ಉಚಿತ ಬಸ್ ಪಾಸ್ ಸೇರಿದಂತೆ ಪತ್ರಕರ್ತರ ಹಕ್ಕೊತ್ತಾಯಗಳ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಿದ KUWJ

| Updated By: Rakesh Nayak Manchi

Updated on: Feb 06, 2024 | 7:49 PM

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಉಚಿತ ಬಸ್ ಪಾಸ್ ಸೇರಿದಂತೆ ಪತ್ರಕರ್ತರ ಹಕ್ಕೊತ್ತಾಯಗಳ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಗ್ರಾಮಾಂತರ ಪ್ರದೇಶದ ಪತ್ರಕರ್ತರು ಸೇರಿದಂತೆ ಎಲ್ಲಾ ಕಾರ್ಯನಿರತ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಸೌಲಭ್ಯವನ್ನು ಕಲ್ಪಿಸಿ ಇದೇ ವರ್ಷದಿಂದಲೇ ಜಾರಿಗೆ ತರುವಂತೆ ಮನವಿ ಮಾಡಿದೆ.

ಉಚಿತ ಬಸ್ ಪಾಸ್ ಸೇರಿದಂತೆ ಪತ್ರಕರ್ತರ ಹಕ್ಕೊತ್ತಾಯಗಳ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಿದ KUWJ
ಉಚಿತ ಬಸ್ ಪಾಸ್ ಸೇರಿದಂತೆ ಪತ್ರಕರ್ತರ ಹಕ್ಕೊತ್ತಾಯಗಳ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಿದ KUWJ (ಸಾಂದರ್ಭಿಕ ಚಿತ್ರ)
Image Credit source: Shutterstock
Follow us on

ಬೆಂಗಳೂರು, ಫೆ.6: ಗ್ರಾಮಾಂತರ ಪ್ರದೇಶದ ಪತ್ರಕರ್ತರು ಸೇರಿದಂತೆ ಎಲ್ಲಾ ಕಾರ್ಯನಿರತ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಸೌಲಭ್ಯವನ್ನು ಕಲ್ಪಿಸಿ ಇದೇ ವರ್ಷದಿಂದಲೇ ಜಾರಿಗೆ ತರುವಂತೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸರ್ಕಾರಕ್ಕೆ ಹಕ್ಕೋತ್ತಾಯ ಮಂಡಿಸಿದ್ದಾರೆ.

ದಾವಣಗೆರೆಯಲ್ಲಿ ಜರುಗಿದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಸರ್ವಾನುಮತದಿಂದ ಅಂಗೀಕರಿಸಿದ ಹಕ್ಕೋತ್ತಾಯಗಳ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಅವುಗಳನ್ನು ಈಡೇರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ; ಪತ್ರಕರ್ತರಿಗೆ ಉಚಿತ ಬಸ್​ ಪಾಸ್: TV9ನ ಜಗದೀಶ್ ಬೆಳ್ಳಿಯಪ್ಪಗೆ ರವಿ ಬೆಳಗೆರೆ ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಸಿದ್ದರಾಮಯ್ಯರಿಂದ ಮಹತ್ವದ ಘೋಷಣೆ

ಪತ್ರಕರ್ತರಿಗಾಗಿಯೇ ಪ್ರತ್ಯೇಕ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಬೇಕು. ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಬೇಕು. ಟೋಲ್‌ಗಳಲ್ಲಿ ಪತ್ರಕರ್ತರ ವಾಹನಗಳಿಗೆ ಉಚಿತ ಪ್ರವೇಶ ನೀಡಬೇಕು. ಪಿಯುಸಿ ಮತ್ತು ಪದವಿ ಓದುತ್ತಿರುವ ಪತ್ರಕರ್ತರ ಮಕ್ಕಳಿಗೆ ಲ್ಯಾಪ್ ಟ್ಯಾಪ್ ನೀಡಬೇಕು. ತಾಲ್ಲೂಕು, ಜಿಲ್ಲೆ ಹಾಗೂ ನಗರ ಮತ್ತು ಮಹಾನಗರಗಳಲ್ಲಿ ಪತ್ರಕರ್ತರಿಗಾಗಿ ರಿಯಾಯಿತಿ ದರದಲ್ಲಿ ನಿವೇಶನ/ಮನೆ ಕೊಡಬೇಕು ಎಂದಿದ್ದಾರೆ.

ಪತ್ರಕರ್ತರ ಸಮ್ಮೇಳನ ಆಯೋಜನೆಗೆ (ಸಾಹಿತ್ಯ ಸಮ್ಮೇಳನಕ್ಕೆ ನೆರವು ನೀಡುವಂತೆ) ಸರ್ಕಾರದಿಂದ ಕನಿಷ್ಠ 50 ಲಕ್ಷ ರೂ. ನೆರವು ನೀಡಬೇಕು. ಪತ್ರಕರ್ತರ ಭವನಗಳನ್ನು ಕಾರ್ಯ ನಿರತ ಪತ್ರಕರ್ತರ ಸಂಘಟನೆಯಾದ ಕೆಯುಡಬ್ಲ್ಯೂಜೆ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳೇ ನಿರ್ವಹಣೆ ಮಾಡುವಂತೆ ಸರ್ಕಾರಿ ಆದೇಶ ಹೊರಡಿಸಬೇಕು ಎಂಬ ಹಕ್ಕೋತ್ತಾಯಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ