ಸಿದ್ದರಾಮಯ್ಯ ಒಂದು ಕ್ಷೇತ್ರದಿಂದ ಸ್ಪರ್ಧಿಸಿದರೆ ಸೋಲು ಕಟ್ಟಿಟ್ಟ ಬುತ್ತಿ: ಆದಿನಾಡು ಚಿಕ್ಕಮ್ಮ ದೇವಿ ಸಂದೇಶ

ವಿಪಕ್ಷನಾಯಕ ಸಿದ್ದರಾಮಯ್ಯ ಎರೆಡು ಕ್ಷೇತ್ರದಿಂದ ಸ್ಪರ್ಧೆ ಮಾಡಲೇ ಬೇಕು, ಒಂದು ಕ್ಷೇತ್ರದಿಂದ ಸ್ಪರ್ಧಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಪೂಜಾರಿ ಮೈ ಮೇಲೆ ಬಂದ ಆದಿನಾಡು ಚಿಕ್ಕಮ್ಮ ದೇವಿ ಭವಿಷ್ಯ ನುಡಿದಿದ್ದಾಳೆ

ಸಿದ್ದರಾಮಯ್ಯ ಒಂದು ಕ್ಷೇತ್ರದಿಂದ ಸ್ಪರ್ಧಿಸಿದರೆ ಸೋಲು ಕಟ್ಟಿಟ್ಟ ಬುತ್ತಿ: ಆದಿನಾಡು ಚಿಕ್ಕಮ್ಮ ದೇವಿ ಸಂದೇಶ
Edited By: ವಿವೇಕ ಬಿರಾದಾರ

Updated on: Jan 13, 2023 | 10:59 AM

ಮಂಡ್ಯ: ರಾಜಕೀಯ ನಾಯಕರು ಚುನಾವಣೆಯಲ್ಲಿ ಗೆಲ್ಲಲು ದೇವರ ಮೊರೆ ಹೋಗುತ್ತಾರೆ. ಆದರೆ ಇಲ್ಲಿ ದೇವರೇ ಸ್ವತಃ ನಾಯಕನೋರ್ವನ ರಾಜಕೀಯ ಭವಿಷ್ಯ ನುಡಿದಿದೆ. ಹೌದು ವಿಚಿತ್ರವೆನಿಸಿದರು ಸತ್ಯ, ವಿಪಕ್ಷನಾಯಕ ಸಿದ್ದರಾಮಯ್ಯ (Siddaramaiah) ಈಗಾಗಲೇ ಕೋಲಾರ (Kolar) ಕ್ಷೇತ್ರದಿಂದ ಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಬೇರೆ ಬೇರೆ ಕ್ಷೇತ್ರಗಳ ಅಭಿಮಾನಿಗಳು ನಮ್ಮ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ದುಂಬಾಲು ಬಿದ್ದಿದ್ದಾರೆ. ಆದರೆ ಮಂಡ್ಯದಲ್ಲಿ ಮಾತ್ರ ಉಲ್ಟಾ ಆಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಎರೆಡು ಕ್ಷೇತ್ರದಿಂದ ಸ್ಪರ್ಧೆ ಮಾಡಲೇ ಬೇಕು, ಒಂದು ಕ್ಷೇತ್ರದಿಂದ ಸ್ಪರ್ಧಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಪೂಜಾರಿ ಮೈ ಮೇಲೆ ಬಂದ ಆದಿನಾಡು ಚಿಕ್ಕಮ್ಮ ದೇವಿ, ಸಿದ್ದು ಪುತ್ರ ಯತೀಂದ್ರಗೆ ಸಂದೇಶ ನೀಡಿದೆ.

Mandya: ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡ್ಲೇ ಬೇಕು, ಆದಿನಾಡು ಚಿಕ್ಕಮ್ಮ ದೇವಿಯ ಸಂದೇಶ | #TV9D

ಬಾಹುಬಲ ಎರೆಡು ಕಡೆ ಚಾಚಲೇ

ಸಿದ್ದರಾಮಯ್ಯ ಪುತ್ರ, ಶಾಸಕ ಯತೀಂದ್ರ ಸಿದ್ಧರಾಮಯ್ಯ ಕಳೆದವಾರ ಮಂಡ್ಯ ಜಿಲ್ಲೆಯ ಮಳವಳ್ಳಿಯ ಚೊಟ್ಟನಹಳ್ಳಿ ದೇವಾಲಯಕ್ಕೆ ತೆರಳಿದ್ದರು. ಯತೀಂದ್ರ ಸಿದ್ದರಾಮಯ್ಯ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು. ಈ ವೇಳೆ ಪೂಜಾರಿ ಮೈ ಮೇಲೆ ಬಂದ ಆದಿನಾಡು ಚಿಕ್ಕಮ್ಮ ದೇವಿ “ಬಾಹುಬಲ ಎರೆಡು ಕಡೆ ಚಾಚಲೇ” ಎಂದು ಸಂದೇಶಕೊಟ್ಟಿದೆ. ಆದಿನಾಡು ಚಿಕ್ಕಮ್ಮ ದೇವಿ ಕೊಟ್ಟ ಸಂದೇಶ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us