ವಿಧವೆಯೊಬ್ಬಳ ಜತೆ ಪೊಲೀಸಪ್ಪನ ಲವ್ವಿಡವ್ವಿ: 3 ಬಾರಿ ಗರ್ಭಪಾತ, ವಿಧವೆ ಪಾಲಿಗೆ ರಾಕ್ಷಸನಾದ ಆರಕ್ಷಕನ ಕಥೆ

|

Updated on: Apr 06, 2023 | 7:58 AM

5 ವರ್ಷ ಲಿವಿಂಗ್ ಟು ಗೆದರ್, ಮೂರು ಭಾರಿ ಗರ್ಭಪಾತ. ಬಾಳು ಕೊಡ್ತೀನಿ ಎಂದು 5 ವರ್ಷ ಸಂಸಾರ ಮಾಡಿದ್ದ ಪೊಲೀಸಪ್ಪ ಈಗ ಕೈಕೊಟ್ಟಿದ್ದಾನೆ. ವಿಧವೆ ಪಾಲಿಗೆ ರಾಕ್ಷಸನಾದ ಆರಕ್ಷಕನ ಕಥೆ.

ವಿಧವೆಯೊಬ್ಬಳ ಜತೆ ಪೊಲೀಸಪ್ಪನ ಲವ್ವಿಡವ್ವಿ: 3 ಬಾರಿ ಗರ್ಭಪಾತ, ವಿಧವೆ ಪಾಲಿಗೆ ರಾಕ್ಷಸನಾದ ಆರಕ್ಷಕನ ಕಥೆ
Follow us on

ಕೊಪ್ಪಳ: ಆತ ವೃತ್ತಿಯಲ್ಲಿ ಪೊಲೀಸ್ (Police). ಆಕೆ ಬಟ್ಟೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಳು. ಇಬ್ಬರ ಮಧ್ಯೆ ಪ್ರೀತಿ ಶುರುವಾಗಿ ಒಟ್ಟಿಗೆ ಬಾಳುವುದಕ್ಕೆ ಮುಂದಾಗಿದ್ದಾರೆ. ನಿನ್ನನ್ನ ಮಾದುವೆಯಾಗುತ್ತೇನೆ ಎಂದು ಆಕೆಯನ್ನ ನಂಬಿಸಿ ಜತೆಯಲ್ಲಿ ಸಂಸಾರವನ್ನು ಮಾಡಿದ್ದ. ಆದ್ರೆ 5 ವರ್ಷ ಸಂಸಾರ ಮಾಡಿದ್ದವ ಈಗ ಕೈಕೊಟ್ಟಿದ್ದಾನೆ. ಹೌದು.. ಕೊಪ್ಪಳ(Koppal) ಜಿಲ್ಲೆ ಮುನಿರಾಬಾದ್​ IRB ಪೊಲೀಸ್ ಆಗಿರುವ ಯಮನೂರಪ್ಪ, ವಿಧವೆ ಜತೆ ಲವ್ವಿ ಡವ್ವಿ ಆಟ ಆಡಿ ಕೈಕೊಟ್ಟಿರುವ ಆರೋಪ ಹೊತ್ತಿದ್ದಾನೆ. ಈ ಐನಾತಿ ಯಮನೂರಪ್ಪ, ಗಂಡನನ್ನು ಕಳೆದುಕೊಂಡಿದ್ದ ಸುಮಾ(ಹೆಸರು ಬದಲಾಯಿಸಿಲಾಗಿದೆ) ಎನ್ನುವ ಮಹಿಳೆಯೊಬ್ಬಳನ್ನು ಮೋಹಿಸಿದ್ದ. ಅಲ್ಲದೇ ಮದ್ವೆಯಾಗೋದಾಗಿ ನಂಬಿಸಿದ್ದ. ಆಕೆಯೊಂದಿಗೆ 5 ವರ್ಷ ಲಿವಿಂಗ್ ಟು ಗೆದರ್ ಸಂಬಂಧ ಇಟ್ಟುಕೊಂಡಿದ್ದನಂತೆ. ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿದ್ದ ಯಮನೂರಪ್ಪ. ಸುಮಾಳ ಜೊತೆ ಪತಿಯ ರೀತಿ ಜೀವನ ನಡೆಸಿದ್ದಾನಂತೆ. ಕಳೆದ ಐದು ವರ್ಷಗಳಲ್ಲಿ ಮೂರು ಭಾರಿ ಗರ್ಭವತಿಯಾಗಿದ್ದ ಸುಮಾಳಿಗೆ ಸುಳ್ಳು ಹೇಳಿ ಗರ್ಭಪಾತ ಬೇರೆ ಮಾಡಿಸಿದ್ದನಂತೆ. ಮದ್ವೆಗೂ ಮುಂಚೆ ಗರ್ಭಿಣಿಯಾದ್ರೆ ಸಮಾಜ ಒಪ್ಪೋದಿಲ್ಲ ಎಂದು ನಾಟಕ ಮಾಡ್ತಿದ್ದನಂತೆ. ಆದ್ರೆ, ಮತ್ತೊಮ್ಮೆ ಸುಮಾ ಗರ್ಭಿಣಿ ಯಾಗಿದ್ದಾಳೆ. ಮತ್ತೆ ಯಮನೂರಪ್ಪ ಹಳೇ ಚಾಳಿಯನ್ನೇ ಮುಂದುವರೆಸಿದ್ದಾನೆ. ಇದಕ್ಕೆ ಒಪ್ಪದೆ ಮದ್ವೆಯಾಗುವಂತೆ ಹಠ ಹಿಡಿದಿದ್ದಾಳೆ. ಪೇಚಿಗೆ ಸಿಲುಕಿದ ಯಮನೂರಪ್ಪ ವಿಧವೆಗೆ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ.

ಇದನ್ನೂ ಓದಿ: Devanahalli: ಬ್ಯೂಟಿ ಪಾರ್ಲರ್ ಆಂಟಿಗಾಗಿ ಪತ್ನಿಯನ್ನೆ ಕೊಲೆ ಮಾಡಿದನಾ ಗಂಡ? ಮದುವೆಯಾಗಿ ಮಗುವಿದ್ದರೂ ಗಂಡನಿಗೆ ಬೇರೊಂದು ಲವ್ವಿಡವ್ವಿ!

ಬಟ್ಟೆ ಅಂಗಡಿಯಿಟ್ಟುಕೊಂಡು ಜೀವನ ನಡೆಸುತ್ತಿದ್ದ ಸುಮಾಳಿಗೆ ಅದಾಗಲೇ 2 ಮದ್ವೆಯಾಗಿತ್ತು. ಮೊದಲ ಪತಿ ತೀರಿಕೊಂಡ್ರೆ, 2ನೇ ಪತಿ ಡೈವೋರ್ಸ್​ ಪಡೆದುಕೊಂಡಿದ್ದ.. ಮಗುವಿನ ಜೊತೆ ಒಂಟಿಯಾಗಿ ಜೀವನ ನಡೆಸುತ್ತಿದ್ದಳು. ಆದ್ರೆ ಈಕೆಗೆ ಬಾಳು ಕೊಡ್ತೀನಿ ಅಂತಾ ಬಂದ ಪೊಲೀಸ್ ಕಾನ್ಸ್‌ಟೇಬಲ್ ಕೂಡ ನಂಬಿಸಿ ಕೈಕೊಟ್ಟಿದ್ದಾನೆ. ದಿಕ್ಕು ತೋಚದ ಮಹಿಳೆಯ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾಳೆ.

ಸದ್ಯ ಪೊಲೀಸಪ್ಪನ ಲವ್ವಡವ್ವಿ ಕಹಾನಿ ಎಸ್ಪಿ ಕಚೇರಿಗೂ ತಲುಪಿದೆ. ಎಲ್ಲ ಪಡೆದುಕೊಂಡು ನೀನು ಬೇಡ ಎಂತಿರುವ ಪೊಲೀಸ್‌ನಿಂದ ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ಠಾಣೆ ಮೆಟ್ಟಿಲೇರಿದ್ದಾಳೆ. ಅದೇನೆ ಇರಲಿ ಜನರ ಪಾಲಿಗೆ ಆರಕ್ಷರರಾಗಬೇಕಿದ್ದ ಪೊಲೀಸಪ್ಪನೇ ವಿಧವೆ ಪಾಲಿಗೆ ರಾಕ್ಷಸನಾಗಿದ್ದು ನಿಜಕ್ಕೂ ದುರಂತವೇ ಸರಿ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:47 am, Thu, 6 April 23