ಇದು ಜಗದ್ವಿಖ್ಯಾತ ಕಿನ್ನಾಳ ಗ್ರಾಮದ ಪ್ರೌಢ ವಿದ್ಯಾರ್ಥಿಗಳ ದುಃಸ್ಥಿತಿ: ಸೇತುವೆಯಿಲ್ಲದೆ ಮೊಳಕಾಲುದ್ದದ ನೀರಿನಲ್ಲಿ ಸಾಗಬೇಕು

| Updated By: ಸಾಧು ಶ್ರೀನಾಥ್​

Updated on: Sep 20, 2022 | 3:18 PM

kinnala village: ಶಾಲೆಗೆ ತೆರಳಲು ವಿದ್ಯಾರ್ಥಿಗಳ ನಿತ್ಯ ನರಕಯಾತನೆ: ಶಾಲೆಗೆ ತೆರಳಲು ವಿದ್ಯಾರ್ಥಿಗಳ ನಿತ್ಯ ನರಕಯಾತನೆ, ಹಳ್ಳದಲ್ಲಿ ಇಳಿದು ಬುದುಕು ಸಾಗಬೇಕು

ಇದು ಜಗದ್ವಿಖ್ಯಾತ ಕಿನ್ನಾಳ ಗ್ರಾಮದ ಪ್ರೌಢ ವಿದ್ಯಾರ್ಥಿಗಳ ದುಃಸ್ಥಿತಿ: ಸೇತುವೆಯಿಲ್ಲದೆ ಮೊಳಕಾಲುದ್ದದ ನೀರಿನಲ್ಲಿ ಸಾಗಬೇಕು
ಶಾಲೆಗೆ ತೆರಳಲು ವಿದ್ಯಾರ್ಥಿಗಳ ನಿತ್ಯ ನರಕಯಾತನೆ, ಹಳ್ಳದಲ್ಲಿ ಇಳಿದು ಬುದುಕು ಸಾಗಬೇಕು
Follow us on

ಕೊಪ್ಪಳ: ಶಾಲೆಗೆ ತೆರಳಲು ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುವ ಮತ್ತೊಂದು ಪ್ರಕರಣ ವರದಿಯಾಗಿದೆ. ಹಳ್ಳದಲ್ಲಿ ಇಳಿದು, ಪ್ರಾಣದ ಹಂಗು ತೊರೆದು ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಶಾಲೆಗೆ ತೆರಳುವ ಪರಿಸ್ಥಿತಿ ಎದುರಾಗಿದೆ. ಮೊಣಕಾಲುತನಕದ ನೀರಿನಲ್ಲಿ ವಿದ್ಯಾರ್ಥಿಗಳು ಹಳ್ಳ ದಾಟಬೇಕಿದೆ. ಸೇತುವೆ ಇಲ್ಲದ ಕಾರಣ ವಿದ್ಯಾರ್ಥಿಗಳು ಹಳ್ಳದಲ್ಲಿ ಇಳಿದು ಶಾಲೆಗೆ ತೆರಳುತ್ತಿದ್ದಾರೆ. ಕೊಪ್ಪಳ (koppal) ತಾಲೂಕಿನ ಮಾದಿನೂರು ಗ್ರಾಮದ ವಿದ್ಯಾರ್ಥಿಗಳು ಈ ಸಂಕಷ್ಟ ಅನುಭವಿಸುತ್ತಿದ್ದಾರೆ.’

ಮಾದಿನೂರಿನಿಂದ ಕಿನ್ನಾಳ (kinnala) ಗ್ರಾಮದ ಪ್ರೌಢ ಶಾಲೆಗೆ ಹೊಗುವ ವಿದ್ಯಾರ್ಥಿಗಳ ದುಃಸ್ಥಿತಿ ಇದಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸೇತುವೆ (bridge) ಇಲ್ಲದೆ ಇಲ್ಲಿನ ಜನ ಜಾನುವಾರು ಪರದಾಡುತ್ತಿದ್ದಾರೆ. ಹಳ್ಳದಲ್ಲಿ ಮರಳು ಮಾಫಿಯಾದಿಂದ ಹಳ್ಳ ದಿಣ್ಣೆ, ತಗ್ಗು ಪ್ರದೇಶಗಳು ಸೃಷ್ಟಿಯಾಗಿವೆ. ಆಯ ತಪ್ಪಿ ತಗ್ಗು ಪ್ರದೇಶದಲ್ಲಿ ಕಾಲಿಟ್ಟರೆ ದೇವರೇ ಕಾಪಾಡಬೇಕು ಅವರನ್ನು.

ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳಿಗೆ ಇಂತಹ ನರಕಯಾತನೆ ದರ್ಶನವಾಗುತ್ತಿದೆ. ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಒತ್ತಾಯ ಮಾಡುತ್ತಲೇ ಇದ್ದಾರೆ. ಜನಪ್ರತಿನಿಧಿಗಳ – ಮರಳು ಮಾಫಿಯಾ ನಡೆಸುವವರ ವಿರುದ್ದ ವಿದ್ಯಾರ್ಥಿಗಳು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ:

ಕೊಪ್ಪಳ: ತಳುವಗೇರಾ ಪ್ರೌಢ ಶಾಲೆಗೆ ಹೋಗಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ, ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ನಿಡಶೇಸಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿತ್ಯವೂ ನಿಡಶೇಸಿ ಗ್ರಾಮದಿಂದ ತಳುವಗೇರಾ ಪ್ರೌಢ ಶಾಲೆಗೆ ವಿದ್ಯಾರ್ಥಿಗಳು ಪ್ರಯಾಣ ಮಾಡಬೇಕಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಪೋಟ:

ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಹೊತ್ತಿ ಉರಿದಿದೆ. ಅಲಗೌಡ ಪಾಟೀಲ್ ಎಂಬುವರ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಕುವಿನಿಂದ ಇರಿದು ಇರಿದು ಪತ್ನಿಯನ್ನು ಹತ್ಯೆಗೈದ ಎಂಬಿಎ ಪದವೀಧರ ಪತಿ

ಶಿವಮೊಗ್ಗ ತಾಲೂಕಿನ ದುಮ್ಮಳ್ಳಿ ಗ್ರಾಮದಲ್ಲಿ ಎಂಬಿಎ ಪದವೀಧರ ಪತಿರಾಯ ಚಾಕುವಿನಿಂದ ಇರಿದು ಇರಿದು ಪತ್ನಿಯನ್ನು ಹತ್ಯೆಗೈದಿರುವ ಆರೋಪ ಕೇಳಿಬಂದಿದೆ. 26 ವರ್ಷ ಅಮಿತಾ ಎಂಬಾಕೆಯನ್ನು ಕರುಣಾಕರ (33) ಕೊಲೆಗೈದಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ. ತುಂಗಾನಗರ ಠಾಣೆ ಪೊಲೀಸರು ಆರೋಪಿ ಕರುಣಾಕರನನ್ನು ಬಂಧಿಸಿದ್ದಾರೆ. ಎರಡೂವರೆ ವರ್ಷದ ಹಿಂದೆ ಅಮಿತಾ ಜೊತೆ ವಿವಾಹ ಆಗಿತ್ತು.

 

Published On - 2:38 pm, Tue, 20 September 22