ಈ ಹಿಂದೆ ರಾಜಕಾರಣ ಸೇವೆಯಾಗಿತ್ತು, ಈಗ ವೃತ್ತಿಯಾಗಿದೆ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಳಗೆರೆಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಈ ಹಿಂದೆ ರಾಜಕಾರಣ ಸೇವೆಯಾಗಿತ್ತು, ಆದರೆ ಈಗ ಒಂದು ವೃತ್ತಿಯಾಗಿದೆ. ಎಲ್ಲೂ ಸಿಗದ ಸೌಲಭ್ಯ ರಾಜಕೀಯಲ್ಲಿ ಸಿಗುತ್ತೆ. ಕೈತುಂಬ ಸಂಬಳ ಸಿಗುತ್ತೆ, ಹಾಗಾಗಿ ಜನ ರಾಜಕೀಯಕ್ಕೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಹಿಂದೆ ರಾಜಕಾರಣ ಸೇವೆಯಾಗಿತ್ತು, ಈಗ ವೃತ್ತಿಯಾಗಿದೆ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
Updated By: ಗಂಗಾಧರ​ ಬ. ಸಾಬೋಜಿ

Updated on: Oct 22, 2023 | 3:26 PM

ಮಂಡ್ಯ, ಅಕ್ಟೋಬರ್​​​​​​​ 22: ಈ ಹಿಂದೆ ರಾಜಕಾರಣ ಸೇವೆಯಾಗಿತ್ತು, ಆದರೆ ಈಗ ಒಂದು ವೃತ್ತಿಯಾಗಿದೆ. ಎಲ್ಲೂ ಸಿಗದ ಸೌಲಭ್ಯ ರಾಜಕೀಯಲ್ಲಿ ಸಿಗುತ್ತೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ (Santosh Hegde) ಹೇಳಿದ್ದಾರೆ. ಜಿಲ್ಲೆಯ ಮದ್ದೂರು ತಾಲೂಕಿನ ವಳಗೆರೆಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೈತುಂಬ ಸಂಬಳ ಸಿಗುತ್ತೆ, ಹಾಗಾಗಿ ಜನ ರಾಜಕೀಯಕ್ಕೆ ಬರುತ್ತಿದ್ದಾರೆ. ಜಡ್ಜ್​ಗಳು, IAS, IPS ಅಧಿಕಾರಿಗಳು ರಾಜಕಾರಣಕ್ಕೆ ಬರುತ್ತಿದ್ದಾರೆ. ರಾಜಕಾರಣದಲ್ಲಿ ಹಣ ಅಧಿಕಾರವಿದೆ, ಸೇವೆ ಮಾಡೋಕೆ ಬರುತ್ತಿಲ್ಲ ಎಂದು ಹೇಳಿದ್ದಾರೆ.

ಎಲ್ಲೂ ಸಿಗದ ಸೌಲಭ್ಯ ರಾಜಕೀಯದಲ್ಲಿ ಸಿಗುತ್ತೆ, ಅದಕ್ಕಾಗಿ ಬರುತ್ತಿದ್ದಾರೆ. ರಾಜಕೀಯ ಸೇವೆಯಾಗಬೇಕು, ಸೇವೆ ಮಾಡಲು ರಾಜಕೀಯಕ್ಕೆ ಬರಬೇಕು. ಸಂಸತ್, ವಿಧಾನಸಭೆಯಲ್ಲಿ ವರ್ಷದಲ್ಲಿ 100 ದಿನ ಚರ್ಚೆ ಮಾಡುವುದಿಲ್ಲ. ಜನಪ್ರತಿನಿಧಿಗಳಿಗೆ 12 ತಿಂಗಳು ಸಂಬಳ ಕೊಡುತ್ತಾರೆ, ಪೆನ್ಷನ್ ಕೊಡುತ್ತಾರೆ. ಅವರಿಂದ ಏನು ಸಹಾಯವಾಗುತ್ತಿದೆ ಎಂದು ಮತದಾರರು ಪ್ರಶ್ನಿಸಬೇಕು ಎಂದಿದ್ದಾರೆ.

ತಮಿಳುನಾಡಿಗೆ ನೀರು ಹರಿಸಿ ನಮ್ಮವರನ್ನು ಕೊಲ್ಲಲು ಸಾಧ್ಯವಿಲ್ಲ

ಕಾವೇರಿ ನೀರು ವಿವಾದದ ಕುರಿತಾಗಿ ಮಾತನಾಡಿದ ಅವರು, ತಮಿಳುನಾಡಿಗೆ ನೀರು ಹರಿಸಿ ನಮ್ಮವರನ್ನು ಕೊಲ್ಲಲು ಸಾಧ್ಯವಿಲ್ಲ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕಡಿಮೆ ಪ್ರಮಾಣದ ನೀರಿದೆ. ಬೆಂಗಳೂರಿನ ಜನರಿಗೆ ಕುಡಿಯುವ ನೀರು ಪೂರೈಸಬೇಕಾಗಿದೆ. ಕಾವೇರಿ ನೀರಿನ ವಿಚಾರದಲ್ಲಿ ಕೋರ್ಟ್​ನಿಂದ ಪರಿಹಾರ ಸಿಗುವುದಿಲ್ಲ. ಸ್ವತಂತ್ರ ಸಮಿತಿ ರಚಿಸಿ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದರು.

ಇದನ್ನೂ ಓದಿ: ಮಂಡ್ಯದಲ್ಲಿ ಮುಂದುವರೆದ ಕಾವೇರಿ ಕಿಚ್ಚು: ರಾಷ್ಟ್ರೀಯ ಜಲನೀತಿ ಜಾರಿಗೆ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹ

ಸ್ವತಂತ್ರ ಸಮಿತಿ ಜಲಾಶಯಗಳಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ನಮ್ಮ ಡ್ಯಾಮ್​ಗಳಲ್ಲಿ ಹೆಚ್ಚು ನೀರಿದ್ದರೆ ತಮಿಳುನಾಡಿಗೆ ಹರಿಸಲಿ. ಇಲ್ಲದಿದ್ದರೆ ಯಾಕೆ ನೀರು ಹರಿಸಬೇಕು. ತಮಿಳುನಾಡಿಗೆ ನೀರು ಹರಿಸಿ ನಮ್ಮವರನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಮುಂದುವರೆದ ಕಾವೇರಿ ಕಿಚ್ಚು; ಅನ್ನದಾತನ ವಿಭಿನ್ನ ರೀತಿ ಹೋರಾಟ

ಡಿಸಿಎಂ ಡಿಕೆ ಶಿವಕುಮಾರ್​​ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಪ್ರಕರಣ ಕೋರ್ಟ್​ನಲ್ಲಿದೆ ಇದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಐಟಿ ದಾಳಿ ಪ್ರಕರಣದಲ್ಲಿ ಶಿಕ್ಷೆಯಾದರೆ ಆ ಹಣ ಸರ್ಕಾರಕ್ಕೆ ಹೋಗುತ್ತೆ. ಒಂದು ವೇಳೆ ಖುಲಾಸೆಯಾದರೆ ಆ ಹಣ ವಾಪಸ್ ಹೋಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:24 pm, Sun, 22 October 23