ಬಿಜೆಪಿ ಜೊತೆಗೆ ನನ್ನ ಸಂಬಂಧ ಮುಗಿದ ಅಧ್ಯಾಯ: ಕೆಆರ್​ಪಿಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ

ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಗಾಲಿ ಜನಾರ್ದನ ರೆಡ್ಡಿ ಅವರು ಕಟ್ಟಿದ ಕೆಆರ್​ಪಿಪಿ ಪಕ್ಷ ದೊಡ್ಡ ಹೊಡೆತ ನೀಡಿತ್ತು. ಇದರಿಂದಾಗಿ ಎಚ್ಚೆತ್ತ ಬಿಜೆಪಿ, ಗಾಲಿ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಸ್ವತಃ ಜನಾರ್ದನ ರೆಡ್ಡಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಜೊತೆಗೆ ನನ್ನ ಸಂಬಂಧ ಮುಗಿದ ಅಧ್ಯಾಯ: ಕೆಆರ್​ಪಿಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ
ಬಿಜೆಪಿಗೆ ಮರಳಿ ಹೋಗುವ ಬಗ್ಗೆ ಯೋಚನೆ ಮಾಡಿಲ್ಲ ಎಂದ ಗಂಗಾವತಿ ಕೆಆರ್​ಪಿಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ
Edited By: Rakesh Nayak Manchi

Updated on: Nov 25, 2023 | 2:49 PM

ಬೆಂಗಳೂರು, ನ.25: ಬಿಜೆಪಿ ಜೊತೆಗೆ ನನ್ನ ಸಂಬಂಧ ನೂರಕ್ಕೆ ನೂರು ಮುಗಿದ ಅಧ್ಯಾಯ ಎಂದು ಗಂಗಾವತಿ ಕ್ಷೇತ್ರದ ಕೆಆರ್​ಪಿಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhana Reddy) ಹೇಳಿದರು. ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ (BJP) ಗಾಲಿ ಜನಾರ್ದನ ರೆಡ್ಡಿ ಅವರು ಕಟ್ಟಿದ ಕೆಆರ್​ಪಿಪಿ ಪಕ್ಷ ದೊಡ್ಡ ಹೊಡೆತ ನೀಡಿತ್ತು. ಇದರಿಂದಾಗಿ ಎಚ್ಚೆತ್ತ ಬಿಜೆಪಿ, ಗಾಲಿ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಲು ಮುಂದಾಗಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಟಿವಿ9 ಜೊತೆ ಮಾತನಾಡಿದ ಜನಾರ್ದನ ರೆಡ್ಡಿ, ಬಿಜೆಪಿಗೆ ಮರಳಿ ಹೋಗುವುದನ್ನು ನಾನು ಕನಸು ಮನಸಿನಲ್ಲೂ ಯೋಚನೆ ಮಾಡಲ್ಲ. ಕೆಆರ್​ಪಿಪಿ ಪಕ್ಷದ ಸ್ಥಾಪಿಸಿದಾಗ ಯಾರೆಲ್ಲಾ ಎಷ್ಟೇ ಪ್ರಯತ್ನಿಸಿದರೂ ಯಾರ ಜೊತೆಗೂ ನಾನು ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಸ್ವತಂತ್ರವಾಗಿಯೇ ನಾನು ಮುಂದೆ ಹೋಗುತ್ತೇನೆ ಎಂದರು.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಯಾರೂ ನನ್ನ ಸಂಪರ್ಕ ಮಾಡಿಲ್ಲ, ನಾನೂ ಯಾರನ್ನೂ ಸಂಪರ್ಕ ಮಾಡಿಲ್ಲ.ನಾನು ಲೋಕಸಭಾ ಚುನಾವಣೆಗೆ ಸ್ಫರ್ಧೆ ಮಾಡುವುದಿಲ್ಲ. ಆದರೆ, ಎಂಟು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಲಸ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ; ಶ್ರೀರಾಮುಲು ಏನಂದ್ರು ಗೊತ್ತಾ?

ಬಿಜೆಪಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನನ್ನ ಸಹಾಯ ಕೇಳುವ ಪರಿಸ್ಥಿತಿ ಇಂದು ಇಲ್ಲ. ಯಡಿಯೂರಪ್ಪ ಅವರನ್ನು ತಂದೆಯ ಸ್ಥಾನದಲ್ಲಿ ಗೌರವಿಸಿದರೆ, ಶ್ರೀರಾಮುಲು ಅವರನ್ನು ಮಗು ರೂಪದಲ್ಲಿ ನೋಡುತ್ತೇನೆ. ಅವರು ಆಯಾ ಪಕ್ಷದಲ್ಲಿ ಚೆನ್ನಾಗಿರಲಿ ಎಂದು ಬಯಸುತ್ತೇನೆಯೇ ಹೊರತು ಆಹ್ವಾನ ಮಾಡಲ್ಲ ಎಂದರು.

ರಾಜಕೀಯಕ್ಕಾಗಿ ಕೌಟುಂಬಿಕ ಸಂಬಂಧ ಕಡಿದುಕೊಂಡ ವಿಚಾರವಾಗಿ ಮಾತನಾಡಿದ ಜನಾರ್ದನ ರೆಡ್ಡಿ, ರಾಜಕೀಯ, ಸಿದ್ಧಾಂತ ಇಟ್ಟುಕೊಂಡು ನಾನು ಹೋಗುವಾಗ ಯಾವ ಸ್ನೇಹ, ಸಂಬಂಧದ ಪ್ರಶ್ನೆ ಬರುವುದೇ ಇಲ್ಲ. ನನ್ನ ಯೋಚನೆ, ಯೋಜನೆಗಳೇ ಪ್ರತ್ಯೇಕವಾಗಿರುವಾಗ ನನ್ನ ಹಾದಿಯಲ್ಲೇ ನಾನು ಹೋಗುತ್ತೇನೆ. ಯಾರಿಗೆ ಯಾವ ಹಾದಿ ಇಷ್ಟ ಆಗುತ್ತದೋ ಆ ಹಾದಿಯಲ್ಲಿ ಅವರು ಹೋಗಬಹುದು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us