Karnataka Dam Water Level: ತುಂಗಭದ್ರಾ ಅಣೆಕಟ್ಟಿಗೆ ಒಳಹರಿವು ಹೆಚ್ಚಳ, ಜು.06ರ ರಾಜ್ಯದ ಡ್ಯಾಂಗಳ ನೀರಿನ ಮಟ್ಟ ವಿವರ ಹೀಗಿದೆ

|

Updated on: Jul 06, 2024 | 7:18 AM

ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಬಳ್ಳಾರಿ ಜಿಲ್ಲೆಯ ಹೊಡಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಳವಾಗಿದೆ. ಮೂರೇ ದಿನಗಳ ಅಂತರದಲ್ಲಿ ಜಲಾಶಯಕ್ಕೆ 4 ಟಿಎಂಸಿ ನೀರು ಹರಿದು ಬಂದಿದೆ. ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ವಿವರ ಇಲ್ಲಿದೆ.

Karnataka Dam Water Level: ತುಂಗಭದ್ರಾ ಅಣೆಕಟ್ಟಿಗೆ ಒಳಹರಿವು ಹೆಚ್ಚಳ, ಜು.06ರ ರಾಜ್ಯದ ಡ್ಯಾಂಗಳ ನೀರಿನ ಮಟ್ಟ ವಿವರ ಹೀಗಿದೆ
ತುಂಗಭದ್ರಾ ಜಲಾಶಯ
Follow us on

ತುಂಗಭದ್ರಾ ಜಲಾಶಯದಲ್ಲಿ ಇಂದು (ಜು.06) 11.71 ಟಿಎಂಸಿ ನೀರು ಇದೆ. ಕಳೆದ 24 ಗಂಟೆಯಲ್ಲಿ ಡ್ಯಾಂಗೆ 1.5 ಟಿಎಂಸಿ ನೀರು ಹರಿದು ಬಂದಿದೆ. ಜಲಾಶಯ 105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಮಂಡ್ಯ ಜನರ ಜೀವನಾಡಿ ಕೆಆರ್​ಎಸ್​ ಡ್ಯಾಂನಲ್ಲಿ 100 ಅಡಿ ನೀರು ಸಂಗ್ರಹವಾಗಿದೆ. ಹಾಗಾದರೆ ತುಂಗಭದ್ರಾ ಸೇರಿದಂತೆ ಕರ್ನಾಟಕದ ಡ್ಯಾಂಗಳಿಗೆ (Karnataka Dam Water Level) ಜು.06ರಂದು ಒಳ, ಹೊರ ಹರಿವು ಮತ್ತು ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಓದಿ

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 123.08 48.98 19.24 53901 430
ತುಂಗಭದ್ರಾ ಜಲಾಶಯ (Tungabhadra Dam) 497.71 105.79 11.71 3.07 19201 396
ಮಲಪ್ರಭಾ ಜಲಾಶಯ (Malaprabha Dam) 633.80 37.73 8.14 6.92 12173 194
ಕೆ.ಆರ್.ಎಸ್ (KRS Dam) 38.04 49.45 23.05 10.17 9686 546
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 31.46 12.70 44024 1341
ಕಬಿನಿ ಜಲಾಶಯ (Kabini Dam) 696.13 19.52 17.71 5.22 8321 2917
ಭದ್ರಾ ಜಲಾಶಯ (Bhadra Dam) 657.73 71.54 20.35 25.00 16171 350
ಘಟಪ್ರಭಾ ಜಲಾಶಯ (Ghataprabha Dam) 662.91 51.00 14.08 4.04 19992 108
ಹೇಮಾವತಿ ಜಲಾಶಯ (Hemavathi Dam) 890.58 37.10 16.53 13.83 8447 250
ವರಾಹಿ ಜಲಾಶಯ (Varahi Dam) 594.36 31.10 5.60 2.75 2669 0
ಹಾರಂಗಿ ಜಲಾಶಯ (Harangi Dam)​​ 871.38 8.50 5.00 3.03 5048 200
ಸೂಫಾ (Supa Dam) 564.00 145.33 36.71 30.02 25678 1370
ನಾರಾಯಣಪುರ ಜಲಾಶಯ (Narayanpura Dam) 492.25 33.31 21.17 14.24 218 218
ವಾಣಿವಿಲಾಸ ಸಾಗರ (VaniVilas Sagar Dam) 652.24 30.42 18.10 24.88 0 147

ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ತುಂಗಭದ್ರಾ ಅಣೆಕಟ್ಟಿಗೆ ಕಳೆದ ಒಂದು ವಾರದಿಂದ ಹೆಚ್ಚಿನ ಒಳಹರಿವು ಪ್ರಾರಂಭವಾಗಿದೆ. ಎರಡು ತಿಂಗಳ ಹಿಂದೆ ಅಣೆಕಟ್ಟೆಯಲ್ಲಿ 3 ಟಿಎಂಸಿ ಅಡಿ ಇದ್ದ ನೀರಿನ ಮಟ್ಟ ಈಗ 8 ಟಿಎಂಸಿ ಅಡಿಗೆ ಏರಿಕೆಯಾಗಿದ್ದು, ಕಳೆದ ಎರಡು ದಿನಗಳಿಂದ 10,503 ಕ್ಯೂಸೆಕ್ ಒಳಹರಿವು ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ