ಕೊರೊನಾ ಭೀತಿಯಲ್ಲೂ ನಂಜನಗೂಡು ಶ್ರೀಕಂಠೇಶ್ವರ ದೇಗುಲದಲ್ಲಿ ಕೋಟಿ ದಾಟಿದ ಕಾಣಿಕೆ ಸಂಗ್ರಹ

|

Updated on: Dec 25, 2020 | 12:36 PM

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ ಕೇವಲ ಎರಡು ತಿಂಗಳಲ್ಲಿ ಕೋಟಿಗಿಂತಲೂ ಹೆಚ್ಚು ಕಾಣಿಕೆ ಮೌಲ್ಯ ಸಂಗ್ರಹವಾಗಿದೆ.

ಕೊರೊನಾ ಭೀತಿಯಲ್ಲೂ ನಂಜನಗೂಡು ಶ್ರೀಕಂಠೇಶ್ವರ ದೇಗುಲದಲ್ಲಿ ಕೋಟಿ ದಾಟಿದ ಕಾಣಿಕೆ ಸಂಗ್ರಹ
ನಂಜನಗೂಡಿನ ಶ್ರಿಕಂಠೇಶ್ವರ ದೇಗುಲದಲ್ಲಿ ಕೋಟಿ ದಾಟಿದ ಕಾಣಿಕೆ ಸಂಗ್ರಹ
Follow us on

ಮೈಸೂರು: ಕೊರೊನಾ ಭೀತಿಯಲ್ಲಿಯೂ ನಂಜನಗೂಡಿನಲ್ಲಿರುವ ಶ್ರೀಕಂಠೇಶ್ವರ ದೇವಾಲಯದಲ್ಲಿದ್ದ ಒಟ್ಟು 37 ಹುಂಡಿಗಳ ಪೈಕಿ  31 ಹುಂಡಿಗಳಲ್ಲಿ ಕೋಟಿಗಿಂತಲೂ ಹೆಚ್ಚಿನ ಮೌಲ್ಯ ಸಂಗ್ರಹವಾಗಿದೆ.

ಎರಡು ತಿಂಗಳ ಅವಧಿಯಲ್ಲಿ 1 ಕೋಟಿ 98 ಲಕ್ಷದ  47 ಸಾವಿರದ 290 ರೂಪಾಯಿ ಸಂಗ್ರಹ ಹಾಗೂ 77 ಗ್ರಾಂ ಚಿನ್ನ,  5 ಕೆಜಿ 700 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಹುಂಡಿಯಲ್ಲಿ ಒಟ್ಟು 79,700ರೂ. ನಿಷೇಧಿತ ನೋಟುಗಳು ಸಿಕ್ಕಿವೆ. ಇವುಗಳಲ್ಲಿ 1 ಸಾವಿರ ಮೌಲ್ಯದ 12 ನೋಟುಗಳು, 500ರೂ ಮೌಲ್ಯದ 170 ನಿಷೇಧಿತ ನೋಟುಗಳು ಇದ್ದವು.

ಬ್ಯಾಂಕ್ ಆಫ್ ಬರೋಡದ ಹಿರಿಯ ಅಧಿಕಾರಿ ಹರ್ಷ ಹಾಗೂ ನಂಜುಂಡೇಶ್ವರ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ಸಮ್ಮುಖದಲ್ಲಿ ಎಣಿಕೆ ಕಾರ್ಯ ಕೈಗೊಳ್ಳಲಾಗಿದೆ. ಸಹಾಯಕರಾಗಿ 200 ಸ್ವಸಹಾಯ ಸಂಘದ ಮಹಿಳೆಯರು,  50 ಮಂದಿ ದೇವಾಲಯದ ಸಿಬ್ಬಂದಿಗಳು ಸೇರಿದಂತೆ ಒಟ್ಟು 250 ಸಿಬ್ಬಂದಿಗಳನ್ನು ಎಣಿಕೆ ಕಾರ್ಯಕ್ಕೆಂದು ಕರೆಸಲಾಗಿದೆ.

Published On - 12:35 pm, Fri, 25 December 20