ಅಕ್ರಮವಾಗಿ ಮಣ್ಣು ಲೋಟಿಯಾದ್ರು ಕ್ಯಾರೆ ಅನ್ನದೆ ಕೈ ಕಟ್ಟಿ ಕುಳಿತ ಅಧಿಕಾರಿಗಳು

|

Updated on: Jan 22, 2020 | 4:01 PM

ಕೊಪ್ಪಳ: ಅವರಿಗೆ ಅಲ್ಲಿ ಹೇಳೋರ್ ಇಲ್ಲ. ಕೇಳೋರ್‌ಇಲ್ಲ. ಅವರು ಆಡಿದ್ದೇ ಆಟವಾಗಿದೆ. ಕಣ್ಣಾ ಮಂದೆಯೇ ದಿನಕ್ಕೆ ನೂರಾರು ಲೋಡ್ ಮಣ್ಣು ಅಕ್ರಮವಾಗಿ ಸಾಗಟವಾಗುತ್ತಿದ್ರೂ, ಅಧಿಕಾರಿಗಳು ಮಾತ್ರ ಕಳ್ಳ ಬೆಕ್ಕಿನಂತೆ ಕಣುಮುಚ್ಚಿ ಕುಳಿತಿದ್ದಾರೆ. ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮಣ್ಣು ಸಾಗಾಟ! ಕೊಪ್ಪಳ ತಾಲೂಕಿನ ಹಿರೇಕಾಸನಕಂಡಿ ಬಳಿ ಹಿಟಾಚಿಗಳು ಆರ್ಭಟಿಸುತ್ತಾ ಲಾರಿಗಳಿಗೆ ಮಣ್ಣನ್ನು ಲೋಡ್ ಮಾಡುತ್ತಿವೆ. ಮಣ್ಣು ತೆಗೆದು ತೆಗೆದು ಅಲ್ಲಿನ ಪ್ರದೇಶವೆಲ್ಲಾ ಕೆರೆಯಂತಾಗಿದೆ. ಗುಡ್ಡ ನೆಲಸಮವಾಗಿದೆ. ನೈಸರ್ಗಿಕ ಸಂಪತ್ತು ಲೂಟಿ ಮಾಡಿದ್ದಾರೆ. ಇಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು […]

ಅಕ್ರಮವಾಗಿ ಮಣ್ಣು ಲೋಟಿಯಾದ್ರು ಕ್ಯಾರೆ ಅನ್ನದೆ ಕೈ ಕಟ್ಟಿ ಕುಳಿತ ಅಧಿಕಾರಿಗಳು
Follow us on

ಕೊಪ್ಪಳ: ಅವರಿಗೆ ಅಲ್ಲಿ ಹೇಳೋರ್ ಇಲ್ಲ. ಕೇಳೋರ್‌ಇಲ್ಲ. ಅವರು ಆಡಿದ್ದೇ ಆಟವಾಗಿದೆ. ಕಣ್ಣಾ ಮಂದೆಯೇ ದಿನಕ್ಕೆ ನೂರಾರು ಲೋಡ್ ಮಣ್ಣು ಅಕ್ರಮವಾಗಿ ಸಾಗಟವಾಗುತ್ತಿದ್ರೂ, ಅಧಿಕಾರಿಗಳು ಮಾತ್ರ ಕಳ್ಳ ಬೆಕ್ಕಿನಂತೆ ಕಣುಮುಚ್ಚಿ ಕುಳಿತಿದ್ದಾರೆ.

ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮಣ್ಣು ಸಾಗಾಟ!
ಕೊಪ್ಪಳ ತಾಲೂಕಿನ ಹಿರೇಕಾಸನಕಂಡಿ ಬಳಿ ಹಿಟಾಚಿಗಳು ಆರ್ಭಟಿಸುತ್ತಾ ಲಾರಿಗಳಿಗೆ ಮಣ್ಣನ್ನು ಲೋಡ್ ಮಾಡುತ್ತಿವೆ. ಮಣ್ಣು ತೆಗೆದು ತೆಗೆದು ಅಲ್ಲಿನ ಪ್ರದೇಶವೆಲ್ಲಾ ಕೆರೆಯಂತಾಗಿದೆ. ಗುಡ್ಡ ನೆಲಸಮವಾಗಿದೆ. ನೈಸರ್ಗಿಕ ಸಂಪತ್ತು ಲೂಟಿ ಮಾಡಿದ್ದಾರೆ. ಇಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡೋದೆ ಕೆಲವರಿಗೆ ನಿತ್ಯ ಕಾಯಕ. ಗಣಿ ಭೂ ವಿಜ್ಞಾನ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ನಿತ್ಯ ನೂರಾರು ಟಿಪ್ಪರ್ ಮಣ್ಣು ಲೂಟಿ ಮಾಡಲಾಗ್ತಿದೆ. ಕಾಸನಕಂಡಿ ಭಾಗದ ಬಹುತೇಕ ಸರ್ಕಾರಿ ಜಮೀನುಗಳನ್ನ ಬಗೆದು ಮಣ್ಣು ಲೂಟಿ ಮಾಡಲಾಗ್ತಿದೆ. ನಿತ್ಯ ನೂರಾರು ಟಿಪ್ಪರ್‌ಗಳ ಮೂಲಕ ಅಕ್ರಮ ಮಣ್ಣು ಲೂಟಿ ಮಾಡ್ತಿದ್ರೂ, ಗಣಿ ಭೂ ವಿಜ್ನಾನ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ಇದು ಕೇವಲ ಕೊಪ್ಪಳ ತಾಲೂಕಿಗೆ ಮಾತ್ರ ಸೀಮಿತವಾಗಿಲ್ಲ. ಕುಷ್ಟಗಿ ಭಾಗದಲ್ಲೂ ಅಪಾರ ಪ್ರಮಾಣದ ಮಣ್ಣು ಲೂಟಿಯಾಗ್ತಿದೆ. ಬಹುತೇಕ ಜನ ಶಾಸಕರು, ಜನ ಪ್ರತಿನಿಧಿಗಳ ಬೆಂಬಲಿಗರೇ ಈ ಮಾಫಿಯಾದಲ್ಲಿ ಶಾಮೀಲಾಗಿದ್ದಾರೆ. ಒಂದ್ಕಡೆ ಪರ್ಮಿಷನ್ ತಗೆಸಿದ್ರೆ, ಮೂರು ಕಡೆ ವಿತ್‌ ಔಟ್ ಪರ್ಮಿಷನ್‌ನಲ್ಲಿ ಮಣ್ಣು ಲೂಟಿ ಮಾಡಲಾಗ್ತಿದೆ. ಇನ್ನು ಕೆಲವರಿಗೆ ಪರ್ಮಿಷನ್ ಅಂದ್ರೆ ಏನೂ ಅಂತನೂ ಗೊತ್ತಿಲ್ಲ. ಹೀಗೆ ರಾಜಾರೋಷವಾಗಿ ಮಣ್ಣು ಲೂಟಿ ಮಾಡುತ್ತಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಅಕ್ರಮವಾಗಿ ನೈಸರ್ಗಿಕ ಸಂಪತ್ತು ಲೂಟಿಯಾಗುತಿದ್ರು, ಆಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಅಧಿಕಾರಿಗಳ ನಡೆ ಅಕ್ರಮಕ್ಕೆ ಸಾಥ್ ನೀಡುತ್ತಿದ್ದಾರಾ ಅನ್ನೋ ಅನುಮಾನ ಹುಟ್ಟಿಸಿದೆ.

Published On - 3:56 pm, Wed, 22 January 20