ಹತ್ತಿರದ ಅಂಗಡಿಗೆ ತೆರಳಲು ವಾಹನ ಬಳಸಬಹುದು, ಅವಕಾಶ ದುರ್ಬಳಕೆ ಮಾಡಿಕೊಳ್ಳುವಂತಿಲ್ಲ: ಪ್ರವೀಣ್ ಸೂದ್

|

Updated on: May 10, 2021 | 10:42 PM

Karnataka Lockdown: ಅಗತ್ಯವಸ್ತು ಖರೀದಿಗೆ ಹಳ್ಳಿಗಳಿಂದ ಪಟ್ಟಣಕ್ಕೆ ಬರಬಹುದು. ತರಕಾರಿ, ಅಥವಾ ಅಗತ್ಯ ವಸ್ತುಗಳ ಖರೀದಿ ಮಾಡಲು ಮನೆ ಸಮೀಪದಲ್ಲಿ ವಾಹನ ಬಳಕೆ ಮಾಡಲು ನಿರ್ಬಂಧವಿಲ್ಲ. ಆದರೆ ಯಾರೂ ಸಹ ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ಹತ್ತಿರದ ಅಂಗಡಿಗೆ ತೆರಳಲು ವಾಹನ ಬಳಸಬಹುದು, ಅವಕಾಶ ದುರ್ಬಳಕೆ ಮಾಡಿಕೊಳ್ಳುವಂತಿಲ್ಲ: ಪ್ರವೀಣ್ ಸೂದ್
ಡಿಜಿ ಐಜಿಪಿ ಪ್ರವೀಣ್ ಸೂದ್
Follow us on

ಬೆಂಗಳೂರು: ಕರ್ನಾಟಕ ಲಾಕ್​ಡೌನ್​ನ ಮೊದಲ ದಿನವಾದ ಇಂದು ವಾಹನಗಳನ್ನು ರಸ್ತೆಗಿಳಿಸಿ ಲಾಠಿಯೇಟು ತಿಂದವರು ಸಾವಿರಾರು ಜನ. ವಾಹನಗಳನ್ನು ರಸ್ತೆಗಿಳಿಸಲು ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆಯನ್ನು ಈ ಮುನ್ನವೇ ನೀಡಿತ್ತಾದರೂ, ‘ಹತ್ತಿರದ ಅಂಗಡಿಗೆ ತೆರಳಲು ವಾಹನ ಬಳಕೆಗೆ ನಿರ್ಬಂಧವಿಲ್ಲ, ಆದರೆ ಇದನ್ನ ದುರುಪಯೋಗಪಡಿಸಿಕೊಳ್ಳಬಾರದು’ ಎಂದು ರಾಜ್ಯ ಪೊಲೀಸ್​ ಮಹಾ ನಿರ್ದೇಶಕ ಪ್ರವೀಣ್​ ಸೂದ್​ ಟ್ವೀಟ್ ಮೂಲಕ ತಿಳಿಸಿದ್ದಾರೆ.

ನಿಮ್ಮ ಹತ್ತಿರದ ಸ್ಥಳಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿ. ಅಗತ್ಯವಸ್ತು ಖರೀದಿಗೆ ಹಳ್ಳಿಗಳಿಂದ ಪಟ್ಟಣಕ್ಕೆ ಬರಬಹುದು. ತರಕಾರಿ, ಅಥವಾ ಅಗತ್ಯ ವಸ್ತುಗಳ ಖರೀದಿ ಮಾಡಲು ಮನೆ ಸಮೀಪದಲ್ಲಿ ವಾಹನ ಬಳಕೆ ಮಾಡಲು ನಿರ್ಬಂಧವಿಲ್ಲ. ಆದರೆ ಯಾರೂ ಸಹ ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಅವರು ತಿಳಿಸಿದ್ದಾರೆ.  ಈ ಮೂಲಕ ನೀಡಿರುವ ಅವಕಾಶವನ್ನು ದುರ್ಬಳಕೆ ಮಾಡಿಕೊಂಡರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿದಿನ ವಾಹನ ಬಳಸದೇ, ಅವಶ್ಯ ಸಂದರ್ಭದಲ್ಲಿ ಮಾತ್ರ ಹತ್ತಿರದ ಅಂಗಡಿಗೆ ತೆರಳಲು ವಾಹನ ಬಳಕೆ ಅವಕಾಶ ನೀಡಲಾಗಿದೆ ಎಂದು ಟ್ವೀಟ್​ನಲ್ಲಿ ತಿಳಿಸಲಾಗಿದೆ. ಎಲ್ಲರೂ ಮನೆಯಲ್ಲಿ ಸುರಕ್ಷತೆಯಿಂದಿರಿ ಎಂದು ಸಾರ್ವಜನಿಕರಲ್ಲಿ ರಾಜ್ಯ ಪೊಲೀಸ್​ ಮಹಾ ನಿರ್ದೇಶಕ ಪ್ರವೀಣ್​ ಸೂದ್ ಮನವಿ ಮಾಡಿದ್ದಾರೆ.



ಇದನ್ನೂ ಓದಿ: Karnataka Lockdown Package: ಲಾಕ್​ಡೌನ್ ಪ್ಯಾಕೇಜ್ ಘೋಷಣೆ ಬಗ್ಗೆ ಸುಳಿವು ನೀಡಿದ ಕಂದಾಯ ಸಚಿವ ಆರ್.ಅಶೋಕ್

Covid-19 Karnataka Update: ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 39,305 ಜನರಿಗೆ ಕೊರೊನಾ ಸೋಂಕು ದೃಢ, 596 ಜನರು ನಿಧನ

(Karnataka DG IGP Praveen Sood tweets people can use vehicle to use vehicle to nearby shops in lockdown)

Published On - 10:29 pm, Mon, 10 May 21