ಕೆಎಸ್ಆರ್​ಟಿಸಿ ಚಾಲಕ ಆತ್ಮಹತ್ಯೆ; ಕೌಟುಂಬಿಕ ಕಲಹ, ಸಂಸ್ಥೆಯ ಸಮಸ್ಯೆ ಎಂದು ಪತ್ರದಲ್ಲಿ ಉಲ್ಲೇಖ

|

Updated on: Feb 11, 2021 | 6:14 PM

ಬಿ.ಸಿ.ರೋಡ್ ಕೆಎಸ್ಆರ್​ಟಿಸಿ ಡಿಪೋದಲ್ಲಿ ಭದ್ರತಾ ವಿಭಾಗದಲ್ಲಿದ್ದ ಚಾಲಕ ಬಾಲಕೃಷ್ಣ ಎಂಬಾತ ಹೊರವಲಯದ ತೊಕ್ಕೊಟ್ಟುವಿನ ರೈಲ್ವೆ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಎಸ್ಆರ್​ಟಿಸಿ ಚಾಲಕ ಆತ್ಮಹತ್ಯೆ; ಕೌಟುಂಬಿಕ ಕಲಹ, ಸಂಸ್ಥೆಯ ಸಮಸ್ಯೆ ಎಂದು ಪತ್ರದಲ್ಲಿ ಉಲ್ಲೇಖ
ಪ್ರಾತಿನಿಧಿಕ ಚಿತ್ರ
Follow us on

ಮಂಗಳೂರು: ಡೆತ್ ನೋಟ್ ಬರೆದು ಕೆಎಸ್ಆರ್​ಟಿಸಿ ಚಾಲಕ ಕಂ ಸೆಕ್ಯುರಿಟಿ ಗಾರ್ಡ್ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡ ನೌಕರ ಬಾಲಕೃಷ್ಣ ಎಂದು ತಿಳಿದುಬಂದಿದೆ.

ಬಿ.ಸಿ.ರೋಡ್ ಕೆಎಸ್ಆರ್​ಟಿಸಿ ಡಿಪೋದಲ್ಲಿ ಭದ್ರತಾ ವಿಭಾಗದಲ್ಲಿದ್ದ ಬಾಲಕೃಷ್ಣ ಎಂಬಾತ ಹೊರವಲಯದ ತೊಕ್ಕೊಟ್ಟುವಿನ ರೈಲ್ವೆ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮೊದಲು ಡೆತ್ ನೋಟ್ ಬರೆದ ಬಾಲಕೃಷ್ಣ, ಸಂಸ್ಥೆ ನನಗೆ ಬದುಕಲು ಬಿಡುತ್ತಿಲ್ಲ. ಈ ತರಹ ಹಿಂಸೆ ಯಾರಿಗೂ ಕೊಡಬೇಡಿ ಅಂತಾ ಉಲ್ಲೇಖ ಮಾಡಿದ್ದು, ಕೌಟುಂಬಿಕ ಕಲಹದ ಬಗ್ಗೆಯೂ ತಿಳಿಸಿದ್ದಾರೆ. ಜೊತೆಗೆ ಡೆತ್ ನೋಟ್​ನಲ್ಲಿ ತನ್ನ ಸಹೋದರನ ವಿರುದ್ಧವು ಅಸಮಾಧಾನ ಹೊರಹಾಕಿದ್ದಾರೆ.

ಡೆತ್ ನೋಟ್ ಬರೆದ ಕೆಎಸ್​ಆರ್​ಟಿಸಿ ಚಾಲಕ ಬಾಲಕೃಷ್ಣ

 

ಇದನ್ನೂ ಓದಿ: Drug Case​: ಡ್ರಗ್​ ಕೇಸ್​ನಲ್ಲಿ CCB ಬಿಜಿಯಾಗಿದ್ದಾಗ ಸ್ಟಾರ್ ಹೋಟೆಲ್​ನಲ್ಲಿ ನಡೆಯುತ್ತಿತ್ತು ಹೈಫೈ ಡ್ರಗ್​ ಪಾರ್ಟಿಗಳು! 5 ಮಂದಿ ಅರೆಸ್ಟ್