ರಾಜ್ಯ ಕಾಂಗ್ರೆಸ್ಸಿಗೆ ಯಾರು ಹಿತವರು ಈ ಮೂವರೊಳಗೆ: ಸೋನಿಯಾ ಅಂಗಳಕ್ಕೆ ಪಟ್ಟಿ

|

Updated on: Dec 24, 2019 | 3:50 PM

ದೆಹಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಮೂವರ ಹೆಸರುಗಳನ್ನ ಶಿಫಾರಸು ಮಾಡಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪಟ್ಟಿ ರವಾನಿಸಲಾಗಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಮತ್ತು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಹೆಸರು ಶಿಫಾರಸು ಮಾಡಲಾಗಿದೆ. ಮಧುಸೂದನ ಮಿಸ್ತ್ರಿ ನೇತೃತ್ವದ ಎಐಸಿಸಿ ವೀಕ್ಷಕರ ತಂಡದಿಂದ ಮೂವರ ಹೆಸರು ಶಿಫಾರಸು ಮಾಡಲಾಗಿದ್ದು, ಜನವರಿ ಮೊದಲ ವಾರದಲ್ಲಿ ಸೋನಿಯಾ ನಿರ್ಧಾರ ಸಾಧ್ಯತೆಯಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕೆ.ಹೆಚ್.ಮುನಿಯಪ್ಪ ತೀವ್ರ ಕಸರತ್ತು ನಡೆಸುತ್ತಿದ್ದು, ಹೈಕಮಾಂಡ್​ ಮಟ್ಟದ ನಾಯಕರನ್ನು […]

ರಾಜ್ಯ ಕಾಂಗ್ರೆಸ್ಸಿಗೆ ಯಾರು ಹಿತವರು ಈ ಮೂವರೊಳಗೆ: ಸೋನಿಯಾ ಅಂಗಳಕ್ಕೆ ಪಟ್ಟಿ
Follow us on

ದೆಹಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಮೂವರ ಹೆಸರುಗಳನ್ನ ಶಿಫಾರಸು ಮಾಡಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪಟ್ಟಿ ರವಾನಿಸಲಾಗಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಮತ್ತು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಹೆಸರು ಶಿಫಾರಸು ಮಾಡಲಾಗಿದೆ.

ಮಧುಸೂದನ ಮಿಸ್ತ್ರಿ ನೇತೃತ್ವದ ಎಐಸಿಸಿ ವೀಕ್ಷಕರ ತಂಡದಿಂದ ಮೂವರ ಹೆಸರು ಶಿಫಾರಸು ಮಾಡಲಾಗಿದ್ದು, ಜನವರಿ ಮೊದಲ ವಾರದಲ್ಲಿ ಸೋನಿಯಾ ನಿರ್ಧಾರ ಸಾಧ್ಯತೆಯಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕೆ.ಹೆಚ್.ಮುನಿಯಪ್ಪ ತೀವ್ರ ಕಸರತ್ತು ನಡೆಸುತ್ತಿದ್ದು, ಹೈಕಮಾಂಡ್​ ಮಟ್ಟದ ನಾಯಕರನ್ನು ಮುನಿಯಪ್ಪ ಭೇಟಿಯಾಗ್ತಿದಾರೆ. ಗುಲಾಂ ನಬಿ ಆಜಾದ್, ಎ.ಕೆ.ಌಂಟನಿ, ಅಂಬಿಕಾ ಸೋನಿ ಮುಂತಾದ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

Published On - 3:04 pm, Tue, 24 December 19