ಧಾರವಾಡ: ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಹಾಲಿನ ವಾಹನ ಪಲ್ಟಿಯಾದ ಘಟನೆ
ಧಾರವಾಡ ನಗರದ ವಿದ್ಯಾಗಿರಿ ಬಡಾವಣೆಯಲ್ಲಿ ನಡೆದಿದೆ. ಕೆಎಂಎಫ್‌ಗೆ ಹಾಲು ಸಾಗಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಸುಮಾರು 1 ಸಾವಿರ ಲೀಟರ್ ಹಾಲು ರಸ್ತೆ ಪಾಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಹಳಿಯಾಳದಿಂದ ಧಾರವಾಡಕ್ಕೆ ಬಂದಿದ್ದ ಹಾಲಿನ ವಾಹನ ಇದಾಗಿದ್ದು, ಜೆ.ಎಸ್.ಎಸ್. ಕಾಲೇಜಿನ ಎದುರು ಬೀದಿ ನಾಯಿ ಅಡ್ಡ ಬಂದಿದ್ದನ್ನು ತಪ್ಪಿಸಲು ಮುಂದಾದಾಗ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಸದ್ಯ ಈ ಸಂಬಂಧ ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆಯಲ್ಲಿ ವಾಹನ ಓಡಾಡುವಾಗ ಅಡ್ಡ ಬಂದು ಅವಾಂತರಕ್ಕೆ ಕಾರಣವಾದ ಅದೇಷ್ಟೋ ಘಟನೆಗಳು ಈ ಹಿಂದೆ ಕೂಡ ನಡೆದಿದೆ.
ಅಡ್ಡ ಬಂದ ನಾಯಿ:
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಲಗಟ್ಟ ಗ್ರಾಮದ ಬಳಿ ಆಟೋ ಪಲ್ಟಿಯಾಗಿ, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಮರಿಕುಂಟೆ ಗ್ರಾಮದ ಚಾಲಕ ಶಶಿ (23) ಮೃತ ದುರ್ದೈವಿ. ಆಟೋದಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಸ್ತೆಯಲ್ಲಿ ಅಡ್ಡ ಬಂದ ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ಆಟೋ ಪಲ್ಟಿಯಾಗಿದೆ.
ಡ್ರಾಪ್ ತೆಗೆದುಕೊಂಡಿದ್ದ ಮಹಿಳೆಯೂ ಸಾವು, ನಾಯಿನೂ ಸಾವು
ನಾಯಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ನಡೆದಿತ್ತು. ನಿಗದಿ ಗ್ರಾಮದ ಗಿರಿಶಾದ್ ಚಪ್ಪರಾರ್(43) ಮೃತಪಟ್ಟಿದ್ದು, ಕೂಲಿ ಕೆಲಸಕ್ಕೆಂದು ಧಾರವಾಡಕ್ಕೆ ಹೊರಟ್ಟಿದ್ದ ಮಹಿಳೆ ಪ್ರಕಾಶ್ ಎಂಬುವವ ಬೈಕ್‌ನಲ್ಲಿ ಡ್ರಾಪ್ ಕೇಳಿದ್ದರು. ಅದಕ್ಕೆ ಒಪ್ಪಿದ ಪ್ರಕಾಶ್ ಆಕೆಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗುವಾಗ ಬೈಕ್ಗೆ ನಾಯಿ ಅಡ್ಡ ಬಂದಿದೆ. ಈ ಪರಿಣಾಮ ಅಪಘಾತ ಸಂಭವಿಸಿದೆ. ಇನ್ನು, ನಾಯಿ ಕೂಡ ಸಾವನ್ನಪ್ಪಿದ್ದು, ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ಆಟೋ ಪಲ್ಟಿ, ಚಾಲಕ ಸ್ಥಳದಲ್ಲೇ ಸಾವು
ದುರ್ವಿಧಿ.. ಅಡ್ಡ ಬಂದ ನಾಯಿಗೆ ಬೈಕ್ ಡಿಕ್ಕಿ: ಡ್ರಾಪ್ ತೆಗೆದುಕೊಂಡಿದ್ದ ಮಹಿಳೆಯೂ ಸಾವು, ನಾಯಿನೂ ಸಾವು