Mandya News: ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಮಂಡ್ಯದ ವ್ಯಕ್ತಿ

|

Updated on: May 30, 2023 | 10:29 PM

ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಈಗ ಮಂಡ್ಯದಲ್ಲಿ ಚೆಸ್ಕಾಂ ಸಿಬ್ಬಂದಿಯ ತಲೆನೋವಿಗೆ ಕಾರಣವಾಗಿದೆ.

ಮಂಡ್ಯ: ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ (Free Electricity) ಉಚಿತದ ಗ್ಯಾರಂಟಿ ಈಗ ಮಂಡ್ಯದಲ್ಲಿ ಚೆಸ್ಕಾಂ ಸಿಬ್ಬಂದಿಯ ತಲೆನೋವಿಗೆ ಕಾರಣವಾಗಿದೆ. ಜನರು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ವ್ಯಕ್ತಿಯೊಬ್ಬರು ಚೆಸ್ಕಾಂ ಸಿಬ್ಬಂದಿ ಬಳಿ ಶುಲ್ಕ ಪಾವತಿ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಗ್ಯಾರಂಟಿ ಜಾರಿಗೊಳಿಸದಿದ್ದರೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿರುವ ಘಟನೆ ಮಂಡ್ಯದ ಎಲೆಚಾಕನಹಳ್ಳಿಯಲ್ಲಿ ನಡೆದಿದೆ.

ಸಿದ್ದರಾಮಯ್ಯ ಹೇಳಿಲ್ವಾ ನಿಂಗೂ ಫ್ರೀ ನಂಗೂ ಫ್ರೀ ಅಂತಾ ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ವಿದ್ಯುತ್ ಬಿಲ್ ವಸೂಲಿಗೆ ಹೋದ ಚೆಸ್ಕಾಂ ಸಿಬ್ಬಂದಿಗೆ ವ್ಯಕ್ತಿ ಅವಾಜ್ ಹಾಕುತ್ತಿರುವುದು ವಿಡಿಯೋದಲ್ಲಿದೆ.

‘200 ಯೂನಿಯನ್ ಒಳಗೆ ಲೈಟ್ ಬಿಲ್ ವಜಾ ಮಾಡ್ತಾರೆ ಅಂತಾ ಕಾಂಗ್ರೆಸ್‌ಗೆ ಓಟು ಹಾಕಿರೋದು. ಸಿದ್ದರಾಮಯ್ಯ ಅವರೇ ಕಟ್ಟಲ್ಲ ಫ್ರೀ ಅಂದ ಮೇಲೆ ನಾನು ಕಟ್ಟಲ್ಲ. ಸಿದ್ದರಾಮಯ್ಯಗಿಂತ ನಾನು ಶ್ರೀಮಂತ ಅಲ್ಲ, ನಾನು ಕಟ್ಟಲ್ಲ ಅಷ್ಟೇ. ಅದೇನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ. ಫೀಸ್ ಕಿತ್ತಾಕುತ್ತೀರಾ ಕಿತಾಕಿ ನೋಡ್ತೀನಿ ನಾನು. ನಿಂಗೂ ಫ್ರೀ‌ ನಂಗೂ ಅಂತಾ ಸಿದ್ದರಾಮಯ್ಯ ಹೇಳಿದ್ದಕ್ಕೆ ಕಾಂಗ್ರೆಸ್‌ಗೆ ವೋಟ್ ಹಾಕಿರೋದು. ನಿಮಕೆ ತಾಕತ್ ಇದ್ರೆ ಕಂಬಕ್ಕೆ ಹತ್ತಿ ಕಿತ್ತಾಕಿ ನೋಡ್ತೀನಿ. ಯಾವುದೇ ಕಾರಣಕ್ಕೂ ನಾನು ಕರೆಂಟ್ ಬಿಲ್ ಕಟ್ಟಲ್ಲ. ಯಾರನ್ನ ಕರೆದುಕೊಂಡು ಬರ್ತೀರಾ ಕರೆದುಕೊಂಡು ಬನ್ನಿ. ಕರೆಂಟ್ ಬಿಲ್ಲೂ ಕಟ್ಟಲ್ಲ ನಮ್ಮ ಹೆಂಗಸರಿಗೆ ಬಸ್ ಟಿಕೆಟ್ ಸಹ ತಗೊಳೋಲ್ಲ. ಅವರು ಗೃಹ ಲಕ್ಷ್ಮಿ 2 ಸಾವಿರ ಕೊಡಲಿ ಇಲ್ಲ ಬಿಡಲಿ. ಮಾತು ಉಳಿಸಿಕೊಳ್ಳಲ್ಲ ಅಂದ್ರೆ ಸಿಎಂ ಚೇರ್ ಮೇಲೆ ಕೂರಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಕರೆಂಟ್ ಬಿಲ್ ಕಟ್ಟಬೇಕು ಅಂದ್ರೆ ಸಿದ್ದರಾಮಯ್ಯ ಒಂದು ಸೆಕೆಂಡ್ ಚೇರ್ ಮೇಲೆ ಕೂರಬಾರದು, ಸಿದ್ದರಾಮಯ್ಯ ರಾಜೀನಾಮೆ ಕೊಡಲಿ. ವೋಟ್ ಹಾಕಿಸಿಕೊಳ್ಳುವಾಗ ಒಂದು ಹೇಳಿಕೊಡೋದು. ಗೆದ್ದ ಮೇಲೆ ಬೇರೆ ಹೇಳಿಕೆ ಕೊಡೋದಾ ಅವರು, ಯಾವುದೇ ಕಾರಣಕ್ಕೂ ಬಿಲ್ ಕಟ್ಟಲ್ಲ’ ಎಂದು ವ್ಯಕ್ತಿ ಆವಾಜ್ ಹಾಕಿರುವುದು ವಿಡಿಯೋದಲ್ಲಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ