ಕರ್ನಾಟಕದಲ್ಲಿ ಹೊರರಾಜ್ಯ ನೋಂದಣಿ ವಾಹನ ಹೊಂದಿರುವವರಿಗೆ ಸರ್ಕಾರದಿಂದ ಬಿಗ್​ ಶಾಕ್

ಕರ್ನಾಟಕ ಸರ್ಕಾರವು ಹೊರರಾಜ್ಯ ನೋಂದಣಿಯ ವಾಹನಗಳಿಗೆ ಹೊಸ ತೆರಿಗೆ ವಿಧಿಸಲು ಸುಗ್ರೀವಾಜ್ಞೆ ಹೊರಡಿಸಿದೆ. ರಾಜ್ಯದ ಕಾಯಂ ಬಳಕೆ ವಾಹನಗಳ ಮಾಲೀಕರು ಇನ್ನು ಮುಂದೆ ತೆರಿಗೆ ಪಾವತಿಸಬೇಕು. ಇದರಿಂದ ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣ ಹಾಗೂ ರಾಜ್ಯದ ಆದಾಯ ವೃದ್ಧಿ ಸರ್ಕಾರದ ಮುಖ್ಯ ಉದ್ದೇಶ. 25 ಲಕ್ಷ ರೂ. ಮೇಲ್ಪಟ್ಟ ಎಲೆಕ್ಟ್ರಿಕ್ ವಾಹನಗಳಿಗೂ ತೆರಿಗೆ ಅನ್ವಯ. ಇದು ತೆರಿಗೆ ವಂಚನೆ ತಡೆಗಟ್ಟಲು ಪರಿಣಾಮಕಾರಿ ಕ್ರಮ.

ಕರ್ನಾಟಕದಲ್ಲಿ ಹೊರರಾಜ್ಯ ನೋಂದಣಿ ವಾಹನ ಹೊಂದಿರುವವರಿಗೆ ಸರ್ಕಾರದಿಂದ ಬಿಗ್​ ಶಾಕ್
ಸಾಂದರ್ಭಿಕ ಚಿತ್ರ

Updated on: Apr 30, 2026 | 5:23 PM

ಬೆಂಗಳೂರು, ಏ,30: ರಾಜ್ಯದಲ್ಲಿ ಹೊರರಾಜ್ಯದ ವಾಹನಗಳ ಸಂಚಾರ ಹೆಚ್ಚಾಗಿದೆ. ಇದರಿಂದ ಪರಿಸರ ಮಾಲಿನ್ಯ ಆಗುತ್ತಿದೆ. ದೆಹಲಿ ಸೇರಿದಂತೆ ದೇಶದ ಅನೇಕ ರಾಜ್ಯಗಳಿಂದ ನೋಂದಣಿ ಆಗಿರುವ ವಾಹನಗಳು ಬರುತ್ತಿದೆ. ಹೆಚ್ಚಾಗಿ ದೆಹಲಿಯಿಂದ ವಾಹನಗಳು ಬೆಂಗಳೂರು ಸೇರಿದಂತೆ ರಾಜ್ಯದ ಅನೇಕು ಕಡೆ ಬಂದಿದೆ. ಇದರಿಂದ ರಾಜ್ಯದಲ್ಲಿ ಗಾಳಿಯ ಮಟ್ಟ, ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದನ್ನು ತಡೆಯಲು ರಾಜ್ಯದ ಸರ್ಕಾರ ಹೊಸ ಪ್ಲಾನ್​​ ಒಂದನ್ನು ಮಾಡಿದೆ. ರಾಜ್ಯದಲ್ಲಿ ಸಂಚರಿಸುತ್ತಿರುವ ಹೊರರಾಜ್ಯ ನೋಂದಣಿಯ ವಾಹನಗಳಿಂದ ತೆರಿಗೆ ಸಂಗ್ರಹಿಸಲು ಕರ್ನಾಟಕ ಸರ್ಕಾರವು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ವಿಧಿಸುವಿಕೆ (ತಿದ್ದುಪಡಿ) ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ ಬೇರೆ ರಾಜ್ಯಗಳಲ್ಲಿ ನೋಂದಣಿಯಾಗಿ ಕರ್ನಾಟಕದಲ್ಲಿ ಖಾಯಂ ಆಗಿ ಬಳಸಲ್ಪಡುವ ವಾಹನ ಮಾಲೀಕರು ಇನ್ನು ಮುಂದೆ ರಾಜ್ಯ ಸರ್ಕಾರಕ್ಕೆ ತೆರಿಗೆ ಪಾವತಿಸುವುದು ಕಡ್ಡಾಯವಾಗಲಿದೆ.

ಹೊರರಾಜ್ಯಗಳಲ್ಲಿ ನೋಂದಣಿಯಾಗಿ, ಕರ್ನಾಟಕದಲ್ಲಿ ಸತತವಾಗಿ ಸಂಚರಿಸುವ ಕಾರು, ಜೀಪು, ಮಿನಿ ಬಸ್ ಹಾಗೂ ದ್ವಿಚಕ್ರ ವಾಹನಗಳಿಗೆ ಈ ನಿಯಮ ಅನ್ವಯಿಸುತ್ತದೆ. 10 ಲಕ್ಷ ರೂ.ದಿಂದ 15 ಲಕ್ಷ ರೂ.ದವರೆಗಿನ ವಾಹನಗಳಿಗೆ ಶೇ. 15 ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. 15 ಲಕ್ಷ ರೂ.ಕ್ಕಿಂತ ಅಧಿಕ ಮೌಲ್ಯದ ವಾಹನಗಳಿಗೆ ಶೇ. 18 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಇನ್ನು ಹಳೆಯ ವಾಹನಗಳಿಗೆ ವಾಹನದ ವಯಸ್ಸು ಮತ್ತು ಸವೆತದ ಆಧಾರದ ಮೇಲೆ ತೆರಿಗೆಯ ದರದಲ್ಲಿ ವ್ಯತ್ಯಾಸವಿರುತ್ತದೆ. ಇದರ ಜತೆಗೆ ಇವಿ (EV) ವಾಹನಗಳಿಗೂ ತೆರಿಗೆ ಇದೆ ಎಂದು ಹೇಳಲಾಗಿದೆ. ಈ ಮೊದಲು ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, 25 ಲಕ್ಷ ರೂ.ಕ್ಕಿಂತ ಅಧಿಕ ಮೌಲ್ಯದ ಎಲೆಕ್ಟ್ರಿಕ್ ವಾಹನಗಳಿಗೆ ಶೇ. 10 ರಷ್ಟು ತೆರಿಗೆ ವಿಧಿಸಲು ಸರ್ಕಾರ ಉದ್ದೇಶಿಸಿದೆ.

ಇದನ್ನೂ ಓದಿ: ಜೊತೆ ನೃತ್ಯ ಮಾಡಲು ಪೀಡಿಸಿ, ಮೊಬೈಲ್ ನಂಬರ್‌ಗಾಗಿ ಡಿಮ್ಯಾಂಡ್!: ಬೆಂಗಳೂರು ರೆಸಾರ್ಟ್‌ನಲ್ಲಿ ಮಹಿಳೆಗೆ ಪುರುಷರ ಗುಂಪು ಕಿರುಕುಳ

ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ದರಗಳು

ವಾಹನದ ಪ್ರಕಾರ / ಮೌಲ್ಯ ಉದ್ದೇಶಿತ ತೆರಿಗೆ ದರ
₹10 ಲಕ್ಷದಿಂದ ₹15 ಲಕ್ಷದವರೆಗಿನ ವಾಹನಗಳು ಶೇ. 15
₹15 ಲಕ್ಷಕ್ಕಿಂತ ಅಧಿಕ ಮೌಲ್ಯದ ವಾಹನಗಳು ಶೇ. 18
₹25 ಲಕ್ಷಕ್ಕಿಂತ ಅಧಿಕ ಮೌಲ್ಯದ ಎಲೆಕ್ಟ್ರಿಕ್ (EV) ವಾಹನಗಳು ಶೇ. 10
ಹಳೆಯ ವಾಹನಗಳು ವಾಹನದ ವಯಸ್ಸು ಮತ್ತು ಸವೆತದ ಆಧಾರದ ಮೇಲೆ ವ್ಯತ್ಯಾಸವಾಗುತ್ತದೆ

ಸರ್ಕಾರದ ಈ ಕ್ರಮಕ್ಕೆ ಕಾರಣವೇನು?

ರಾಜ್ಯದಲ್ಲಿ ಸಾವಿರಾರು ಹೊರರಾಜ್ಯ ನೋಂದಣಿಯ ವಾಹನಗಳು ಸಂಚರಿಸುತ್ತಿದ್ದರೂ, ಅವುಗಳಿಂದ ರಾಜ್ಯದ ಬೊಕ್ಕಸಕ್ಕೆ ಯಾವುದೇ ಆದಾಯ ಬರುತ್ತಿರಲಿಲ್ಲ. ಅಲ್ಲದೆ, ತೆರಿಗೆಯನ್ನು ತಪ್ಪಿಸಲು ಅನೇಕರು ನೆರೆಯ ರಾಜ್ಯಗಳಲ್ಲಿ ವಾಹನ ನೋಂದಣಿ ಮಾಡಿಸುತ್ತಿದ್ದರು. ಇದನ್ನು ತಡೆಯಲು ಮತ್ತು ರಾಜ್ಯದ ತೆರಿಗೆ ಆದಾಯವನ್ನು ಹೆಚ್ಚಿಸಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದರ ಜತೆಗೆ ರಾಜ್ಯದಲ್ಲಿ ಇಂತಹ ವಾಹನಗಳಿಂದ ಪರಿಸರ ಮಾಲಿನ್ಯ ಆಗುತ್ತಿದೆ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us