ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಸ್ಥಳ ಪತ್ತೆಹಚ್ಚಿದ ಬೆಂಗಳೂರು ಪೊಲೀಸರು

ಬೆಂಗಳೂರು ನಗರದಲ್ಲಿ ಹೆಣ್ಣು ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡಿಸುತ್ತಿದ್ದ ಜಾಲವನ್ನು ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಪತ್ತೆಹಚ್ಚಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ವೈದ್ಯರೂ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಈ ನಡುವೆ, ಪೊಲೀಸರು ಮಂಡ್ಯದಲ್ಲಿ ಪತ್ತೆಹಚ್ಚಿದ ಆಲೆಮನೆಯಲ್ಲಿ ಲಿಂಗ ಪತ್ತೆ ಮಾತ್ರವಲ್ಲ, ಅಲ್ಲಿ ಹೆಣ್ಣು ಭ್ರೂಣ ಹತ್ಯೆ ಕೂಡ ಮಾಡಲಾಗುತ್ತಿತ್ತು ಎಂಬ ವಿಚಾರ ಬಯಲಿಗೆ ಬಂದಿದೆ.

ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಸ್ಥಳ ಪತ್ತೆಹಚ್ಚಿದ ಬೆಂಗಳೂರು ಪೊಲೀಸರು
ಹೆಣ್ಣು ಭ್ರೂಣಹತ್ಯೆ ಮಾಡಲಾಗುತ್ತಿದ್ದ ಆಲೆಮನೆ
Edited By:

Updated on: Nov 26, 2023 | 11:28 AM

ಮಂಡ್ಯ, ನ.26: ಬೆಂಗಳೂರು ನಗರದ ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಮಂಡ್ಯ ತಾಲೂಕಿನ ಹುಲ್ಲೇನಹಳ್ಳಿ ಹಾಡ್ಯದಲ್ಲಿ ಪತ್ತೆಹಚ್ಚಿದ ಆಲೆಮನೆಯಲ್ಲಿ ಲಿಂಗ ಪತ್ತೆ ಮಾತ್ರವಲ್ಲ, ಅಲ್ಲಿ ಹೆಣ್ಣು ಭ್ರೂಣ ಹತ್ಯೆ (Female Feticide) ಕೂಡ ಮಾಡಲಾಗುತ್ತಿತ್ತು ಎಂಬ ವಿಚಾರ ಬಯಲಿಗೆ ಬಂದಿದೆ.

ಅಲೆಮನೆ ಸುತ್ತಲೂ ಕಬ್ಬಿನಗದ್ದೆಗಳು, ಓಡಾಡಲು ಬಂಡಿಜಾಡು. ಆರೋಪಿ ನವೀನ್​ಗೆ ಸಂಬಂಧಿ ಜಾಗ ಇದಾಗಿದೆ. ಕಬ್ಬಿನಗದ್ದರೆ ಒಳಭಾಗದ ಅಲೆಮನೆ ಪಕ್ಕಸಲ್ಲಿ ಭ್ರೂಣ ಪತ್ತೆ ಜೊತೆ ಹೆಣ್ಣು ಭ್ರೂಣ ಹತ್ಯೆ ಕೂಡ ನಡೆಯುತ್ತಿತ್ತು. ಸಣ್ಣ ಸುಳಿವೂ ಬಿಡದೆ ಆಲೆಮನೆಯಲ್ಲಿ ಕಳೆದ 2 ವರ್ಷಗಳಿಂದ ಭ್ರೂಣ ಲಿಂಗ ಪತ್ತೆ ದಂಧೆ ನಡೆಯುತ್ತಿತ್ತು.

ಇದನ್ನೂ ಓದಿ: ಬೆಂಗಳೂರು: 2 ವರ್ಷದಲ್ಲಿ 900 ಹೆಣ್ಣು ಭ್ರೂಣ ಹತ್ಯೆ: 2 ವೈದ್ಯರು ಸೇರಿದಂತೆ 9 ಆರೋಪಿಗಳ ಬಂಧನ

ಆರೋಪಿಗಳು ಮಧ್ಯವರ್ತಿಗಳಿಂದ ಗರ್ಭಿಣಿಯರ ಸಂಪರ್ಕ‌ ಮಾಡುತ್ತಿದ್ದರು. ಆಲೆಮನೆ ಕೊಠಡಿವೊಂದರಲ್ಲಿ ಸ್ಕ್ಯಾನಿಂಗ್ ಮಷಿನ್ ಇಡಲಾಗಿತ್ತು. ತಮ್ಮ ಸ್ವಂತ ವಾಹನದಲ್ಲಿ ಆಲೆಮನೆಗೆ ಕರೆತಂದು ಸ್ಕ್ಯಾನಿಂಗ್ ನಡೆಸುತ್ತಿದ್ದರು. ಸ್ಕ್ಯಾನಿಂಗ್ ವೇಳೆ ಹೆಣ್ಣು ಭ್ರೂಣ ಎಂದು ತಿಳಿದಾಕ್ಷಣವೇ ಅಬಾರ್ಷನ್ ಮಾಡಲಾಗುತ್ತದೆ.

ಈ ಬಗ್ಗೆ ಆರೋಪಿಗಳು ತನಿಖೆ ವೇಳೆ ಭಯಾನಕ ಸಂಗತಿ ಬಾಯಿ ಬಿಟ್ಟಿದ್ದಾರೆ. ಪೊಲೀಸರು ಈಗಾಗಲೇ ಮಂಡ್ಯದ‌ ನಯನ್, ನವೀನ್ ಹಾಗೂ ಶಿವನಂಜೇಗೌಡ, ವಿರೇಶ್ ಎಂಬವರನ್ನು ಬಂಧಿಸಿದ್ದು, ತನಿಖೆ ಮುಂದುವರಿದಂತೆ ಇಬ್ಬರು ವೈದ್ಯರು ಸೇರಿದಂತೆ ಐವರು ಅರೆಸ್ಟ್ ಆಗಿದ್ದಾರೆ. ಚೆನೈ ಮೂಲದ ಡಾ ತುಳಸಿರಾಮ್, ಮೈಸೂರಿನ ಡಾ. ಚಂದನ್ ಬಲ್ಲಾಳ್, ಚಂದನ್ ಪತ್ನಿ ಮೀನಾ, ಲ್ಯಾಬ್ ಟೆಕ್ನಿಶಿಯನ್ ನಿಸ್ಸಾರ್, ರಿಸಪ್ಷನಿಸ್ಟ್ ರಿಜ್ಮಾ ಬಂಧಿತರಾಗಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ