ತುಮಕೂರು: ಮಹಾಮಾರಿ ಕೊರೊನಾ ದೇಶದಾದ್ಯಂತ ಲಗ್ಗೆ ಇಟ್ಟಿದೆ. ಕೊರೊನಾ ಎರಡನೇ ಅಲೆಯಿಂದ ಅದೆಷ್ಟೋ ಬಡಪಾಯಿಗಳ ಜೀವ ಹೋಗಿದೆ. ಪೋಷಕರು, ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿ ಮನೆ ಮಂದಿ ಕಂಗಾಲಾಗಿದ್ದಾರೆ. ಅಲ್ಲದೇ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದಾಗ ಸೋಂಕಿತರು ಭಯದಿಂದ ಆತ್ಮಹತ್ಯೆಯಂತಹ ಕೆಟ್ಟ ದಾರಿಯನ್ನು ಹಿಡಿಯುತ್ತಿದ್ದಾರೆ. ಮಾನಸಿಕವಾಗಿ ಕುಗ್ಗುವ ಜೀವಿಗಳಿಗೆ ಧೈರ್ಯ ಹೇಳಬೇಕು. ಅವರ ಮನಸ್ಸು ಉಲ್ಲಾಸವಾಗುವಂತೆ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕರಾದ ಗೌರಿಶಂಕರ್ ಕೊರೊನಾ ಸೋಂಕಿತರಿಗೆ ಸುಗಮ ಸಂಗೀತವನ್ನು ಆಯೋಜಿಸಿದರು.
ತುಮಕೂರು ತಾಲೂಕಿನ ಕೋಡಿಮುದ್ದನಹಳ್ಳಿ ಗ್ರಾಮದ ಬಳಿಯಿರುವ ಕೊವಿಡ್ ಕೇರ್ ಸೆಂಟರ್ನಲ್ಲಿ ಸುಗಮ ಸಂಗೀತವನ್ನು ಆಯೋಜಿಸಲಾಗಿತ್ತು. ಕೊರೊನಾ ಸೋಂಕಿತರಿಗೆ ಧೈರ್ಯ, ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಶಾಸಕ ಗೌರಿಶಂಕರ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದರು. ಸಂಗೀತ ಕಾರ್ಯಕ್ರಮವನ್ನು ತಡರಾತ್ರಿ ಆಯೋಜನೆ ಮಾಡಿದ್ದರು. 150 ಬೆಡ್ಗಳಿರುವ ಕೊವಿಡ್ ಕೇರ್ ಸೆಂಟರ್ನಲ್ಲಿ ನೂರಕ್ಕೂ ಹೆಚ್ಚು ಸೋಂಕಿತರು ಇದ್ದಾರೆ. ಸೋಂಕಿತರಿಗೆ ಪ್ರತಿದಿನ ಉಚಿತವಾಗಿ ವಸತಿ, ಊಟ, ಬಿಸಿ ನೀರು ಹಾಗೂ 32 ಆಕ್ಸಿಜನ್ ಬೆಡ್ಗಳನ್ನು ಶಾಸಕರು ಒದಗಿಸಿದ್ದಾರೆ.
ನರ್ಸ್ ಮಸ್ತ್ ಮಸ್ತ್ ಡ್ಯಾನ್ಸ್
ಕೊಪ್ಪಳ: ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಸಕ್ಕತ್ ಡ್ಯಾನ್ಸ್ ಮಾಡಿದ್ದಾರೆ. ಕೊರೊನಾ ಸೋಂಕಿತ ಅಜ್ಜಿಯ ಕೈ ಹಿಡಿದುಕೊಂಡು ಹೆಜ್ಜೆ ಹಾಕುವ ಮೂಲಕ ಸೋಂಕಿತ ಮಹಿಳೆಗೆ ನರ್ಸ್ ಧೈರ್ಯ ತುಂಬಿದ್ದಾರೆ. ಪಿಪಿಇ ಕಿಟ್ ಹಾಕಿಕೊಂಡು ಜಿಎಸ್ಆರ್ ಖಾಸಗಿ ಆಸ್ಪತ್ರೆಯ ನರ್ಸ್ ಕುಣಿದಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಸೋಂಕಿತರಿಗೆ ಯೋಗ
ಕೊವಿಡ್ ಕೇರ್ ಸೆಂಟರ್ನಲ್ಲಿ ಸೋಂಕಿತರಿಗೆ ಯೋಗಾಸನದ ಮೂಲಕ ಧೈರ್ಯ ತುಂಬುವ ಕೆಲಸ ನಡೆಯುತ್ತಿದೆ. ಗಂಗಾವತಿ ತಾಲೂಕಿನ ಶ್ರೀರಾಮನಗರದ ಕೊವಿಡ್ ಕೇರ್ ಸೆಂಟರ್ನಲ್ಲಿ ಸುಮಾರು 30 ಜನ ಸೋಂಕಿತರಿಗೆ ಯೋಗಾಸನ ಮಾಡಿಸುತ್ತಿದ್ದಾರೆ. ಶ್ರೀರಾಮನಗರಿಂದ ಮರಿಸ್ವಾಮಿ ಎಂಬುವರು ಯೋಗಾಸನ ಹೇಳಿಕೊಡುತ್ತಿದ್ದಾರೆ.
ಇದನ್ನೂ ಓದಿ
ಜೂನ್ 7ರ ನಂತರವೂ ಲಾಕ್ಡೌನ್ ಮುಂದುವರಿಕೆ ಬಹುತೇಕ ಖಚಿತ; ವಾಹನ ಸಂಚಾರಕ್ಕೆ ಷರತ್ತುಬದ್ಧ ಅನುಮತಿ ಸಾಧ್ಯತೆ
ಬ್ಲ್ಯಾಕ್ ಫಂಗಸ್ ಆಯ್ತು, ಈಗ ವೈಟ್ ಫಂಗಸ್ ಆತಂಕ; ಬೆಳಗಾವಿಯಲ್ಲಿ 2 ಪ್ರಕರಣ ಪತ್ತೆ
(MLA Gourishankar hosted a music program to entertain the corona Infected at tumkur)