
ಬಾಗಲಕೋಟೆ: ಕುರುಬ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿನ ಕಾಳಿದಾಸ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಸ್ವಾಮೀಜಿಯೋರ್ವರ ಮಾತಿಗೆ ಈಶ್ವರಪ್ಪ ಅಸಮಾಧಾನಗೊಂಡಿದ್ದಾರೆ.
ಕನಕಗುರುಪೀಠದ ಶಾಖಾಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ಇವತ್ತಿನ ಬಿಜೆಪಿ ಸರ್ಕಾರ ಕುರುಬರ ಋಣದಲ್ಲಿದೆ. ಆ ಋಣವನ್ನು ತೀರಿಸುವ ಕೆಲಸವನ್ನು ಯಡಿಯೂರಪ್ಪನವರು ಮಾಡಬೇಕು. ಸರ್ಕಾರ ರಚಿಸಲು ಕಾರಣರಾದ ನಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡುತ್ತಾರೆಂದು ಕಾಯುತ್ತ ಇದ್ದೇವೆ. ಆದರೆ ಸಿಎಂ ಯಾಕೋ ವಿಳಂಬ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಅಷ್ಟಕ್ಕೇ ಸುಮ್ಮನಾಗದೆ, ಮಾತು ತಪ್ಪಿರುವವರು ಅನೇಕ ಕಡೆ ಸರ್ಕಾರ ಕಳೆದುಕೊಂಡಿದ್ದಾರೆ. ಆ ಪರಿಸ್ಥಿತಿ ನಿಮಗೂ ಬರಬಾರದು. ಇಲ್ಲಿ ಈಶ್ವರಪ್ಪ ಇದ್ದಾರೆ ಎಂದ ಮಾತ್ರಕ್ಕೆ ನಾವು ಬಿಜೆಪಿ ಪರ ಅಂತಲ್ಲ. ನಾವು ಯಾರ ಪರವಾಗಿಯೂ ಇಲ್ಲ. ಎಸ್ಟಿ ಮೀಸಲಾತಿ ಪರ ಎಂದು ಸ್ವಾಮೀಜಿ ಹೇಳಿದ್ದರು. ಆದರೆ ಸ್ವಾಮೀಜಿಯವರ ಈ ಮಾತಿಗೆ ಈಶ್ವರಪ್ಪನವರು ಗರಂ ಆಗಿದ್ದಾರೆ. ನೀವು ಹೀಗೆಲ್ಲ ಮಾತನಾಡೋದು ಸರಿಯಲ್ಲ ಸ್ವಾಮೀಜಿ ಎಂದು ನೇರವಾಗಿಯೇ ಹೇಳಿದ್ದಾರೆ. ಈ ವೇಳೆ ಇವರಿಬ್ಬರ ಮಧ್ಯೆಯೂ ಸ್ವಲ್ಪಮಟ್ಟಿಗೆ ಮಾತಿಗೆ ಮಾತು ಬೆಳೆದಿತ್ತು.
Published On - 5:13 pm, Sun, 29 November 20