karnataka ranks 2nd in the country with highest number of rem decivir drugs says DCM Ashwaththa Narayana)