ಕಾಂಗ್ರೆಸ್ ಪಾಳಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರೇಸ್ ಶುರು

|

Updated on: Dec 10, 2019 | 11:24 AM

ಬೆಂಗಳೂರು: ನಿನ್ನೆ ಉಪಚುನಾವಣೆಯಲ್ಲಿ ಸೋಲು ಕಂಡ ಮೇಲೆ ಕಾಂಗ್ರೆಸ್​ನಲ್ಲಿ ದೊಡ್ಡ ಬದಲಾವಣೆಯಾಗಿತ್ತು. ಪಕ್ಷದಲ್ಲಿ ಎರಡು ಪ್ರಮುಖ ವಿಕೆಟ್​ಗಳು ತಮ್ಮ ಅಧಿಕಾರಕ್ಕೆ ರಾಜಿನಾಮೆ ನೀಡಿದ್ರು. ಸಿದ್ದರಾಮಯ್ಯ ಸಿಎಲ್​ಪಿ ನಾಯಕ ಸ್ಥಾನ ಹಾಗೂ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ, ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಇದೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಾಳಯದಲ್ಲಿ ರೇಸ್ ಆರಂಭವಾಗಿದೆ. ಈ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಡಿಕೆಶಿ ಲಾಬಿ ಮಾಡಿದ್ರು. ಆದರೆ ಇಡಿಯಿಂದ ಅಧ್ಯಕ್ಷ ಸ್ಥಾನಕ್ಕೆ ಕೈತಪ್ಪಿತ್ತು. […]

ಕಾಂಗ್ರೆಸ್ ಪಾಳಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರೇಸ್ ಶುರು
Follow us on

ಬೆಂಗಳೂರು: ನಿನ್ನೆ ಉಪಚುನಾವಣೆಯಲ್ಲಿ ಸೋಲು ಕಂಡ ಮೇಲೆ ಕಾಂಗ್ರೆಸ್​ನಲ್ಲಿ ದೊಡ್ಡ ಬದಲಾವಣೆಯಾಗಿತ್ತು. ಪಕ್ಷದಲ್ಲಿ ಎರಡು ಪ್ರಮುಖ ವಿಕೆಟ್​ಗಳು ತಮ್ಮ ಅಧಿಕಾರಕ್ಕೆ ರಾಜಿನಾಮೆ ನೀಡಿದ್ರು. ಸಿದ್ದರಾಮಯ್ಯ ಸಿಎಲ್​ಪಿ ನಾಯಕ ಸ್ಥಾನ ಹಾಗೂ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ, ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಇದೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಾಳಯದಲ್ಲಿ ರೇಸ್ ಆರಂಭವಾಗಿದೆ.

ಈ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಡಿಕೆಶಿ ಲಾಬಿ ಮಾಡಿದ್ರು. ಆದರೆ ಇಡಿಯಿಂದ ಅಧ್ಯಕ್ಷ ಸ್ಥಾನಕ್ಕೆ ಕೈತಪ್ಪಿತ್ತು. ಈ ಬಾರಿ ಡಿಕೆ ಶಿವಕುಮಾರ್ ಪೈಪೂಟಿ ಮಾಡಲಿದ್ದು, ಡಿಕೆಶಿ ಜೊತೆ ಎಂಬಿ ಪಾಟೀಲ್ ಹೆಸರು ಸಹ ಪ್ರಸ್ತಾಪವಾಗಿದೆ. ಇಬ್ಬರೂ ನಾಯಕರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಯತ್ನ ನಡೆಸುವ ಸಾದ್ಯತೆ ಹೆಚ್ಚಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂಬಿ ಪಾಟೀಲ್ ಕೂಡಾ ಪ್ರಭಲ ಸ್ಪರ್ಧಿಯಾಗಿದ್ದಾರೆ. ಲಿಂಗಾಯತ ಸಮೂದಾಯದ ಬೆಂಬಲ ಎಂಬಿ ಪಾಟೀಲ್​ಗೆ ಇದೆ. ಸಿಎಂ ಬಿಎಸ್‌ಯಡಿಯೂರಪ್ಪ ಲಿಂಗಾಯತ ಸಮುದಾಯದ ನಾಯಕ ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಲಿಂಗಾಯತ ಮುಖಂಡನಿಗೆ ಮಣೆ ಹಾಕುತ್ತಾ ಎಂಬುವುದೇ ಪ್ರಶ್ನೆಯಾಗಿದೆ.