ಸಾಹಿತಿ ಹಂಪನಾ ಅವರಿಂದ ಮುಚ್ಚಳಿಕೆ ಬರೆಸಿಕೊಂಡ ಪೊಲೀಸರು; ಘಟನೆ ಬಗ್ಗೆ ಮಂಡ್ಯ SP ವಿಷಾದ

ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ SP ಪರಶುರಾಮ್ ಹಿರಿಯ ಸಾಹಿತಿ, ಹಂಪ ನಾಗರಾಜಯ್ಯ​​ ಅವರು ಠಾಣೆಗೆ ಬಂದು ಹೇಳಿಕೆ ನೀಡುವ ಸನ್ನಿವೇಶ ಉದ್ಭವಿಸಿದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಜೊತೆಗೆ, ಘಟನೆ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸಲು ಮಂಡ್ಯ Dy SPಗೆ ಸೂಚಿಸಿದ್ದಾರೆ.

ಸಾಹಿತಿ ಹಂಪನಾ ಅವರಿಂದ ಮುಚ್ಚಳಿಕೆ ಬರೆಸಿಕೊಂಡ ಪೊಲೀಸರು; ಘಟನೆ ಬಗ್ಗೆ ಮಂಡ್ಯ SP ವಿಷಾದ
ಹಂಪ ನಾಗರಾಜಯ್ಯ (ಎಡ); ಜಿಲ್ಲಾ SP ಮಾಧ್ಯಮ ಪ್ರಕಟಣೆ (ಬಲ)

Updated on: Jan 22, 2021 | 10:57 PM

ಮಂಡ್ಯ: ಸಾಹಿತಿ ಹಂಪ ನಾಗರಾಜಯ್ಯ ಅವ​ರಿಂದ ಮುಚ್ಚಳಿಕೆ ಬರೆಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ SP ಕೆ.ಪರಶುರಾಮ್​ರಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ.

ಇಡೀ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ SP ಪರಶುರಾಮ್ ಹಿರಿಯ ಸಾಹಿತಿ, ಹಂಪ ನಾಗರಾಜಯ್ಯ​​ ಅವರು ಠಾಣೆಗೆ ಬಂದು ಹೇಳಿಕೆ ನೀಡುವ ಸನ್ನಿವೇಶ ಉದ್ಭವಿಸಿದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಜೊತೆಗೆ, ಘಟನೆ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸಲು ಮಂಡ್ಯ Dy SPಗೆ ಸೂಚಿಸಿದ್ದಾರೆ.

ಭಾಷಣದ ವೇಳೆ ಪ್ರಧಾನಿ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಹೀಗೆ ಮಾತನಾಡಿರುವುದು ತಪ್ಪು ಎಂದು ಜ.19ರಂದು ರವಿ ಎಂಬುವವರು ಠಾಣೆಗೆ ದೂರು ನೀಡಿದ್ದರು. ಆ ದೂರಿನನ್ವಯ ಹಂ.ಪ.ನಾಗರಾಜಯ್ಯ ಅವರ ಜೊತೆ ಮಂಡ್ಯ ಪಶ್ಚಿಮ ಠಾಣೆ PSI ದೂರವಾಣಿಯಲ್ಲಿ ಮಾತನಾಡಿದ್ದರು. ಬಳಿಕ ಜ.21ರಂದು ಹಂಪನಾ ಅವರು ಠಾಣೆಗೆ ಹಾಜರಾಗಿದ್ದರು ಎಂದು ಪರಶುರಾಮ್​ ಹೇಳಿದ್ದಾರೆ.

ವಿಚಾರಣೆ ವೇಳೆ ನಾನು ಪ್ರಧಾನಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ರೈತರನ್ನು ಅವರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿಲ್ಲ. ನನಗೆ ನಮ್ಮ ಪ್ರಧಾನ ಮಂತ್ರಿ ಮೇಲೆ ಅಪಾರ ಗೌರವವಿದೆ. ಅವರು ರಾಷ್ಟ್ರದ ಹೆಮ್ಮೆಯ ನಾಯಕರು ಎಂದು ತಿಳಿಸಿದ್ದರು. ಹೀಗಾಗಿ, ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ಡಿವೈಎಸ್‌ಪಿಗೆ ಸೂಚನೆ ನೀಡಿದ್ದೇನೆ ಎಂದು ಮಂಡ್ಯ SP ಕೆ.ಪರಶುರಾಮ್​ರಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ.

ಇತ್ತ, ರೈತರ ಧರಣಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಹಿನ್ನೆಲೆಯಲ್ಲಿ ಹಂಪನಾ ಅವ​ರಿಂದ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿದ್ದರು ಎಂದು ಹೇಳಲಾಗಿದೆ.

ಕೇಂದ್ರದ ನಡೆ ಪ್ರಶ್ನಿಸಿದ್ದಕ್ಕೆ ಪೊಲೀಸರಿಂದ ಹಿರಿಯ ಸಾಹಿತಿ ಹಂ.ಪ. ನಾಗರಾಜಯ್ಯ ವಿಚಾರಣೆ: ಹಲವರ ಖಂಡನೆ