ಉರುಳು ಸೇವೆಯ ಮೂಲಕ ಭೈರವೇಶ್ವರ ದೇವಸ್ಥಾನದ ಬೆಟ್ಟವೇರಿದ ಮೈಲಾರಲಿಂಗ ಸ್ವಾಮೀಜಿ

|

Updated on: Jan 05, 2021 | 12:59 PM

ಧಾರವಾಡ ಭಾಗದಲ್ಲಿ ಉರುಳು ಸೇವೆ ಸ್ವಾಮೀಜಿ ಎಂದೇ ಮೈಲಾರಲಿಂಗ ಶ್ರೀಗಳು ಪ್ರಖ್ಯಾತರಾಗಿದ್ದಾರೆ.

ಉರುಳು ಸೇವೆಯ ಮೂಲಕ ಭೈರವೇಶ್ವರ ದೇವಸ್ಥಾನದ ಬೆಟ್ಟವೇರಿದ ಮೈಲಾರಲಿಂಗ ಸ್ವಾಮೀಜಿ
ಉರುಳು ಸೇವೆ ಮಾಡುತ್ತಿರುವ ಮೈಲಾರಲಿಂಗ ಸ್ವಾಮೀಜಿ
Follow us on

ರಾಯಚೂರು:  ಉರುಳು ಸೇವೆ ಮೂಲಕ ಜಿಲ್ಲೆಯ ಸಿಂಧನೂರ ತಾಲೂಕಿನ ಹುಡಾ ಗ್ರಾಮದ ಭೈರವೇಶ್ವರ ದೇವಸ್ಥಾನದ ಬೆಟ್ಟಕ್ಕೆ ಏರಿ, ಉರುಳು ಸೇವೆ ಮೂಲಕವೇ ಮೈಲಾರಲಿಂಗ ಸ್ವಾಮೀಜಿ ಕೆಳಗೆ ಇಳಿದಿದ್ದಾರೆ.

ಧಾರವಾಡದ ಆದಿಶಕ್ತಿ ಎಣ್ಣೆ ಹೊಳೆಮ್ಮದೇವಿ ದೇವಾಲಯದ ಪ್ರಮುಖ ಸ್ವಾಮೀಜಿಯಾಗಿರುವ ಮೈಲಾರಲಿಂಗ ಶ್ರೀಗಳು ಸುಮಾರು 541 ಮೆಟ್ಟಿಲುಗಳ ಮೇಲೆ ಉರುಳುತ್ತಲೇ ಬೆಟ್ಟವೇರಿ, ವಿಶೇಷ ಭಕ್ತಿ ಸಮರ್ಪಣೆ ಮಾಡಿದ್ದರು. ಧಾರವಾಡ ಭಾಗದಲ್ಲಿ ಉರುಳು ಸೇವೆ ಸ್ವಾಮೀಜಿ ಎಂದೇ ಪ್ರಖ್ಯಾತರಾಗಿರುವ ಮೈಲಾರಲಿಂಗ ಸ್ವಾಮೀಜಿ ಈಗಾಗಲೇ ಹತ್ತಾರು ಕಿ.ಮೀ ವರೆಗೆ ಉರುಳು ಸೇವೆ ಮಾಡಿ ಪ್ರಸಿದ್ಧರಾಗಿದ್ದಾರೆ.

ದೇವಿ ಚಾಮುಂಡೇಶ್ವರಿಯ ದರ್ಶನ ಪಡೆದ ‘ಫ್ಯಾಂಟಮ್’ ಸುದೀಪ್, ಅಭಿಮಾನಿಗಳಿಗೆ ಕೈ ಸನ್ನೆ ಮೂಲಕ ಸೈಲೆಂಟ್​ ಎಂದ ಆರಾಧ್ಯದೈವ!