ಮಡಿಕೇರಿ: ವಿರಾಜಪೇಟೆ ತಾಲೂಕಿನ ಕರಡ ಸಮೀಪದ ಬೋಯಿಕೇರಿ ಗ್ರಾಮದ ವೃದ್ಧೆಯೊಬ್ಬರು ಸಾವನ್ನಪ್ಪಿದ್ದು, ಮೃತ ಮಹಿಳೆಯನ್ನು ಅಂತ್ಯಸಂಸ್ಕಾರ ಮಾಡಿದ ಬಳಿಕ ಆಸ್ಪತ್ರೆಯಿಂದ ನಿಮ್ಮ ತಾಯಿ ಸೀರಿಯಸ್ ಅಂತ ಕರೆ ಬಂದಿದೆ. ದೇವಕ್ಕಿ(75) ಎಂಬ ವೃದ್ಧೆ ಕೊವಿಡ್ನಿಂದ ಮೃತಪಟ್ಟು ಅದಾಗಲೇ ಎರಡು ವಾರವಾಗಿದೆ. ವೃದ್ಧೆಯ ಕುಟುಂಬ ಇನ್ನೂ ದೇವಕ್ಕಿ ಅಗಲಿಕೆಯ ನೋವಲ್ಲೇ ಕಣ್ಣೀರಿಡುತ್ತಿದೆ. ಹೀಗಿರುವಾಗಲೇ ಅವರ ಕುಟುಂಬಕ್ಕೆ ಶಾಕ್ವೊಂದು ಕಾದಿತ್ತು.
ಇದೇ ಆಗಸ್ಟ್ 1 ಕ್ಕೆ ಮಡಿಕೇರಿ ಕೊವಿಡ್ ಆಸ್ಪತ್ರೆ ಸಿಬ್ಬಂದಿ ದೇವಕ್ಕಿ ಅವರ ಪುತ್ರ ಪೊನ್ನಪ್ಪನವರಿಗೆ ಕರೆ ಮಾಡಿ, ನಿಮ್ಮ ತಾಯಿ ದೇವಕ್ಕಿ ವೆಂಟಿಲೇಟರ್ನಲ್ಲಿದ್ದಾರೆ. ಇನ್ನೂ ಸೀರಿಯಸ್ ಕಂಡಿಷನ್ನಲ್ಲೇ ಇದ್ದಾರೆ ಅಂತ ಹೇಳಿದ್ದಾರೆ. ಈ ಮಾತನ್ನು ಕೇಳಿದ ಪೊನ್ನಪ್ಪ ಅವರಿಗೆ ತಲೆ ಕೆಟ್ಟಂತಾಯಿತು. ಕಾರಣ ಅವರ ತಾಯಿ ಜುಲೈ 21ರಂದೇ ಮೃತಪಟ್ಟಿದ್ದರು. ಅಲ್ಲದೇ ತಾಯಿಯ ದೇಹವನ್ನು ತಂದು ತಮ್ಮ ಗ್ರಾಮದಲ್ಲಿ ಅಂತ್ಯಸಂಸ್ಕಾರವನ್ನೂ ನಡೆಸಿದ್ದರು. ಆದರೆ ಇದೀಗ ಆಸ್ಪತ್ರೆಯವರೆ ಕರೆ ಮಾಡಿ ನಿಮ್ಮ ತಾಯಿಗೆ ಸೀರಿಯಸ್ ಅಂತ ಹೇಳಿದ್ದು ಆಘಾತವಾಗಿದೆ.
ಆದರೆ ಏನೋ ತಪ್ಪಾಗಿದೆ ಅಂತ ಸುಮ್ಮನಾಗಿದ್ದಾರೆ. ಆದರೆ ಒಂದು ವಾರದ ಬಳಿಕ ಅಂದರೆ ಆಗಸ್ಟ್ 7ಕ್ಕೆ ಮಡಿಕೇರಿ ಕೊವಿಡ್ ಆಸ್ಪತ್ರೆಯ ಐಸಿಯುನಿಂದ ವೈದ್ಯರೊಬ್ಬರು ಕರೆ ಮಾಡಿದರು. ದೇವಕ್ಕಿ ಕಡೆಯವರಾ ಅಂತ ಕೇಳಿದ್ದಾರೆ. ಆಗ ಹೌದು ಎಂದಿದ್ದಾರೆ. ಅದಕ್ಕೆ ಆ ವೈದ್ಯರು, ದೇವಕ್ಕಿಯವರು ಇನ್ನೂ ವೆಂಟಿಲೇಟರ್ನಲ್ಲೇ ಇದ್ದಾರೆ ನಿಮಗೆ ಗೊತ್ತಿಲ್ವಾ ಅಂತ ಕೇಳಿದ್ದಾರೆ. ಸಿಟ್ಟಿಗೆದ್ದ ಪೊನ್ನಪ್ಪ ವೈದ್ಯರನ್ನ ಚೆನ್ನಾಗಿ ದಬಾಯಿಸಿದ್ದಾರೆ. ಆದರೆ ಈ ಪ್ರಕರಣವೀಗ ಹಲವು ಗೊಂದಲಗಳನ್ನ ಸೃಷ್ಟಿಮಾಡಿದೆ.
ಪೊನ್ನಪ್ಪ ಅವರು ತಂದಿರುವುದು ನಿಜವಾಗಿಯೂ ಅವರ ತಾಯಿ ದೇವಕ್ಕಿ ಅವರ ದೇಹವೋ ಅಥವಾ ಬೇರೆಯವರ ದೇಹವೋ ಗೊಂದಲ ಮೂಡಿದೆ. ಜೊತೆಗೆ ದೇವಕಿಯವರು ಇನ್ನೂ ಆಸ್ಪತ್ರೆಯಲ್ಲೇ ಬದುಕಿರುಬಹುದಾ ಅನ್ನೋ ಡೌ ಗೊಂದಲ ಎಲ್ಲರನ್ನು ಕಾಡಿದೆ. ಆದರೆ ಇದನ್ನ ಪೊನ್ನಪ್ಪ ಅವರು ಒಪ್ಪಿಕೊಳ್ಳುತ್ತಿಲ್ಲ. ತಾಯಿಯ ದೇಹವನ್ನೇ ತಂದು ಸಂಸ್ಕಾರ ಮಾಡಿದ್ದೇನೆ. ಆಸ್ಪತ್ರೆಯಲ್ಲೇ ತಾಯಿಯ ಮುಖ ಚಹರೆ ನೋಡಿದ್ದೇನೆ ಅಂತ ಅವರು ಹೇಳುತ್ತಿದ್ದಾರೆ.
ಊರಿನವರಿಗೆ ಇನ್ನೂ ಡೌಟು
ಊರಿನವರಿಗೆ ಏನಾಗಿದೆ ಅಂತ ಡೌಟ್ ಶುರುವಾಗಿದೆ. ಒಂದೆಡೆ ಆಸ್ಪತ್ರೆಯವರ ಕರೆಯಿಂದ ಪೊನ್ನಪ್ಪ ಕುಟುಂಬ ಮಾನಸಿಕವಾಗಿ ಕುಗ್ಗಿದದ್ದಾರೆ. ಇನ್ನೊಂದೆಡೆ ಜನರ ಮಾತಿನಿಂದಲೂ ಕಂಗೆಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಡಿಕೇರಿ ಕೊವಿಡ್ ಆಸ್ಪತ್ರೆ ಅಧೀಕ್ಷಕ ಡಾ.ಮಂಜುನಾಥ್, ಮೊದಲ ಬಾರಿ ಪೊನ್ನಪ್ಪ ಅವರಿಗೆ ಕರೆ ಹೋಗಿದ್ದು ನನ್ನ ಗಮನಕ್ಕೆ ಬಂದಿತ್ತು. ಈ ಬಗ್ಗೆ ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟಿದ್ದೆ. ಆದರೆ ಇದೀಗ ಎರಡನೇ ಬಾರಿ ಕರೆ ಹೋಗಿರುವುದು ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟ ವೈದ್ಯರನ್ನು ಕರೆ ಮಾಡಿ ವಿಚಾರಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ
ಬೆಳಗಾವಿ-ಮಹಾರಾಷ್ಟ್ರ ಗಡಿ ವಿವಾದ ಕುರಿತು ಪ್ರಧಾನಿ ಮೋದಿಗೆ ಪತ್ರ ಬರೆದ ಎಂಇಎಸ್ ಪುಂಡರು
ಮಂಡ್ಯ ಅಕ್ರಮ ಗಣಿಗಾರಿಕೆ ಪ್ರಕರಣ; ಸಿಎಂ ಗಮನಕ್ಕೆ ತರಲು ಜೆಡಿಎಸ್ ನಿರ್ಧಾರ
(Madikeri Covid Hospital calls to son and tells your mother is ill though she is dead)